ಭಾರತ ತನ್ನ ಎರಡೂ ಬದಿಗಳಲ್ಲಿ ಗುಳ್ಳೆ ನರಿಗಳನ್ನ ಇಟ್ಕೊಂಡಿದೆ. ಚೈನಾ ಯುದ್ದ ಮಾಡದೇ ಇರಬಹುದು ಆದ್ರೆ ಆತಂಕವನ್ನುಂಟು ಮಾಡುತ್ತೆ. ಪಾಕಿಸ್ಥಾನ ಪದೇ ಪದೇ ಒದೆ ತಿಂದ್ರೂ ಮತ್ತೆ ಮತ್ತೆ ಒದೆ ತಿನ್ನೋದಕ್ಕೆ ಬರ್ತಲೇ ಇರುತ್ತೆ. ಇವರೆಡೂ ಸಾಲ್ದೂ ಅನ್ನೋ ಹಾಗೆ ಈಗ ಭಾರತವೇ ಸಿಜೇರಿಯನ್ ಮಾಡಿ ಹುಟ್ಟಿಸಿದ ಬಾಂಗ್ಲಾದೇಶ ಕೂಡಾ ಭಾರತದ ವಿರುದ್ಧ ಕತ್ತಿ ಮಸೀತಾ ಇದೆ. ಅವರು ಯುದ್ಧ ಗಿದ್ದ ಮಾಡೋದಕ್ಕೆ ಹೋಗೋದಿಲ್ಲ.. ಆದ್ರೆ ಭಾರತದ ವಿರುದ್ಧ ಉಗ್ರ ಚಟುವಟಿಕೆಗಳಿಗೆ ಆಶ್ರಯ ಕೊಡ್ತಾರೆ. ಪಾಕಿಸ್ಥಾನಕ್ಕೆ ತಮ್ಮ ನೆಲದಲ್ಲಿ ಭಾರತದ ವಿರುದ್ದ ಕೆಲಸಾ ಮಾಡೋದಕ್ಕೆ ಜಾಗ ಕೊಡ್ತಾರೆ. ಹೀಗಾಗಿನೇ ಭಾರತದ ರಕ್ಷಣಾ ಪಡೆಗಳು ಸದಾ ಸನ್ನದ್ಧ ಸ್ಥಿತಿಯಲ್ಲೇ ಇರಬೇಕು. ಯಾವುದೇ ಕ್ಷಣದಲ್ಲಿ ಯಾವ ಕಡೆಯಿಂದಾದ್ರು ಅಪಾಯ ನಮ್ಮ ಮೇಲೆ ಬಂದೆರಗಬಹುದು. ಹೀಗಾಗಿನೇ ಭಾರತದ ಸೇನೇ ವಾಯುಪಡೆ ಹಾಗೂ ನೌಕ ಪಡೆಗಳು ಸದಾ ಎಚ್ಚರವಾಗಿರಬೇಕಾಗುತ್ತೆ. ಹೀಗಾಗಿನೇ ಭಾರತ ಸರ್ಕಾರ ನಮ್ಮ ಮೂರು ಪಡೆಗಳಿಗೆ ಅತ್ಯಗತ್ಯವಾಗಿ ಬೇಕಿರುವ ಒಂದಷ್ಟು ಆಯುಧಗಳನ್ನ ಒದಗಿಸಿಕೊಡೋದಕ್ಕೆ ಸರಿ ಸುಮಾರು 1.1 ಲಕ್ಷ ಕೋಟಿ ರೂಪಾಯಿಗಳಷ್ಟು ಮೊತ್ತದ ಖರೀದಿಗೆ ಒಪ್ಪಿಗೆ ಕೊಟ್ಟಿದೆ. ಡಿಫೆನ್ಸ್ ಅಕ್ವಿಸಿಶನ್ ಕೌನ್ಸಿಲ್ ಸಭೆಯಲ್ಲಿ ಈ ಡೀಲ್ನ ಒಕೆ ಮಾಡಲಾಗಿದ್ದು, ಈಗ ಮೂರು ಪಡೆಗಳು ಒಂದಷ್ಟು ಪ್ರಮುಖ ಆಯುಧಗಳನ್ನ ಪಡೆದುಕೊಳ್ತಾ ಇವೆ.. ಇಲ್ಲಿ ಭಾರತೀಯ ಸೇನೆಗೆ ಅವಶ್ಯವಾಗಿರುವ ಕೆಮಿಕಲ್, ಬಯೋಲಾಜಿಕಲ್, ರೇಡಿಯೋಲಾಜಿಕಲ್, ಮತ್ತು ನ್ಯೂಕ್ಲಿಯರ್ ರಿಕಾನಿಸೆನ್ಸ್ ವೆಹಿಕಲ್ಗಳನ್ನ ಪರ್ಚೆಸ್ ಮಾಡೋದಕ್ಕೆ ಒಪ್ಪಿಗೆ ಕೊಡಲಾಗಿದೆ. ಈ ವಾಹನಗಳು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಸೇನೆಗೆ ಅತ್ಯಗತ್ಯ ಮಾಹಿತಿಯನ್ನ ಕೊಡುವ ನಿಟ್ಟಿನಲ್ಲಿ ಸಹಕಾರಿ ಆಗಲಿದೆ. ಇವುಗಳ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
Also Read: ಕ್ರೆಡಿಟ್ ರೇಟಿಂಗ್ನಲ್ಲಿ ಭಾರತಕ್ಕೆ A ಗ್ರೇಡ್: India’s Credit Rating Rises.!
ಅಣುಯುದ್ಧಕ್ಕೆ ಸಿದ್ಧ ಆಗ್ತಿದ್ಯಾ ಭಾರತ..? India's Biggest Defense Deal.!
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.