ಜಾಗತಿಕ ಹೂಡಿಕೆಯ ಹಬ್ ಆಗ್ತಿದ್ಯಾ ಭಾರತ: UAE Japan to invest in India.!
ಇರಾನ್ ಅಮೆರಿಕಾ ಯುದ್ಧ ಇರಬಹುದು, ಅಲ್ಲಿ ಯುದ್ಧ ಮಾಡ್ತಾ ಇರೋ ದೇಶಗಳಿಗೆ ಅದು ಒಳ್ಳೇದನ್ನ ಮಾಡದೇ ಇರಬಹುದು.. ಯುದ್ಧಗ್ರಸ್ಥ ದೇಶಗಳ ಅಕ್ಕಪಕ್ಕ ಇರೋರ ಮೇಲೆ ಅದರ ಪರಿಣಾಮಗಳು ದೊಡ್ಡಮಟ್ಟದಲ್ಲಿ ಉಂಟಾಗ್ತಾಲೂ ಇರಬಹುದು.. ಹಾಗೇ ಬೇರೆ ಕೆಲ ದೇಶಗಳಿಗೆ ಆ ಯುದ್ಧಗಳು ಒಂದಷ್ಟು ಲಾಭಗಳನ್ನ ಮಾಡಿಕೊಡ್ತಾ ಇವೆ. ರಷ್ಯಾ ಯುಕ್ರೇನ್ ಯುದ್ದ ಭಾರತದಕ್ಕೆ ಕಡಿಮೆ ಬೆಲೆಯಲ್ಲಿ ರಷ್ಯಾದ ತೈಲ ಸಿಗೋ ಹಾಗೆ ಮಾಡಿದ್ದು ಮಾತ್ರ ಅಲ್ಲಾ. ಭಾರತವನ್ನಸಂಸ್ಕರಿಸಿದ ತೈಲ ರಫ್ತು ಮಾಡೋ ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡಕೊಳ್ಳೋ ಹಾಗೆ ಮಾಡ್ತು. ಈಗ ಯುರೋಪಿಗೆ ಅತಿ ಹೆಚ್ಚು ಸಂಸ್ಕರಿಸಿದ ತೈಲ ಸರಬರಾಜು ಮಾಡ್ತಾ ಇರೋದು ಭಾರತ. ಅಷ್ಟೇ ಅಲ್ಲಾ, ಇದೇ ಯುದ್ಧ ರಷ್ಯಾಗೆ ಕೂಡಾ ಭಾರತ ತೈಲ ಸರಬರಾಜು ಮಾಡೋ ಹಾಗೆ ಮಾಡಿದೆ. ಅದರ ಜೊತೆಗೆ ಈಗ ಯು ಎ ಇ ಹಾಗೂ ಜಪಾನ್ ಗಳಿಂದಾ ಕೂಡಾ ಭಾರತಕ್ಕೆ ಶುಭ ಸುದ್ದಿಗಳು ಬರ್ತಾ ಇವೆ. ಯು ಎ ಇ ಭಾರತದಲ್ಲಿ 25 ಬಿಲಿಯನ್ ಡಾಲರ್ ಹಣವನ್ನ ಹೂಡಿಕೆ ಮಾಡೋದಕ್ಕೆ ಮುಂದಾಗ್ತಾ ಇದೆ. ಹಾಗೇ ಜಪಾನ್ ಈ ಹಿಂದೆ ಹೇಳಿದ್ದಂತೆ ಹತ್ತು ಟ್ರಿಲಿಯನ್ ಹೂಡಿಕೆ ಏನಿದೆ ಅದನ್ನ ವೇಗವಾಗಿ ಮಾಡೋದಕ್ಕೆ ಶುರು ಮಾಡಿದೆ. ಹಾಗಾದ್ರೆ ಯು ಎ ಇ ಭಾರತವನ್ನ ಹೂಡಿಕೆಗೆ ಯಾಕೆ ಆಯ್ಕೆ ಮಾಡ್ತಾ ಇದೆ..? ಅವರು ಯಾವ ಕ್ಷೇತ್ರದಲ್ಲಿ ಹೂಡಿಕೆ ಮಾಡೋದಕ್ಕೆ ಹೋಗ್ತಾ ಇದಾರೆ.? ಇದರಿಂದಾ ಭಾರತಕ್ಕೆ ಲಾಭ ಏನು ಅನ್ನೋದರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Written By
M S Raghavendra
Cheif EditorOver 30 Years of Experience in Media. Expertise in Youtube Content Creation, Choosing niche ,Digital Marketing.
Comments
No comments yet.