ರಾವಣ..(Ravan) ಆ ಹೆಸ್ರು ಕೇಳಿದ್ರೆನೇ ಸಾಕಷ್ಟು ಜನ್ರು ರೋಮಾಂಚನಗೊಳ್ತಾರೆ.. ಅವನ ವೈಭೋಗ, ಆಡಳಿತ, ತನ್ನ ಜನರನ್ನ ಕಾಪಾಡಿದ್ದ ರೀತಿ ಹಾಗೇನೇ ಅವನ ವಿದ್ಯೆಗಳು ಸಾಕಷ್ಟು ಜನರಿಗೆ ಇಷ್ಟ ಕೂಡಾ ಆಗಿದ್ವು .. ಆದೇ ರೀತಿ ರಾವಣ(Ravan) ಅತ್ಯಂತ ಶಕ್ತಿಶಾಲಿಯಾಗಿದ್ದ.. ಅವನನ್ನ ಸೋಲಿಸೋದಕ್ಕೆ ಯಾರಿಂದಲೂ ಆಗ್ತಾ ಇರಲಿಲ್ಲ. ಅವನು ಮೂರು ಲೋಕಗಳನ್ನೂ ಗೆದ್ದಿದ್ದ ಅನ್ನೋ ಮಾತುಗಳು ಕೂಡ ಇವೆ. ಆದ್ರೆ ರಾವಣ(Ravan) ಬ್ರಹ್ಮನಿಂದ ವರ ಪಡೆಯುವಾಗ ಮನುಷನ್ಯನಿಂದ ತನಗೆ ಸಾವು ಬರಬಾರದು ಅನ್ನೋ ವರವನ್ನ ಕೇಳಿರಲಿಲ್ಲ. ಹೀಗಾಗಿ ರಾಮ(Rama) ರಾವಣನನ್ನ ವಧಿಸೋದಕ್ಕೆ ಸಾಧ್ಯ ಆಯ್ತು.. ಇಲ್ಲದೇ ಹೋಗಿದ್ರೆ ರಾವಣನನ್ನ(Ravan) ಸೋಲಿಸುವವರ್ಯಾರಿದ್ರು ಅನ್ನೋ ಮಾತುಗಳು ಕೇಳಿ ಬರುತ್ವೆ.. ಸಾಕಷ್ಟು ಸಿನೆಮಾಗಳಲ್ಲಿ ಕೂಡಾ ರಾವಣನನ್ನ(Ravan) ಹಾಗೇ ಚಿತ್ರಿಸಿದಾರೆ.. ತೋರಿಸಿದಾರೆ.. ಆದ್ರೆ ಅಂಥಾ ಮಹಾಪರಾಕ್ರಮಿ ರಾವಣನನ್ನ ಕೂಡಾ ಸಾಕಷ್ಟು ವೀರರು ಸಾಕಷ್ಟು ಬಾರಿ ಸೋಲಿಸಿದ್ರು ಅನ್ನೋ ಕತೆ ನಿಮಗೆ ಗೊತ್ತಾ.. ದೇವತೆಗಳನ್ನ, ರಾಕ್ಷಸರನ್ನ ಗೆಲ್ತಾ ಇದ್ದ ರಾವಣ, ಬಹಳಷ್ಟು ಬಾರಿ ಮನುಷ್ಯರಿಂದಾ ವಾನರರಿಂದಾ ಸೋಲಿಸಲ್ಪಟ್ಟಿದ್ದ… ಹಾಗಾದ್ರೆ, ರಾಮನಲ್ಲದೇ,ರಾವಣನನ್ನ ಸೋಲಿಸಿದ್ದವರು ಯಾರು..? ಅನ್ನೋದರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
ಅದೆಷ್ಟು ಬಾರಿ ಸೋತಿದ್ದ ರಾವಣ : Who all defeated Ravan before Ram.?
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.