ಭಾರತದಲ್ಲೇ ಪತ್ತೆಯಾಯ್ತು ಅಗಾಧ ಅನಿಲ: India's Natural Gas Jackpot.!
ಪಶ್ಚಿಮ ಏಷ್ಯಾ ಮತ್ತು ಅರಬ್ ದೇಶಗಳಲ್ಲಿ ನಡೀತಿರೋ ಸಂಘರ್ಷ ಜಗತ್ತಿನ ತೈಲ ಪೂರೈಕೆ ಮೇಲೆ ಪರಿಣಾಮವನ್ನ ಬೀರಿದೆ. ಅದ್ರಲ್ಲೂ ನ್ಯಾಚುರಲ್ ಗ್ಯಾಸ್ ಪೂರೈಕೆಯಲ್ಲಿ ಭಾರಿ ವ್ಯತ್ಯಾಸ ಕಂಡು ಬಂದಿದ್ದು, ಇವತ್ತಿಗೂ ಕೂಡಾ ಎಲ್ಪಿಜಿ ಸೇರಿದ ಹಾಗೆ ಗ್ಯಾಸ್ ಸಮಸ್ಯೆ ಸಂಪೂರ್ಣವಾಗಿ ಸರಿ ಹೋಗಿಲ್ಲ. ಇನ್ನು ನಾವು
ಬಳಸುವ ಒಟ್ಟು ನ್ಯಾಚುರಲ್ ಗ್ಯಾಸ್ ಏನಿದೆ ಅದರಲ್ಲಿ ಶೇಕಡಾ 50 ರಷ್ಟು ಆಮದಿನ ಮೂಲಕವೇ ಬರುತ್ತೆ. ಅರಬ್ ದೇಶಗಳಿಂದಾ ಮಾತ್ರ ಅಲ್ಲಾ, ರಷ್ಯಾದಿಂದಲೂ ಭಾರತ ನ್ಯಾಚುರಲ್ ಗ್ಯಾಸ ಖರೀದಿ ಮಾಡ್ತಾ ಇದೆ. ಇನ್ನು ನಾವು ಹೊರಗಿಂದಾ ಇಂಧನ ಆಮದು ಮಾಡಿಕೊಳ್ಳೋದು ಒಂಥರಾ ನಮ್ಮ ಮೇಲೆ ಡಿಪೆಂಡೆನ್ಸಿಯನ್ನ ಹೆಚ್ಚು ಮಾಡುತ್ತೆ. ಜಾಗತಿಕ ಸಮಸ್ಯೆಗಳುಂಟಾದಾಗ ಇಂಧನ ಕೊರತೆಯಿಂದಾ ನಾವು ಬಳಲಬೇಕಾಗಿ ಬರುತ್ತೆ. ಇಂತಹ ಹೊತ್ತಲ್ಲೇ ಭಾರತಕ್ಕೊಂದು ಖುಷಿ ಸುದ್ದಿ ಸಿಕ್ಕಿದೆ. ಭಾರತದ ಕಡಲ ತೀರದಲ್ಲೇ ನ್ಯಾಚುರಲ್ ಗ್ಯಾಸ್ ನಿಕ್ಷೇಪ ಸಿಕ್ಕಿದೆ. ಭಾರತಕ್ಕೆ ಇದು ಒಂಥರಾ ಜಾಕ್ ಪಾಟ್ ಅಂದ್ರು ತಪ್ಪಾಗೋದಿಲ್ಲಾ. ಹಾಗಾದ್ರೆ ಈಗ ನ್ಯಾಚುರಲ್ ಗ್ಯಾಸ್ ನಿಕ್ಷೇಪ ಸಿಕ್ಕಿರೋದಾದ್ರು ಎಲ್ಲಿ.? ಎಷ್ಟು ಪ್ರಮಾಣದ ಗ್ಯಾಸ್ ಅಲ್ಲಿದೆ.? ಭಾರತದಲ್ಲಿರೋ ನ್ಯಾಚುರಲ್ ಗ್ಯಾಸ್ ರಿಸರ್ವ್ ಎಷ್ಟು.? ನಾವು ಈಗ ಎಲ್ಲೆಲ್ಲೀ ನ್ಯಾಚುರಲ್ ಗ್ಯಾಸ್ ಮೈನಿಂಗ್ ಮಾಡ್ತಾ ಇದ್ದೇವೆ ಅನ್ನೋದರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.