Bharata

ಎಷ್ಟು ಸಾವಿರ ವರ್ಷ ಹಳೆಯದ್ದು ನಮ್ಮ ಕನ್ನಡ: The Hidden History of Indian Languages.!

ಎಷ್ಟು ಸಾವಿರ ವರ್ಷ ಹಳೆಯದ್ದು ನಮ್ಮ ಕನ್ನಡ: The Hidden History of Indian Languages.!
ಭಾಷೆ.. ಅದು ಮನುಷ್ಯನ ಸಂವಹನಕ್ಕೂ ಬಳಕೆ ಆಗುತ್ತೆ.. ಜಗಳಗಳಿಗೂ ಕಾರಣ ಆಗುತ್ತೆ.. ಭಾಷೆ(laguage) ಮನುಷ್ಯನನ್ನ ಬೆಸೆಯುತ್ತೆ ಅನ್ನೋದು ಎಷ್ಟು ನಿಜಾನೋ, ಅದೇ ಭಾಷೆ ಮನುಷ್ಯರನ್ನ ದೂರ ಮಾಡುತ್ತೆ ಅವರ ನಡುವೆ ಒಂದು ಕಂದಕವನ್ನ ನಿರ್ಮಾಣ ಮಾಡುತ್ತೆ ಅನ್ನೋದು ಕೂಡಾ ಅಷ್ಟೇ ನಿಜ.. ಜಗತ್ತಲ್ಲಿ ಸಾವಿರಾರು ಭಾಷೆಗಳಿವೆ(thousand's of languages). ವಿವಿಧತೆಯಲ್ಲಿ ಏಕತೆಯ ಮಂತ್ರವನ್ನ ಹೇಳುವ ಭಾರತದಲ್ಲಿ ಸುಮಾರು 700ಕ್ಕೂ ಹೆಚ್ಚು ಭಾಷೆಗಳಿವೆ.. ನಿಮಗೆ ಆಶ್ಚರ್ಯ ಆಗುತ್ತೇನೋ, ಭಾರತದ(India) ವಿಸ್ತೀರ್ಣಕ್ಕೆ ಹೋಲಿಸಿದ್ರೆ, ಸುಮಾರು 15 ಪರ್ಸೆಂಟ್ ನಷ್ಟೂ ಇಲ್ಲದ, ಪಪುವಾ ನ್ಯೂಗಿನಿಯಾದಲ್ಲಿ ಭಾರತಕ್ಕಿಂತಲೂ ಹೆಚ್ಚಿನ ಭಾಷೆಗಳನ್ನ ಮಾತಾಡೋ ಜನ ಇದಾರೆ.. ಅಲ್ಲಿ ನಮಗಿಂತಾ ಹೆಚ್ಚು ಭಾಷೆಗಳಿವೆ.. ನಮ್ಮಲ್ಲಿ ಎಲ್ಲವನ್ನೂ ಒಡೆದಿರೋ ಹಾಗೆ ಭಾಷೆಯ ಪಂಗಡಗಳನ್ನ ಕೂಡಾ ಎರಡಾಗಿ ಒಡೆದಿದಾರೆ.. ಅದರಲ್ಲಿ ಒಂದು ಇಂಡೋ-ಆರ್ಯನ್ ಅಂತಾ ಕರೆಸಿಕೊಂಡ್ರೆ ಮತ್ತೊಂದು ದ್ರಾವಿಡ ಭಾಷೆ(Dravidian Languages) ಅಂತಾ ಕರೆಸಿಕೊಳ್ಳುತ್ತೆ. ಭಾರತದಲ್ಲಿರುವ ಶೇಕಡಾ 78.05ರಷ್ಟು ಜನ ಇಂಡೋ-ಆರ್ಯನ್ ಭಾಷೆಯನ್ನ ಮಾತಾಡಿದ್ರೆ, 19.64ರಷ್ಟು ಮಂದಿ ದ್ರಾವಿಡ ಭಾಷೆಗಳನ್ನ(Dravidian Languages) ಮಾತಾಡ್ತಾ ಇದ್ದಾರೆ.. ಇನ್ನುಳಿದ 2.31ರಷ್ಟು ಆಸ್ಟ್ರೋಏಸಿಯಾಟಿಕ್, ಸೀನೋ ಟಿಬೆಟಿಯನ್, ತೈ-ಕಡೈ ನಂತ ಭಾಷೆಗಳನ್ನ ಮಾತಾಡ್ತಾರೆ.. ಇನ್ನು ಪೀಪಲ್ಸ್ ಲಿಂಗ್ವೆಸ್ಟಿಕ್ ಸರ್ವೇ ಆಫ್ ಇಂಡಿಯಾದ(People's Linguistic Survey of India) ಪ್ರಕಾರ ಭಾರತದಲ್ಲಿ(India) ಲೆಕ್ಕಕ್ಕೆ ಸಿಕ್ಕಿರುವ ಹಾಗೆ 780 ಭಾಷೆಗಳನ್ನ ಮಾತಾಡಲಾಗುತ್ತೆ.. ಇದ್ರಲ್ಲಿ ಕನ್ನಡ(Kannada), ತುಳು(Tulu), ಕೊಂಕಣೀ(Konkani), ಕೊಡವ(Kodava) ಭಾಷೆಗಳು ಕುಡಾ ಸೇರುತ್ವೆ.. ಇನ್ನು ಹಿಂದಿ(Hindi) ಭಾಷೆಯನ್ನ ಹೆಚ್ಚು ಜನ ಮಾತಾಡ್ತಾರೆ..ಹಾಗೇನೇ ಭಾರತ ಸರ್ಕಾರ ಕನ್ನಡ(kannada), ಮಲೆಯಾಳಂ(Malayalam), ತಮಿಳು(Tamil) ತೆಲುಗು(Telugu), ಒಡಿಯಾ(Odia) ಸಂಸ್ಕೃತ(Sanskrit), ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನವನ್ನ ಕೊಟ್ಟಿದೆ.. ಅರೇ., ಇದೆಲ್ಲ ಈಗ್ಯಾಕೆ ಅನ್ಕೋತಿದ್ದಿರಾ. ನಾವಿವತ್ತು ಇಷ್ಟೊಂದು ಭಾಷೆಗಳ ಬಗ್ಗೆ ಮಾತಾಡ್ತಿವಿ, ಆದ್ರೆ ಸಹಸ್ರಾರು ವರ್ಷಗಳ ಹಿಂದೆ ಭರತಖಂಡದಲ್ಲಿ ಅಂದ್ರೆ ಇವತ್ತಿನ ಪಾಕಿಸ್ತಾನ(Pakistan), ಆಪ್ಘನಿಸ್ತಾನ(Afghanistan), ನೇಪಾಳ(Nepal), ಬಾಂಗ್ಲದೇಶ(Bangladesh), ಶ್ರೀಲಂಕ(Srilanka), ಮಯನ್ಮಾರ್ ಗಳು(Myanmar) ಸೇರಿದ್ದ ಅಖಂಡ ಭಾರತದಲ್ಲಿ, ಯಾವೆಲ್ಲ ಭಾಷೆಗಳನ್ನ ಮಾತಾಡ್ತ ಇದ್ರು.? ಈ ಕುತೂಹಲ ನಿಮ್ಮಲ್ಲೂ ಇರಬಹುದು ಅಲ್ವಾ..? ಸಹಸ್ರಾರು ವರ್ಷಗಳ ಹಿಂದೆ ಭಾರತದಲ್ಲಿ(India) ಯಾವ ಭಾಷೆಗಳನ್ನ ಬಳಸ್ತಾ ಇದ್ರು ಅನ್ನೋದರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Raghavendra N
Written By

Raghavendra N

Content Writer

17 years of experience in Media and Digital Media.Expertise in Scripting, Video Production,Documentary Making and ad Films

Comments

No comments yet.