Global Affairs

ಅಮೆರಿಕಾಕ್ಕೆ ಭಾರತದ ಟಕ್ಕರ್: JAI Vs QUAD.!

ಅಮೆರಿಕಾಕ್ಕೆ ಭಾರತದ ಟಕ್ಕರ್: JAI Vs QUAD.!
ಜಗತ್ತಿಗೆ ತಾನೇ ದೊಡ್ಡಣ್ಣ ಅಂದುಕೊಂಡಿರುವ ಅಮೆರಿಕಾಗೆ(USA) ತನ್ನ ಜಾಗ ಏನು ಅನ್ನೋದನ್ನ ತೋರಿಸುವ ಮತ್ತೊಂದು ಪ್ರಯತ್ನವನ್ನು ಭಾರತ(INDIA) ಮಾಡಿದೆ. ಮೊನ್ನೆ ಏಷಿಯಾನ್ ದೇಶಗಳ ರಕ್ಷಣಾ ಸಚಿವರ ಸಮ್ಮೇಳನದಲ್ಲಿ ಭಾಗಿಯಾದ ರಾಜನಾಥ್ ಸಿಂಗ್, ಜಪಾನ್(JAPAN) ಆಸ್ಟ್ರೇಲಿಯಾಗಳ(AUSTRALIA) ರಕ್ಷಣಾ ಸಚಿವರ ಜೊತೆ ಒಂದು ಫೋಟೋನ ಹಂಚಿಕೊಂಡು ಅದಕ್ಕೆ 'ಜೈ' ಅಂದ್ರೆ ಜಪಾನ್, ಆಸ್ಟ್ರೇಲಿಯಾ, ಭಾರತ ಅನ್ನೋ ಹೆಸರು ಕೊಡುವ ಮೂಲಕ, ಅಮೆರಿಕಾ ಇಲ್ಲದೆ ಇದ್ದರೂ ಇಂಡೋ-ಪೆಸಿಫಿಕ್ ಅಲ್ಲಿ ಚೈನಾ(CHINA)ವಿರುದ್ಧದ ಕೋಟ ಇರುತ್ತೆ ಅನ್ನೋ ಸಂದೇಶವನ್ನು ಕೊಟ್ಟಿದ್ದಾರೆ. ಹಾಗೆ ಭಯೋತ್ಪಾದನೆಗೆ ಬಾರ್ಡರ್ ಇರೋದಿಲ್ಲ ಅಂತ ಹೇಳಿರೋ ರಾಜನಾಥ್ ಸಿಂಗ್, ಆಪರೇಷನ್ ಸಿಂಧೂರ್(OPERATION SINDHOOR) ಬಗ್ಗೆ ಕೂಡ ಆ ಸಮ್ಮೇಳನದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಏಷಿಯನ್ ದೇಶಗಳಿಗೆ ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಎಲ್ಲ ರೀತಿಯ ಸಹಾಯ ಮತ್ತು ತರಬೇತಿಯನ್ನ ಕೊಡುವುದಕ್ಕೆ ಭಾರತ(INDIA) ಸಿದ್ಧ ಇದೆ ಅನ್ನೋ ಮಾತುಗಳನ್ನ ಆಡಿರೋ ರಾಜನಾಥ್ ಸಿಂಗ್,ಪಾಕಿಸ್ತಾನದ(PAKISTAN)ಜೊತೆಗಿನ ಅಮೆರಿಕಾದ ರಕ್ಷಣಾ ಒಪ್ಪಂದಗಳ ಬಗ್ಗೆ ಅಮೆರಿಕಾದ(USA)ರಕ್ಷಣಾ ಸಚಿವರ ಮುಂದೆ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಹಾಗಾದ್ರೆ ಈ 'ಜೈ' ಏನು..? ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಮೂಲಕ ಅಮೆರಿಕಾಗೆ(USA) ಕೊಡ್ತಾ ಇರೋ ಸಂದೇಶ ಏನು..? ಅಮೆರಿಕಾ, ಟ್ರಂಪ್(TRUMP) ಅವರ ಹುಚ್ಚು ನಿರ್ಧಾರಗಳ ಮೂಲಕ ಹೇಗೆ ಜಾಗತಿಕ ಮೈತ್ರಿಕೂಟದ ಮೇಲಿನ ಹಿಡಿತವನ್ನ ಕಳ್ಕೊತಾ ಇದೆ ಅನ್ನೋದ್ರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ..
M S Raghavendra
Written By

M S Raghavendra

Cheif Editor

Over 30 Years of Experience in Media. Expertise in Youtube Content Creation, Choosing niche ,Digital Marketing.

Comments

No comments yet.