Bharata

ದೇಶದಲ್ಲಿವೆ ಭಯಾನಕ Black Corridors.!

ದೇಶದಲ್ಲಿವೆ ಭಯಾನಕ Black Corridors.!
ದೇಶದಲ್ಲಿ ಇವತ್ತು ರಸ್ತೆಗಳು ಅದ್ಭುತವಾಗಿ ನಿರ್ಮಾಣ ಆಗ್ತಾ ಇವೆ.. ನ್ಯಾಷನಲ್ ಹೈವೆಗಳು ಮೇಲ್ದರ್ಜೆಗೇರಿವೆ.. ಎಕ್ಸ್ಪ್ರೇಸ್ ವೇಗಳ ನಿರ್ಮಾಣ ಆಗಿವೆ.. ಪ್ರತಿ ಗಂಟೆಗೆ ನೂರಿಪ್ಪುತ್ತು ಕಿಲೋಮೀಟರ್ ವೇಗದಲ್ಲಿ ವಾಹನಗಳನ್ನ ಓಡಿಸಬಲ್ಲ ಬಹಳಷ್ಟು ರಸ್ತೆಗಳು ನಮ್ಮಲ್ಲಿವೆ.. ಹಾಗೆನೇ ಹೆದ್ದಾರಿಯ ಲೆಕ್ಕದಲ್ಲಿ ಭಾರತ ಅಮೆರಿಕಾವನ್ನ ಕೂಡಾ ಹಿಂದಿಕ್ಕಿದೆ.. ಇಷ್ಟಾದ್ರು ದೇಶದಲ್ಲಿ ಕೆಲ ರಸ್ತೆಗಳಲ್ಲಿ ಓಡಾಡೊದಕ್ಕೆ ಭಯ ಆಗುತ್ತೆ.. ಅಲ್ಲಿ ಯಾವುದೇ ಕ್ಷಣದಲ್ಲಿ ಆಕ್ಸಿಡೆಂಟ್ಗಳು ಆಗಿ ಬಿಡಬಹದು ಅನ್ನೋ ಭಯ ಕಾಡುತ್ತೆ.. ಅಂತಹ ಆರು ಸಾವಿರಕ್ಕೂ ಆಧಿಕ ಬ್ಲಾಕ್ ಕಾರಿಡಾರ್ಗಳೂ ನಮ್ಮಲ್ಲಿವೆಯಂತೆ.. ಈ ಬಗ್ಗೆ ಸಂಸತ್ತಿನಲ್ಲಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಾಹಿತಿಯನ್ನ ಕೊಟ್ಟಿದ್ದು , ಬ್ಲಾಕ್ ಕಾರಿಡಾರ್ ಇರುವ ಕಡೆಗಳಲ್ಲಿ ಸುರಕ್ಷಿತ ಕ್ರಮಗಳನ್ನ ಕೈಗೊಳ್ಳಲಾಗುತ್ತೆ ಅನ್ನೋ ಭರವಸೆಯನ್ನ ಕೊಟ್ಟಿದ್ದಾರೆ.. ಇನ್ನು ಬ್ಲಾಕ್ ಕಾರಿಡಾರ್ ಅಂತಂದ್ರೆ ಹೆದ್ದಾರಿಗಳಲ್ಲಿ ಕಮಡು ಬರುವ ಸುಮಾರು ಐನೂರು ಮೀಟರ್ಗಳಷ್ಟು ಉದ್ದದ ಜಾಗ ಅಂತ ಹೇಳಲಾಗುತ್ತೆ.. ಈ ಅರ್ಧ ಕಿಲೋಮೀಟರ್ನಷ್ಟು ದಾರಿಯಲ್ಲಿ ಕಳೆದ ಮೂರು ವರ್ಷದಲ್ಲಿ ಐದು ಅಪಘಾತವಾಗಿದ್ರೆ , ಆ ಅಪಘಾತದಲ್ಲಿ ಸೀರಿಯಸ್ ಇಂಜ್ಯುರಿಗಳಾದ್ರೆ ಅಥವಾ ಹತ್ತು ಸಾವುಗಳು ಆ ಸ್ಟ್ರೇಚ್ನಲ್ಲಿ ಸಂಭವಿಸಿದ್ರೆ ಅದನ್ನ ಬ್ಲಾಕ್ ಕಾರಿಡಾರ್ ಅಂತ ಗುರ್ತಿಸಲಾಗಿದೆಯಂತೆ.. ಹಾಗಾದ್ರೆ ಯಾವ ರಾಜ್ಯದಲ್ಲಿ ಅತಿ ಹೆಚ್ಚು ಬ್ಲಾಕ್ ಕಾರಿಡಾರ್ ಇದೆ.. ನಮ್ಮ ಕರ್ನಾಟಕ ಕೂಡಾ ಈ ಲಿಸ್ಟ್ನಲ್ಲಿ ಇದೆಯಾ ಅನ್ನೋದ್ರ ಬಗ್ಗೆ ತಿಳಿಯೋಕೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
Raghavendra N
Written By

Raghavendra N

Content Writer

17 years of experience in Media and Digital Media.Expertise in Scripting, Video Production,Documentary Making and ad Films

Comments

No comments yet.