ಏನಿದು ಜಾಗತಿಕ ಕುಬೇರರ ಜಗಳದ ಕಥೆ: Musk vs Ambani.!
ಎಲಾನ್ ಮಸ್ಕ್ ಅವ್ರ ಸ್ಟಾರ್ ಲಿಂಕ್ ಗೆ ಭಾರತದಲ್ಲಿನ್ನು ಗ್ರಿನ್ ಸಿಗ್ನಲ್ ಸಿಕ್ತಾ ಇಲ್ಲಾ. ಜಗತ್ತಿನ ಅತಿ ದೊಡ್ಡ ಇಂಟರ್ನೆಟ್ ಬಳಕೆದಾರರಿರುವ ಎರಡು ದೇಶಗಳ ಪೈಕಿ ಚೈನಾ ಈಗಾಗಾಲೇ ಸ್ಟಾರ್ ಲಿಂಕ್ನ ಬ್ಲಾಕ್ ಮಾಡಿದೆ. ಹೀಗಾಗಿ ಅಲ್ಲಿ ಅವ್ರಿಗೆ ಬಾಗಿಲು ತೆಗೆಯೋದು ಡೌಟು. ಇನ್ನು ಎರಡನೇದಾಗಿ ಭಾರತ ಇದೆ. ಇಲ್ಲಿ ಪ್ರಜಾಪ್ರಭುತ್ವ ಇದೆ. ಹೇಗಾದ್ರು ಮಾಡಿ ಇಲ್ಲಿ ತನ್ನ ಅಧೀಪತ್ಯ ಸಾಧಿಸಬೇಕು ಅಂತ ಸ್ಟಾರ್ಲಿಂಕ್ ಪ್ರಯತ್ನ ಪಡ್ತಾ ಇದೆ.. ಆದ್ರೆ ಅದು ಸರ್ಕಾರದ ನಿಯಮಗಳನ್ನ ಪೂರ್ಣಗೊಳಿಸದೇ ಇರೋದ್ರಿಂದ, ಅವ್ರಿಗೆ ಇನ್ನು ಭಾರತಕ್ಕೆ ಬರೋದಕ್ಕೆ ಆಗ್ತಾ ಇಲ್ಲ. ಹೀಗಾಗಿ ಫ್ರಸ್ಟ್ರೇಟ್ ಆದಂತೆ ಕಂಡು ಬರ್ತಾ ಇರುವ ಎಲಾನ್ ಮಸ್ಕ್ ಭಾರತಕ್ಕೆ ಸ್ಟಾರ್ ಲಿಂಕ್ ಆಗಮನವನ್ನ ತಡೀತಿರೋದು ಸರ್ಕಾರ ಅಲ್ಲ. ಅಂಬಾನಿ ಅನ್ನೊ ಆರೋಪವನ್ನ ಮಾಡಿದ್ದಾರೆ. ಆದ್ರೆ ಅದ್ಯಾವಾಗ ಅಂಬಾನಿಯನ್ನ ಮಸ್ಕ್ ವಿರೋಧಸಿದ್ರೋ ಆಗ ಪ್ರತಿ ಪಕ್ಷ ನಾಯಕ ರಾಹುಲ್ ಗಾಂಧಿ ಅವ್ರ ಕಣ್ಣುಗಳು ಅರಳಿಬಿಟ್ಟಿವೆ. ಅವ್ರು ವೆಲ್ಕಂ ಟು ಇಂಡಿಯಾ ಅಂತ ಎಲಾನ್ ಮಸ್ಕ್ಗೆ ಕರೆದಿದ್ದಾರೆ. ಇದು ರಾಜಕೀಯ ಕೆಸೆರೆರಚಾಟಕ್ಕೆ ಕಾರಣ ಆಗಿದೆ. ಈ ಬಿಲಿಯನೇರ್ಗಳ ಕಚ್ಚಾಟವನ್ನ ನೋಡ್ತಾ ಇರುವವರಿಗೆ ಇವರಿಬ್ಬರ ಬಗ್ಗೆ ಹೆಚ್ಚು ಕುತೂಹಲ ಉಂಟಾಗದೇ ಇರುತ್ತಾ.. ಹೀಗಾಗಿನೇ ಅಂಬಾನಿ ಮತ್ತು ಮಸ್ಕ್ ಜೀವನಗಾಥೆಯನ್ನ ಸಂಕ್ಷಿಪ್ತವಾಗಿ ನೋಡಲು ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.