ಸಿಂಧೂ ನಾಗರಿಕತೆ ಹೇಗೆ ನಾಶವಾಯಿತು: Indus Valley Civilization.!
ಈ ಜಗತ್ತಿನ ಅತ್ಯಂತ ಪುರಾತನ ನಾಗರಿಕತೆ ಯಾವುದು? ಈ ಪ್ರಶ್ನೆ ಇಂದಿಗೂ ಇತಿಹಾಸಕಾರರು, ಪುರಾತತ್ವ ತಜ್ಞರು ಮತ್ತು ಸಂಶೋಧಕರ ನಡುವೆ ಚರ್ಚೆಯ ವಿಷಯವಾಗಿದೆ. ಕೆಲವರು Egyptian Civilization ಜಗತ್ತಿನ ಮೊದಲ ನಾಗರಿಕತೆ ಎಂದು ಹೇಳಿದರೆ, ಇನ್ನೂ ಕೆಲವರು Mesopotamian Civilization ಅತ್ಯಂತ ಪ್ರಾಚೀನ ಎಂದು ವಾದಿಸುತ್ತಾರೆ. ಆದರೆ ಇತ್ತೀಚಿನ Archaeological Research ಮತ್ತು ಹೊಸ ಪುರಾವೆಗಳು ಮತ್ತೊಂದು ಮಹತ್ವದ ಸತ್ಯದತ್ತ ಬೆರಳು ತೋರಿಸುತ್ತಿವೆ. ಅದೇ Indus Valley Civilization, ಅಂದರೆ Harappan Civilization, ಅಥವಾ ಸಿಂಧೂ–ಸರಸ್ವತಿ ನಾಗರಿಕತೆ. ಸಂಶೋಧಕರ ಪ್ರಕಾರ, ಈ ನಾಗರಿಕತೆಯ ಬೇರುಗಳು ಸುಮಾರು 8,000 ವರ್ಷಗಳಷ್ಟು ಹಿಂದಿನವು. ಹೊಸ ಹೊಸ ಸಂಶೋಧನೆಗಳು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಚ್ಚರಿಯ ಮಾಹಿತಿಗಳು ಹೊರಬರುವ ಸಾಧ್ಯತೆಗಳಿವೆ. ಆದರೆ ಇಲ್ಲಿ ಒಂದು ದೊಡ್ಡ ಪ್ರಶ್ನೆ ಉದ್ಭವಿಸುತ್ತದೆ.
ಇಷ್ಟೊಂದು ಮುಂದುವರಿದ ನಾಗರಿಕತೆ ಏಕಾಏಕಿ ಹೇಗೆ ಕಣ್ಮರೆಯಾಯಿತು? ಇಂದಿನ ಹರಿಯಾಣದ Bhirrana ಹಾಗೂ ಪಾಕಿಸ್ತಾನದ Mehrgarh ಪ್ರದೇಶಗಳಲ್ಲಿ ನಡೆದ ಉತ್ಖನನಗಳು ಕ್ರಿ.ಪೂ. 7500ರಲ್ಲಿಯೇ ಜನರು ಆಹಾರವನ್ನು ಸಂಸ್ಕರಿಸಿ ಬಳಸುತ್ತಿದ್ದರು ಎಂಬುದನ್ನು ಸೂಚಿಸುತ್ತವೆ.
ಅಲ್ಲಿನ ಮನೆಗಳು, ರಸ್ತೆ ವ್ಯವಸ್ಥೆ, ಧಾನ್ಯ ಸಂಗ್ರಹಣಾ ವ್ಯವಸ್ಥೆ ಹಾಗೂ ವಿವಿಧ ವಸ್ತುಗಳು ಅತ್ಯಂತ ಅಭಿವೃದ್ಧಿ ಹೊಂದಿದ ಸಮಾಜದ ಚಿತ್ರಣ ನೀಡುತ್ತವೆ. ಸಿಂಧೂ ನಾಗರಿಕತೆಯ ಸ್ಥಳಗಳಲ್ಲಿ ಪತ್ತೆಯಾದ ವಸ್ತುಗಳು ಸಂಶೋಧಕರನ್ನು ಬೆರಗುಗೊಳಿಸಿವೆ. ಸಿಂಧೂ ನಾಗರಿಕತೆಯ ಸ್ಥಳಗಳಲ್ಲಿ ಪತ್ತೆಯಾದ ವಸ್ತುಗಳು ಸಂಶೋಧಕರನ್ನು ಬೆರಗುಗೊಳಿಸಿವೆ.
ಅವುಗಳಲ್ಲಿ ಪ್ರಮುಖವಾದವು:
ಎತ್ತಿನ ಆಕಾರದ ದೋಣಿಯ ಮಾದರಿ,
ಕಂಚಿನ ನೃತ್ಯಗಾರ್ತಿ, (Dancing Girl)
ಎತ್ತಿನ ಬಂಡಿ,
ಮುದ್ರೆಗಳು, (Seals)
ದೇವತೆಗಳ ಮೂರ್ತಿಗಳು,
ತೂಕದ ಕಲ್ಲುಗಳು,
ಮಣ್ಣಿನ ಪಾತ್ರೆಗಳು,
ಆಭರಣಗಳು,
ಇವು ಆ ಕಾಲದ ಜನರ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಬದುಕಿನ ಬಗ್ಗೆ ಅಮೂಲ್ಯ ಮಾಹಿತಿಯನ್ನು ನೀಡುತ್ತವೆ.
ಸುಮಾರು ಕ್ರಿ.ಪೂ. 1300ರ ವೇಳೆಗೆ, ಈ ಮಹಾನ್ ನಾಗರಿಕತೆಯ ನಗರಗಳು ಒಂದೊಂದಾಗಿ ಖಾಲಿಯಾಗತೊಡಗಿದವು.
ಆದರೆ ದೊಡ್ಡ ಪ್ರಶ್ನೆ ಅಲ್ಲಿದ್ದ ಲಕ್ಷಾಂತರ ಜನರು ಎಲ್ಲಿಗೆ ಹೋದರು?
ಇಲ್ಲಿಯ ತನಕ ಅವರ ಭಾಷೆ ಪತ್ತೆಯಾಗಿಲ್ಲ. ಅವರ ಲಿಪಿಯನ್ನು ಸಂಪೂರ್ಣವಾಗಿ ಓದಲು ಸಾಧ್ಯವಾಗಿಲ್ಲ. ಅವರ ವಂಶಸ್ಥರು ಯಾರು ಎಂಬುದೂ ಸ್ಪಷ್ಟವಾಗಿಲ್ಲ.
ಕೆಲವರು ಭಾರೀ Earthquake ಈ ನಾಗರಿಕತೆಯನ್ನು ನಾಶ ಮಾಡಿರಬಹುದು ಎಂದು ವಾದಿಸುತ್ತಾರೆ.
ಆದರೆ ಸಂಶೋಧಕರು ಹೇಳುವಂತೆ ಎಲ್ಲ ನಗರಗಳಲ್ಲೂ ಭೂಕಂಪದ ಗುರುತುಗಳಿಲ್ಲ. ಹೆಚ್ಚಿನ ಕಟ್ಟಡಗಳು ಒಂದೇ ಸಮಯದಲ್ಲಿ ಕುಸಿದಿರುವ ಪುರಾವೆಗಳು ದೊರೆತಿಲ್ಲ. ಹೀಗಾಗಿ ಈ ಸಿದ್ಧಾಂತ ಸಂಪೂರ್ಣವಾಗಿ ಸಾಬೀತಾಗಿಲ್ಲ.
Indus Valley Civilization ಮಾನವ ಇತಿಹಾಸದ ಅತ್ಯಂತ ಅದ್ಭುತ ಹಾಗೂ ರಹಸ್ಯಮಯ ನಾಗರಿಕತೆಗಳಲ್ಲಿ ಒಂದಾಗಿದೆ.
ಭೂಕಂಪ, ಪ್ರವಾಹ, ಬರಗಾಲ, ಯುದ್ಧ, ವಲಸೆ, ಅಥವಾ ಇನ್ನಾವುದೋ ಅಜ್ಞಾತ ಕಾರಣ—ಯಾವುದು ಇದರ ಪತನಕ್ಕೆ ಕಾರಣವಾಯಿತು ಎಂಬುದರ ಕುರಿತು ಸಂಶೋಧನೆಗಳು ಇನ್ನೂ ಮುಂದುವರಿಯುತ್ತಿವೆ. ಬಹುಶಃ ಮುಂದಿನ ಪುರಾತತ್ವ ಆವಿಷ್ಕಾರಗಳು ಈ ಮಹಾನ್ ನಾಗರಿಕತೆಯ ಕೊನೆಯ ಅಧ್ಯಾಯವನ್ನು ನಮ್ಮ ಮುಂದೆ ತೆರೆದಿಡಬಹುದು.
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.