Global Affairs

ಬಾಂಗ್ಲಾದೇಶ-ರಷ್ಯಾ ವ್ಯಾಪಾರಕ್ಕೆ ಭಾರತದ ರೂಪಾಯಿ.? Putin's Rupee Push.!

ಬಾಂಗ್ಲಾದೇಶ-ರಷ್ಯಾ ವ್ಯಾಪಾರಕ್ಕೆ ಭಾರತದ ರೂಪಾಯಿ.? Putin's Rupee Push.!
ಭಾರತದ ರೂಪಾಯಿ ವಿಚಾರದಲ್ಲಿ ರಷ್ಯಾ ಒಂದು ದೊಡ್ಡ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ಇನ್ನು ಮುಂದೆ ಬಾಂಗ್ಲಾದೇಶದ ಜೊತೆಗಿನ ವ್ಯಾಪಾರ ವಹಿವಾಟಿನಲ್ಲಿ ಬಾಂಗ್ಲಾದೇಶ ರಷ್ಯಾಗೆ ಪಾವತಿಸಬೇಕಾದ ಹಣಕ್ಕೆ ಡಾಲರ್ ಬದಲು ಭಾರತದ ರೂಪಾಯಿ ಬಳಸುವ ಬಗ್ಗೆ ಚಿಂತನೆ ನಡೆದಿದೆ. ಈ ಕುರಿತು ಬಾಂಗ್ಲಾದೇಶ ಮತ್ತು ರಷ್ಯಾ ವಿದೇಶಾಂಗ ಇಲಾಖೆಗಳ ನಡುವೆ ಈಗಾಗಲೇ ಮಾತುಕತೆ ನಡೆದಿದ್ದು, ಡಿ-ಡಾಲರೈಸೇಷನ್ (De-dollarization) ಪ್ರಯತ್ನದಲ್ಲಿರುವ ರಷ್ಯಾ ಭಾರತೀಯ ಕರೆನ್ಸಿಯಲ್ಲಿ ಪಾವತಿ ಸ್ವೀಕರಿಸಲು ಸಿದ್ಧವಾಗುತ್ತಿದೆ. ರಷ್ಯಾ ಬಳಿ ಚೀನಾದ ಯುವಾನ್ ಆಯ್ಕೆಯೂ ಇದ್ದರೂ, ಬಾಂಗ್ಲಾದೇಶ-ಚೀನಾ ನಡುವೆ ಉತ್ತಮ ಸಂಬಂಧವಿದ್ದರೂ, ಯುವಾನ್ ಬಿಟ್ಟು ರೂಪಾಯಿಯತ್ತ ಒಲವು ತೋರುತ್ತಿರುವುದೇಕೆ ಎಂಬುದನ್ನು ನೋಡೋಣ.
ಭಾರತ-ರಷ್ಯಾ ವ್ಯಾಪಾರ ಸಂಬಂಧ ಇಂದು ಗಟ್ಟಿಯಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಉಭಯ ದೇಶಗಳ ವಹಿವಾಟು ಸುಮಾರು ಐದು ಪಟ್ಟು ಹೆಚ್ಚಾಗಿದ್ದು, ಶೇಕಡಾ 90ರಷ್ಟು ವ್ಯಾಪಾರ ರೂಪಾಯಿ-ರೂಬೆಲ್ ಮೆಕಾನಿಸಂ (Rupee-Ruble Mechanism) ಮೂಲಕವೇ ನಡೆಯುತ್ತಿದೆ ಎಂದು ರಷ್ಯಾ ಹೇಳಿಕೊಂಡಿದೆ. ಇದೇ ಮಾದರಿಯನ್ನು ಬಾಂಗ್ಲಾದೇಶದ ಜೊತೆಗೂ ಜಾರಿಗೊಳಿಸಲು ರಷ್ಯಾ ಮುಂದಾಗಿದ್ದು, ಟಾಕಾ ಬದಲು ರೂಪಾಯಿಯನ್ನೇ ಬಳಸುವಂತೆ ಸಲಹೆ ನೀಡುತ್ತಿದೆ. ಇದನ್ನು ಕೇವಲ ಸ್ನೇಹದ ಉಪಕಾರ ಎಂದು ಭಾವಿಸಬೇಕಿಲ್ಲ; ಇಲ್ಲಿ ಪರಸ್ಪರ ಲಾಭ-ನಷ್ಟದ ಲೆಕ್ಕಾಚಾರವೂ ಅಡಗಿದೆ.
ಬಾಂಗ್ಲಾದೇಶ-ರಷ್ಯಾ ನಡುವೆ ಇನ್ನೂ ಅಂತಿಮ ಒಪ್ಪಂದ ಆಗಿಲ್ಲ; ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ಸ್ಪಷ್ಟತೆ ಸಿಗುವ ನಿರೀಕ್ಷೆಯಿದೆ. ಬಾಂಗ್ಲಾದೇಶಕ್ಕೆ ಸದ್ಯಕ್ಕೆ ಬೇರೆ ಆಯ್ಕೆ ಇಲ್ಲದಿರುವುದರಿಂದ ಒಪ್ಪಂದ ಆಗುವ ಸಾಧ್ಯತೆ ಹೆಚ್ಚಿದೆ. ಆದರೆ ಇದು ಶಾಶ್ವತ ವ್ಯವಸ್ಥೆಯಲ್ಲ; ರಷ್ಯಾ ಸಂಗ್ರಹಿಸುವ ರೂಪಾಯಿಯನ್ನು ಎಲ್ಲಿ ಬಳಸಬೇಕೆಂಬ ಪ್ರಶ್ನೆ ಮುಂದೆಯೂ ಇರುತ್ತದೆ. ಚೀನಾ ಭಾರತದ ಕರೆನ್ಸಿಯನ್ನು ಬೆಂಬಲಿಸದ ಕಾರಣ, BRICS ಪ್ರತ್ಯೇಕ ಕರೆನ್ಸಿ (BRICS Currency)
Also Read: ಪಾಕಿಸ್ತಾನ ಬಿಕ್ಕಟ್ಟು : TTP ದಾಳಿ, PoK Protest ಮತ್ತು ಆಂತರಿಕ ಅಶಾಂತಿ.!
ರೂಪುಗೊಳ್ಳುವವರೆಗೆ ಅಥವಾ ರಷ್ಯಾ ಮೇಲಿನ ಡಾಲರ್ ನಿರ್ಬಂಧ ತೆರವಾಗುವವರೆಗೆ ಮಾತ್ರ ಈ ವ್ಯವಸ್ಥೆ ಮುಂದುವರಿಯಬಹುದು. ರಷ್ಯಾ ಜೊತೆ ತೈಲ ವ್ಯಾಪಾರ ಮಾಡುವ ದೇಶಗಳ ಮೇಲೆ ಶೇಕಡಾ 100ರಷ್ಟು ಟ್ಯಾರಿಫ್ ಹೇರುವ ಬಿಲ್ ಅಮೆರಿಕಾ ಸಿದ್ಧಪಡಿಸುತ್ತಿರುವುದರಿಂದ, ನಿರ್ಬಂಧ ಶೀಘ್ರ ತೆರವಾಗುವ ಸಾಧ್ಯತೆ ಕಡಿಮೆ. ಹೀಗಾಗಿ ಮುಂದಿನ ದಿನಗಳಲ್ಲಿ BRICS ಕರೆನ್ಸಿಯ ಸಾಧ್ಯತೆಗಳೂ ಕಾಣಿಸುತ್ತಿವೆ; ಆದರೆ ಅದಕ್ಕೆ ಭಾರತ-ಚೀನಾ ಒಮ್ಮತಕ್ಕೆ ಬರಬೇಕಿದೆ.
M S Raghavendra
Written By

M S Raghavendra

Cheif Editor

Over 30 Years of Experience in Media. Expertise in Youtube Content Creation, Choosing niche ,Digital Marketing.

Comments

No comments yet.