ಭಾರತ ಸದ್ಯ ಮೂರು ಎಸ್-400 (S-400) ಬ್ಯಾಟರಿಗಳನ್ನು ಹೊಂದಿದ್ದು, ನಾಲ್ಕನೇ ಬ್ಯಾಟರಿ ಶೀಘ್ರದಲ್ಲೇ ಸೇರ್ಪಡೆಯಾಗಲಿದೆ. ಇದೇ ವೇಳೆ, ರಷ್ಯಾ ಎಸ್-500 (S-500) ವ್ಯವಸ್ಥೆಯನ್ನು ಭಾರತದಲ್ಲಿ ಜಂಟಿಯಾಗಿ ತಯಾರಿಸಲು ಆಹ್ವಾನ ನೀಡಿರುವ ಸುದ್ದಿಗಳೂ ಹೊರಬಿದ್ದಿವೆ. ಆದರೆ ಇದಕ್ಕೆ ಪ್ರಮುಖ ಕಾರಣ ಭಾರತ ಇನ್ನು ಮುಂದೆ ಎಸ್-400 ಆಮದಿನ ಮೇಲೆ ಸಂಪೂರ್ಣ ಅವಲಂಬಿತವಾಗಬೇಕಿಲ್ಲ ಎಂಬುದು. ಏಕೆಂದರೆ ಡಿಆರ್‌ಡಿಒ (DRDO) ಎಸ್-400ರಷ್ಟೇ ಸಮರ್ಥವಾದ ಪ್ರಾಜೆಕ್ಟ್ ಕುಶ (Project Kusha) ಎಂಬ ಲಾಂಗ್ ರೇಂಜ್ ಏರ್ ಡಿಫೆನ್ಸ್ ಸಿಸ್ಟಂ (Long Range Air Defence System) ಅಭಿವೃದ್ಧಿಪಡಿಸಿದೆ. ಈ ವ್ಯವಸ್ಥೆ 350 ಕಿ.ಮೀ. ದೂರದಲ್ಲಿರುವ ಶತ್ರು ಯುದ್ಧ ವಿಮಾನ ಹಾಗೂ ಕ್ಷಿಪಣಿಗಳನ್ನು ನಿಖರವಾಗಿ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದ್ದು, ಶೀಘ್ರದಲ್ಲೇ ಭಾರತೀಯ ಸೇನೆಗೆ ಸೇರ್ಪಡೆಯಾಗಲಿದೆ.
ಭಾರತಕ್ಕೆ ಕೇವಲ ಲಾಂಗ್ ರೇಂಜ್ ಕ್ಷಿಪಣಿಗಳಷ್ಟೇ ಅಲ್ಲ, ಶತ್ರುಗಳ ಯುದ್ಧ ವಿಮಾನಗಳನ್ನು ನಿಷ್ಕ್ರಿಯಗೊಳಿಸುವ ಬಲಿಷ್ಠ ಏರ್ ಡಿಫೆನ್ಸ್ ವ್ಯವಸ್ಥೆಯೂ ಅಗತ್ಯವಿದೆ. ಅಮೆರಿಕದ ಏರ್ ಡಿಫೆನ್ಸ್ ಹೊಂದಿದ್ದ ಅರಬ್ ದೇಶಗಳನ್ನು ಇರಾನ್ ಸುಲಭವಾಗಿ ಹಿಮ್ಮೆಟ್ಟಿಸಿತ್ತು, ಇಸ್ರೇಲ್ ಇರಾನ್‌ನ ಏರ್ ಡಿಫೆನ್ಸ್ ಅನ್ನೇ ಧ್ವಂಸಗೊಳಿಸಿ ದಾಳಿ ನಡೆಸಿತ್ತು. ಆಪರೇಷನ್ ಸಿಂಧೂರ್ ಆರಂಭವಾಗುತ್ತಿದ್ದಂತೆಯೇ ಪಾಕಿಸ್ತಾನದ ಏರ್ ಡಿಫೆನ್ಸ್ ವ್ಯವಸ್ಥೆಯೂ ಕುಸಿದುಬಿದ್ದಿತ್ತು. ಡ್ರೋನ್ ಮತ್ತು ಸ್ವಾರ್ಮ್ ದಾಳಿಗಳನ್ನು ಏಕಕಾಲಕ್ಕೆ ಎದುರಿಸುವುದು ಬಲಿಷ್ಠ ಏರ್ ಡಿಫೆನ್ಸ್‌ಗೂ ದೊಡ್ಡ ಸವಾಲು. ಇದೇ ಕಾರಣಕ್ಕೆ ಭಾರತ 360 ಡಿಗ್ರಿ ರಕ್ಷಣೆ ನೀಡುವ ಸುದರ್ಶನ ಚಕ್ರ (Sudarshan Chakra) ಯೋಜನೆ ಕೈಗೆತ್ತಿಕೊಂಡಿದ್ದು, ಅದರ ಪ್ರಮುಖ ಭಾಗವೇ ಪ್ರಾಜೆಕ್ಟ್ ಕುಶ.
ಇತ್ತೀಚೆಗೆ ಒಡಿಶಾದ ಚಂಡಿಪುರದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ದ್ವೀಪದಲ್ಲಿ (Dr. APJ Abdul Kalam Island, Chandipur) ಲಾಂಗ್ ರೇಂಜ್ ಸರ್ಫೇಸ್-ಟು-ಏರ್ ಮಿಸೈಲ್ (LR-SAM) ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಡಿಆರ್‌ಡಿಒ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಾಜೆಕ್ಟ್ ಕುಶದಲ್ಲಿ ಎಸ್-400ರ ಮಾದರಿಯಲ್ಲೇ ಎಂ1, ಎಂ2 ಹಾಗೂ ಎಂ3 ಎಂಬ ಮೂರು ಬಗೆಯ ಕ್ಷಿಪಣಿಗಳಿದ್ದು, ಇವು ಕ್ರಮವಾಗಿ 150, 250 ಹಾಗೂ 350 ಕಿ.ಮೀ. ದೂರದ ಗುರಿಗಳನ್ನು ಹೊಡೆದುರುಳಿಸುತ್ತವೆ. ಮೊಬೈಲ್ ಲಾಂಚರ್‌ಗಳಿಂದ ಉಡಾಯಿಸಬಹುದಾದ ಈ ವ್ಯವಸ್ಥೆ ಏಕಕಾಲಕ್ಕೆ ಮೂರ್ನಾಲ್ಕು ಗುರಿಗಳನ್ನು ಗುರುತಿಸಿ ಹೊಡೆಯುವ ಸಾಮರ್ಥ್ಯ ಹೊಂದಿದೆ.
ಈ ಯೋಜನೆ ಕೇವಲ ಒಂದು ಕ್ಷಿಪಣಿ ವ್ಯವಸ್ಥೆಯಾಗಿ ಉಳಿಯದೆ ಭಾರತದ ರಕ್ಷಣಾ ಸ್ವಾವಲಂಬನೆ (Atmanirbhar Bharat, Defence) ಮತ್ತು ಆರ್ಥಿಕತೆಗೆ ಪುಷ್ಟಿ ನೀಡುವ ಯೋಜನೆಯಾಗಿ ಗುರುತಿಸಿಕೊಳ್ಳುತ್ತಿದೆ. ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ರಡಾರ್ ಒದಗಿಸುತ್ತಿದ್ದು, ಸುಮಾರು 40,000 ಕೋಟಿ ರೂಪಾಯಿ ಮೌಲ್ಯದ ಗುತ್ತಿಗೆ ಪಡೆಯುವ ಸಾಧ್ಯತೆ ಇದೆ. ಭಾರತ್ ಡೈನಾಮಿಕ್ಸ್ ಲಿಮಿಟೆಡ್ (BDL) ಕ್ಷಿಪಣಿ ಜೋಡಣೆ, ಸಾಲಿಡ್ ಮೋಟಾರ್ ಇಂಟಿಗ್ರೇಶನ್ ಹಾಗೂ ವಾರ್‌ಹೆಡ್ ಫಿಟ್ಟಿಂಗ್ ಕಾರ್ಯ ನಿರ್ವಹಿಸುತ್ತಿದೆ. ನೂರಾರು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಈ ಯೋಜನೆಯ ಭಾಗವಾಗಿದ್ದು, ಸಾವಿರಾರು ಮಂದಿಗೆ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ. ಈ ಪ್ರಾಜೆಕ್ಟ್ ಶೀಘ್ರವೇ ಪೂರ್ಣಗೊಂಡು ಭಾರತೀಯ ಸೇನೆ ಮತ್ತು ನೌಕಾಪಡೆಗೆ ಸೇರ್ಪಡೆಯಾಗುವುದು ಪ್ರತಿಯೊಬ್ಬ ಭಾರತೀಯನ ಆಶಯ.
ಭಾರತದ ಸ್ವದೇಶಿ ಏರ್ ಡಿಫೆನ್ಸ್ ಸಿಸ್ಟಂ ಎಸ್-400ಗೆ ಪರ್ಯಾಯವಾಗುತ್ತಾ: Project Kusha.!
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.