Global Affairs

ಚೈನಾ ವಿರುದ್ಧ ಕಾದಾಟಕ್ಕೆ ಜಪಾನ್ ತೈವಾನ್ : America Leaves the Pacific.?

ಚೈನಾ ವಿರುದ್ಧ ಕಾದಾಟಕ್ಕೆ ಜಪಾನ್ ತೈವಾನ್ : America Leaves the Pacific.?
ಇರಾನ್​ ಯುದ್ದ ಅಮೆರಿಕಾಕ್ಕೆ ದೊಡ್ಡ ತಲೆ ನೋವನ್ನ ತರ್ತಿದ್ಯಾ.. ಅದು ಈಗ ಇಕ್ಕಟ್ಟಿಗೆ ಸಿಲುಕ್ತಾ ಇದ್ಯಾ.. ಅಮೆರಿಕಾ ಈಗ ತೆಗೆದುಕೊಂಡಿರುವ ನಿರ್ಧಾರ ಒಬ್ಬ ಶತ್ರುವನ್ನ ಮಣ್ಣು ಮುಕ್ಕಿಸೋದಕ್ಕೆ ಹೊರಟು ಮತ್ತೊಬ್ಬ ಶತ್ರುವಿನ ಬಲವನ್ನ ಹೆಚ್ಚಿಸ್ತಾ ಇದ್ಯಾ.? ಇಂತಹ ಹತ್ತು ಹಲವು ಅನುಮಾನಗಳಿಗೆ ಕಾರಣ ಆಗ್ತಾ ಇರೋದು ಅಮೆರಿಕ ಫೆಸಿಫಿಕ್ ಸಾಗರದಿಂಧ ತನ್ನೆಲ್ಲಾ ಯುದ್ಧ ವಿಮಾನವಾಹಕ ನೌಕೆಗಳನ್ನ ಹಿಂಪಡೆದಿರೋದು.. ದೊಡ್ಡಣ್ಣನ ಈ ನಿರ್ಧಾರದಿಂದ ಈಗ ಆತಂಕಕ್ಕೆ ಈಡಾಗಿರೋದು ತೈವಾನ್ ಆದ್ರು, ಹೆಚ್ಚು ತಡವರಿಸ್ತಾ ಇರೋದು ಜಪಾನ್.. ಹಾಗಾದ್ರೆ ಅಮೆರಿಕಾದ ಏರ್ ಕ್ರಾಫ್ಟ್ ಕ್ಯಾರಿಯರ್ ಇಲ್ಲದೇ ಹೋದ್ರೆ, ಚೈನ ತೈವಾನ್​ನ ಆಕ್ರಮಿಸಿ ಬಿಡುತ್ತಾ..? ಪೆಸಿಫಿಕ್​ನಲ್ಲಿ ಯುದ್ಧದ ಸಿದ್ಧತೆಯನ್ನ ಚೈನಾ ಮಾಡಿಕೊಂಡಿದ್ಯಾ.? ಇಲ್ಲಿ ಅಮೆರಿಕ ಪೆಸಿಫಿಕ್ ಸಾಗರವ್ನ ಹೀಗೆ ಬಿಟ್ಟು ಬಿಡುತ್ತಾ.? ಫೆಸಿಫಿಕ್ ಸಾಗರ.. ಇದು ಜಾಗತಿಕವಾಗಿ ಬಹುದೊಡ್ಡ ರಣಾಂಗಣ ಅಂದ್ರೆ ತಪ್ಪಾಗೋದಿಲ್ಲಾ. ಎರಡನೇ ಮಹಾಯುದ್ದಕ್ಕೂ ಮುನ್ನವೇ ಶುರುವಾಗಿದ್ದ ಇಲ್ಲಿನ ಕದನಗಳು ಮಹಾಯುದ್ದದ ದಿಕ್ಕನ್ನೆ ಬದಲಿಸಿ ಬಿಟ್ಟಿದ್ವು. ಜಾಗತಿಕವಾಗಿ ಪರಮಾಣು ಬಾಂಬ್ಗಳು ಸಿಡಿದಿದ್ದು ಕೂಡಾ ಇದೆ ಫೆಸಿಪಿಕ್ ಸಾಗರದ ನಡುವಿನ ದ್ವೀಪರಾಷ್ಟ್ರ ಜಪಾನ್​ನಲ್ಲಿ ಅನ್ನೊದನ್ನ ನಾವು ಮರೆಯೋ ಹಾಗಿಲ್ಲಾ. ಆ ಬಳಿಕ ಕೊರಿಯಾ ಯುದ್ದ, ವಿಯೆಟ್ನಾಂ ಯುದ್ದಗಳು ಈ ಸಾಗರದ ಮಡಿಲಲ್ಲೇ ನಡೆದಿದ್ವು.. ಆ ಬಳಿಕ ದೊಡ್ಡ ಸಂಘರ್ಷ ಇಲ್ಲಿ ನಡೆದಿಲ್ಲ. ಬದಲಾಗಿ ಇದು ಚೈನ ಅಮೆರಿಕಾಗಳ ನಡುವಿನ ಸಂಘರ್ಷಕ್ಕೆ ವೇದಿಕೆಗೆ ಆಗಿದೆ. ಪೆಸಿಫಿಕ್ ಸಾಗರದಲ್ಲಿ ಏನಾಗ್ತಿದೆ ಅನ್ನೋದರ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.
Also Read: ಪುತಿನ್- ಪಿಂಗ್ ವಿರುದ್ಧ ಸಾರುತ್ತಾ ಜಪಾನ್ ಯುದ್ಧ: Japan Angry on Putin.!
Raghavendra N
Written By

Raghavendra N

Content Writer

17 years of experience in Media and Digital Media.Expertise in Scripting, Video Production,Documentary Making and ad Films

Comments

No comments yet.