ಕಳೆದ ಕೆಲ ದಿನಗಳಿಂದ ಸಕ್ಕರೆ ಬೆಲೆ ದಿಢೀರನೆ ಹೆಚ್ಚಳ ಕಾಣ್ತಾ ಇದೆ. ಬೆಲ್ಲ ಕೂಡ ತನ್ನ ಬೆಲೆಯನ್ನ ಹೆಚ್ಚು ಕಡಿಮೆ ಶೇಕಡ 40ರಷ್ಟು ಏರಿಕೆ ಮಾಡಿದೆ. ಕಳೆದ ವರ್ಷ ರಿಟೇಲ್ ಮಾರುಕಟ್ಟೆಯಲ್ಲಿ ಕೆಜಿಗೆ 46 ರೂಪಾಯವರೆಗೆ ಇದ್ದ ಸಕ್ಕರೆ ಬೆಲೆ, ಈಗ ಏಕಾಏಕಿ 52 ರೂಪಾಯಿಯನ್ನು ಮುಟ್ಟಿದೆ. ಇದಕ್ಕೆ ಕಾರಣ ಎಥನಾಲ್ಗೆ ಹೆಚ್ಚು ಮಹತ್ವ ಸಿಗ್ತಾ ಇರುವುದರಿಂದ ಸಕ್ಕರೆಯ ಉತ್ಪಾದನೆ ಕಡಿಮೆಯಾಗಿ, ಮಾರುಕಟ್ಟೆಗೆ ಪೂರೈಕೆಯಾಗುವ ಸಕ್ಕರೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಬೆಲೆ ಏರಿಕೆ ಆಗ್ತಾ ಇದೆ ಅಂತ ಕೆಲವರು ಹೇಳ್ತಾ ಇದ್ದಾರೆ. ಆದರೆ ಕಾರಣ ಇದೊಂದೇ ಅಲ್ಲ, ಅಲ್ಲಿ ಹಲವಾರು ಕಾರಣಗಳಿವೆ. ಇದ್ದಕ್ಕಿದ್ದ ಹಾಗೆ ಸಕ್ಕರೆಯ ಬೆಲೆ ಹೆಚ್ಚಾಗ್ತಾ ಇದೆ. 10 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತ ಸಕ್ಕರೆಯನ್ನ ವಿದೇಶಗಳಿಂದ ಆಮದು ಮಾಡಿಕೊಳ್ಳುವದಕ್ಕೆ ಸುಂಕರಹಿತ ವ್ಯವಸ್ಥೆಯನ್ನ ಒದಗಿಸಿಕೊಟ್ಟಿದೆ. ಸಕ್ಕರೆ ದಾಸ್ತಾನಿನ ಮೇಲೆ ಒಂದಷ್ಟು ನಿರ್ಬಂಧಗಳನ್ನ ಹೇರಲಾಗ್ತಾ ಇದೆ. ಮಾರುಕಟ್ಟೆಗೆ ಸಕ್ಕರೆ ಸಾಕಷ್ಟು ಬರೋ ಹಾಗೆ ಮತ್ತು ಬೆಲೆ ಏರಿಕೆ ಆಗದ ಹಾಗೆ ತಡೆಯೋದಕ್ಕೆ ಪ್ರಯತ್ನಗಳು ಕೂಡ ನಡೀತಾ ಇವೆ. ಇದು ಸರ್ಕಾರದ ವೈಫಲ್ಯ ಅಂತ ಪ್ರತಿಪಕ್ಷಗಳು ಮಾತಾಡ್ತಾ ಇವೆ. ಹಾಗಾದರೆ ಏಕಾಏಕಿ ಸಕ್ಕರೆಯ ಅಭಾವ
ಉಂಟಾಗುವುದಕ್ಕೆ ಕಾರಣ ಏನು.? ಎಥನಾಲ್ ಬಳಕೆ ಹೆಚ್ಚಾಗ್ತಾ ಇರುವುದೇ ಸಕ್ಕರೆ ಬೆಲೆ ಏರಿಕೆಗೆ ಕಾರಣನ.? ಸಕ್ಕರೆಯ ಮಾರುಕಟ್ಟೆಯಲ್ಲಿ ಏನಾಗ್ತಾ ಇದೆ.?
ಈ ಸಿಹಿ ಪದಾರ್ಥ ಗ್ರಾಹಕರಿಗೆ ಕಹಿ ಆಗ್ತಾ ಇರುವುದು ಯಾಕೆ.? ಇದೆಲ್ಲವನ್ನ ತಿಳಿದುಕೊಳ್ಳೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Also Read: ಆ ವಾಚ್ಗೆ ಅಷ್ಟೊಂದು ಡಿಮ್ಯಾಂಡ್ ಯಾಕೆ: HMT Watch Craze Returns in Karnataka.!
ಕಹಿ ಆಗ್ತಿದೆ ಸಕ್ಕರೆ: India Sugar Price Rise Explained.!
Written By
M S Raghavendra
Cheif EditorOver 30 Years of Experience in Media. Expertise in Youtube Content Creation, Choosing niche ,Digital Marketing.
Comments
No comments yet.