Global Affairs

ಇಸ್ರೇಲ್ ಚುನಾವಣೆ ಸೋಲ್ತಾರ ನೆತನ್ಯಾಹೂ: Israel Elections 2026..!

ಇಸ್ರೇಲ್ ಚುನಾವಣೆ ಸೋಲ್ತಾರ ನೆತನ್ಯಾಹೂ: Israel Elections 2026..!
ಇಸ್ರೇಲಲ್ಲಿ ಇವತ್ತು ಸಾರ್ವತ್ರಿಕ ಚುನಾವಣೆ. (Israel Elections) ಅಲ್ಲಿನ ಸಂಸತ್ತಿನ 120 ಸ್ಥಾನಗಳಿಗೆ ಇವತ್ತು ಮತದಾನ ನಡೆಯುತ್ತೆ. ಇವತ್ತು ರಾತ್ರಿಯಿಂದಲೇ ಮತ ಎಣಿಕೆ ಕೂಡಾ ಆರಂಭ ಆಗುತ್ತೆ. ಆದ್ರೆ ಅದರ ಫಲಿತಾಂಶ ಪ್ರಕಟಗೊಳ್ಳೋದಕ್ಕೆ ಒಂದಷ್ಟು ಕಾಲಾವಕಾಶ ಬೇಕಾಗಬಹುದು.. ಅಲ್ಲಿ ಯಾರು ಬಹುಮತಕ್ಕೆ ಬೇಕಾದಷ್ಟು ಸ್ಥಾನಗಳನ್ನ ಗೆಲ್ತಾರೆ ಅವರು ಮುಂದಿನ ಪ್ರಧಾನಿ ಆಗ್ತಾರೆ. ಈ ಬಾರಿಯ ಚುನಾವನೆಗಳಲ್ಲಿ ನೆತನ್ಯಾಹೂ (Netanyahu) ಅವರ ಮರುಆಯ್ಕೆ ಕಷ್ಟ ಸಾಧ್ಯ ಅಂತಾ ಸಾಕಷ್ಟು ವರದಿಗಳು ಹೇಳ್ತಾ ಇವೆ. ಹಾಗಂತಾ ನೆತನ್ಯಾಹೂ ಅಧಿಕಾರದಿಂದಾ ದೂರ ಉಳಿದು ಬಿಡ್ತಾರಾ..? ಖಚಿತವಾಗಿ ಹೇಳೋದಕ್ಕೆ ಸಾಧ್ಯ ಇಲ್ಲ.. ಯಾಕೇ ಅಂದ್ರೆ ಇಸ್ರೇಲಿನ ಇತಿಹಾಸದಲ್ಲೇ ಅಲ್ಲಿ ಯಾವತ್ತೂ ಯಾವ ಪಕ್ಷಕ್ಕೂ ಮತದಾರ ಸ್ಪಷ್ಟ ಬಹುಮತವನ್ನೂ ಕೊಟ್ಟಿಲ್ಲ ಮತ್ತು ಯಾವ ಪಕ್ಷಕ್ಕೂ ಬಹುಮತ ಸಿಗದೇ ಈ ಬಾರಿ ಕೂಡಾ ಅಲ್ಲಿ ಒಂದು ಕೂಟ ರಚನೆ ಮಾಡಿಕೊಳ್ಳೋದ್ರಲ್ಲಿ ವಿಪಕ್ಷಗಳು ವಿಫಲವಾದ್ರೆ, ನೆತನ್ಯಾಹೂ ಅವರನ್ನ ಅಧಿಕಾರದಿಂದಾ ಕೆಳಗಿಳಿಸೋದಕ್ಕೆ ಕೂಡಾ ಸಾಧ್ಯ ಇಲ್ಲ. ಅಲ್ಲಿ ನೆತನ್ಯಾಹೂ ಪಕ್ಷಕ್ಕೆ ಬಹುಮತ ಸಿಗಬೇಕೂ ಅಂತೇನಲ್ಲ ಅವರ ವಿರೊಧಿಗಳಿಗೆ ಬಹುಮತ ಸಿಗದೇ ಇದ್ದರೂ ನೆತನ್ಯಾಹೂ ಅಧಿಕಾರದಲ್ಲಿ ಮುಂದುವರೀತಾರೆ ಮುಂದಿನ ಚುನಾವಣೆ ನಡೆದು, ಪ್ರತಿಪಕ್ಷಗಳಕೂಟ ಬಹುಮತಕ್ಕೆ ಬೇಕಾದ ಸ್ಥಾನಗಳನ್ನ ಜೋಡಿಸಿಕೊಳ್ಳೋವರೆಗೂ ನೆತನ್ಯಾಹೂ ಅಧಿಕಾರದಲ್ಲಿ ಉಳಿದು ಬಿಡ್ತಾರೆ. ಹಾಗಾದ್ರೆ ಇಸ್ರೇಲಿನ ಚುನಾವಣೆಗಳು ಹೇಗೆ ನಡೆಯುತ್ವೆ.. ಭಾರತದ ಚುನಾವಣೆಗೂ ಅಲ್ಲಿನ ಪ್ರಧಾನಿ ಆಯ್ಕೆಗೂ ಇರೋ ವ್ಯತ್ಯಾಸ ಏನು..? ಬಹುಮತ ಇಲ್ಲದೇ ಇದ್ದರೂ ಅಲ್ಲಿ ಪ್ರಧಾನಿ ಅಧಿಕಾರದಲ್ಲಿ ಮುಂದುವರೆಯೋದಕ್ಕೆ ಹೇಗೆ ಸಾಧ್ಯ ಅನ್ನೋದ್ರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
M S Raghavendra
Written By

M S Raghavendra

Cheif Editor

Over 30 Years of Experience in Media. Expertise in Youtube Content Creation, Choosing niche ,Digital Marketing.

Comments

No comments yet.