Bharata

ಪಿತೃಗಳನ್ನ ನೆನೆಯೋದು ಹೇಗೆ: Pitru Paksha: Faith, Science or Superstition.?

ಪಿತೃಗಳನ್ನ ನೆನೆಯೋದು ಹೇಗೆ: Pitru Paksha: Faith, Science or Superstition.?
ಈ ದಿನಗಳಲ್ಲಿ ಪಿತೃ ದೇವತೆಗಳನ್ನ ನೆನಪು ಮಾಡಿಕೊಳ್ಳೋ ಕಾಲ. ನಮ್ಮ ಹಿರಿಯರು ಯಾವ ದಿನ ಅಥವಾ ತಿಥಿಯಲ್ಲಿ ನಮ್ಮನ್ನ ಬಿಟ್ಟು ಹೋದ್ರೋ ಅವತ್ತು ಅವರ ಹೆಸರಲ್ಲಿ ಒಂದಷ್ಟು ಜನಕ್ಕೆ ಊಟ ಹಾಕೋದು, ಅವರ ಸಮಾಧಿಗಳಿದ್ದರೆ ಅಲ್ಲಿ ಪೂಜೆ ಮಾಡಿ ಎಡೆ ಇಡೋದು, ಅಸಹಾಯಕರಿಗೆ ಆಹಾರ ಅಥವಾ ಬೇರೆ ರೀತಿಯಲ್ಲಿ ಏನಾದ್ರೂ ಕೊಟ್ಟು ನಮ್ಮ ಹಿರಿಯರನ್ನ ನೆನಪು ಮಾಡಿಕೋಳ್ಳೋದಕ್ಕೆ ಇರೋ ಕಾಲ ಇದು. ಭಾರತದ ಬಹುತೇಕ ಎಲ್ಲ ರಾಜ್ಯಗಳಲ್ಲೂ ಇಂಥಾ ಆಚರಣೆ ಇದೆ. ಕೆಲವ್ರು ಪಿತೃಪಕ್ಷದಲ್ಲಿ ಮಾಡ್ತಾರೆ ಮತ್ತೆ ಕೆಲವರು ಬೇರೆ ಬೇರೆ ದಿನಗಳಲ್ಲಿ ದೀಪಾವಳಿಯಲ್ಲಿ ಯುಗಾದಿಯ ಸಂದರ್ಭದಲ್ಲಿ ದಸರಾದಲ್ಲಿ ಕೂಡಾ ಹಿರಿಯರನ್ನ ನೆನಪು ಮಾಡಿಕೊಂಡು ಪೂಜಿಸೋ ಕೆಲಸವನ್ನ ಮಾಡ್ತಾರೆ. ಆದ್ರೆ ಈ ಪಿತೃಪಕ್ಷದಲ್ಲಿ ಕೆಲ ಆಚರಣೆಗಳನ್ನ ಹೀಗೇ ಮಾಡಬೇಕು ಅಂತಾ ನಮ್ಮಲ್ಲಿ ಕೆಲವರು ಹೇಳೋದ್ರಿಂದಾ ಈ ಸಂದರ್ಭದಲ್ಲಿ ಶ್ರೀ ರಂಗಪಟ್ಟಣ ಸೇರಿದಂತೆ ನದೀ ತೀರಗಳಲ್ಲಿ ಕ್ಷೇತ್ರಗಳು ಬ್ಯುಸಿ ಆಗಿ ಹೋಗುತ್ವೆ.. ಅದರಲ್ಲೂ ಮಹಾಲಯ ಅಮವಾಸ್ಯೆ ಅಂದ್ರೆ ಶ್ರೀ ರಂಗಪಟ್ಟಣ, ತಲಕಾಡು ಮುಂತಾದ ಕಡೆಗಲ್ಲಿ ಕಾಲಿಡೋದಕ್ಕೂ ಜಾಗ ಇರೋದಿಲ್ಲ. ಹಾಗಾದ್ರೆ ಮಹಾಲಯ ಅಮಾವಾಸ್ಯೆಯಲ್ಲಿ ತರ್ಪಣ ಬಿಡೋದಕ್ಕೆ ಪಿಂಡ ಪ್ರದಾನಕ್ಕೆ ನಾವು ಶ್ರೀ ರಂಗಪಟ್ಟಣಕ್ಕೋ ಅಥವಾ ಮತ್ಯಾವುದೋ ಕ್ಷೇತ್ರಕ್ಕೋ ಹೋಗಲೇಬೇಕಾ..? ಅಲ್ಲಿ ಕ್ಷೇತ್ರ ಮುಖ್ಯಾನಾ ಶ್ರದ್ಧೆ ಮುಖ್ಯಾನಾ..? ಇಷ್ಟಕ್ಕೂ ಇಂಥಾ ಆಚರಣೆಗಳು ನಮ್ಮಲ್ಲಿ ಯಾಕೆ ಇವೆ..? ಈ ಬಗ್ಗೆ ವಿಜ್ಞಾನ ಏನಾದ್ರೂ ಹೇಳುತ್ತಾ ಅಥವಾ ಇದು ಮೌಢ್ಯಾನಾ..? ಅನ್ನೋದರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
M S Raghavendra
Written By

M S Raghavendra

Cheif Editor

Over 30 Years of Experience in Media. Expertise in Youtube Content Creation, Choosing niche ,Digital Marketing.

Comments

No comments yet.