Global Affairs

ಕೆಂಪು ಸಮುದ್ರಕ್ಕಾಗಿ ಬಿಗ್ ಗೇಂ: US–Houthi Talks Explained.!

ಕೆಂಪು ಸಮುದ್ರಕ್ಕಾಗಿ ಬಿಗ್ ಗೇಂ: US–Houthi Talks Explained.!
ಸೌದಿ ಅರೇಬಿಯ ಮತ್ತು ಹೌತಿಗಳ ನಡುವಿನ ಸಂಘರ್ಷ ತಾರಕ್ಕೇರ್ತಾ ಇದೆ..ಹೌತಿಗಳು ಸೌದಿಗೆ ಸೇರಿದ್ದ ಎಫ್ 15 ಯುದ್ದ ವಿಮಾನವನ್ನ ಲೋಕಲ್ ಮೇಡ್ ಮಿಸೈಲ್​ಗಳಲಿಂದ ಹೊಡೆದು ಹಾಕಿರೋದಾಗಿ ಹೇಳ್ತಾ ಇದ್ದಾರೆ. ಹಾಗೆನೇ ಯಾನ್ಭುನಲ್ಲಿನ ಅರಾಮ್ಕೋ ಫೆಸಿಲಿಟಿಗಳ ಮೇಲೂ ಕೂಡಾ ದಾಳಿ ಮಾಡಿರೋದಾಗಿ ಹೌತಿಗಳು ಹೇಳಿಕೆಯನ್ನ ಬಿಡುಗಡೆ ಮಾಡಿದ್ದಾರೆ. ಇದ್ರ ನಡುವೆ ಸೌದಿ ಬೆಂಬಲಿತ ಯೆಮನ್​ನ ಪಡೆಗಳು ಕೂಡ ಹೌತಿಗಳ ಮೇಲೆ ಮರುದಾಳಿ ಮಾಡಿವೆ. ಇದೆಲ್ಲದ್ರ ನಡುವೆ ಸೌದಿ ಅರೇಬಿಯಾಗೆ ಅಮೆರಿಕಾ ಶಾಕ್ ಕೊಟ್ಟಿದೆ. ಇಷ್ಟು ದಿನ ಹೌತಿಗಳ ವಿರುದ್ದ ಮಾತಾಡ್ತಿದ್ದ ಅಮೆರಿಕ ಈಗ ಅದೇ ಹೌತಿಗಳ ಜೊತೆ ಶಾಂತಿ ಮಾತು ಕತೆಯನ್ನ ನಡೆಸೋದ್ರ ಮೂಲಕ ಸೌದಿಯ ಯುವರಾಜ ಎಂಬಿಎಸ್​​ ಗೆ ಪಾಠ ಕಲಿಸೋದಕ್ಕೆ ಮುಂದಾಗಿದೆ. ಹಾಗಾದ್ರೆ, ಗಳಸ್ಯ-ಕಂಠಸ್ಯ ಅನ್ನೋ ಹಾಗಿದ್ದ ಎಂಬಿಎಸ್ ಮತ್ತು ಟ್ರಂಪ್​​​ ನಡುವೆ ಆಗ್ತಾ ಇರೋದೇನು.? ಇಲ್ಲಿ ಹೌತಿಗಳು ಅಮೆರಿಕಾಕ್ಕೆ ಕೊಟ್ಟಿರೊ ಭರವಸೆ ಏನು.? ಹೌತಿಯಂಥಾ ಇರಾನ್ ಬೆಂಬಲಿತ ಬಂಡುಕೋರ ಗುಂಪಿನ ಜೊತೆ ಮಾತಾನಾಡುವ ದರ್ದು ಅಮೆರಿಕಾಕ್ಕೆ ಏನಿತ್ತು ಅನ್ನೋದ್ರ ಬಗ್ಗೆ ಒಂದಷ್ಟು ಮಾಹಿತಿಯನ್ನ ತಿಳಿದುಕೊಳ್ಳೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Raghavendra N
Written By

Raghavendra N

Content Writer

17 years of experience in Media and Digital Media.Expertise in Scripting, Video Production,Documentary Making and ad Films

Comments

No comments yet.