ಮಾತು ಆಡಿದ್ರೆ ಹೋಯ್ತು ಮುತ್ತು ಹೊಡೆದ್ರು ಹೋಯ್ತು ಅನ್ನೋದು ಒಂದು ಗಾದೆ ಮಾತು. ಮನುಷ್ಯ ನಾಲಿಗೆ ಜಾರೋ ಮೊದಲು ಸ್ವಲ್ಪ ಎಚ್ಚರವಾಗಿರಬೇಕು, ಏನು ಮಾತಾಡ್ತಾ ಇದ್ದೀನಿ,ಎಲ್ಲಿ ಮಾತಾಡ್ತಾ ಇದ್ದೀನಿ,ಅನ್ನೋದರ ಬಗ್ಗೆ ಗಮನ ಇಟ್ಟಕೊಬೇಕು ಅಂತ ಹೇಳೋದಕ್ಕೆ ಈ ಮಾತನ್ನ ಹಿಂದೆ
ಹೇಳ್ತಾ ಇದ್ರು. ಆದರೆ ಇವತ್ತು ಯಾರನ್ನ ನಾವು ನಮ್ಮ ನಾಯಕರು ಅಂತ ತಿಳ್ಕೊಂಡಿದ್ದೀವಿ, ಅವರಿಗೆ ಜನ ಚಪ್ಪಾಳೆ ತಟ್ಟಿದ್ರೆ ಸಾಕು ಏನು ಬೇಕಾದರೂ ಮಾತಾಡ್ತಾರೆ ಎಂಥಾ ಮಾತು ಬೇಕಾದ್ರೂ ಅವರ ಬಾಯಲ್ಲಿ ಬಂದುಬಿಡುತ್ತೆ. ಅದೇ ತರದ ಘಟನೆಯೊಂದು ತಮಿಳುನಾಡಲ್ಲಿ ನಡೆದಿದೆ. ಅಲ್ಲಿ ತನ್ನ ಮಾತುಗಳಿಂದಲೇ ವಿವಾದಗಳನ್ನ ಮೈತುಂಬ ಮೆತ್ತಿಕೊಳ್ಳುವ ಮಾಜಿ ಉಪಮುಖ್ಯಮಂತ್ರಿ ಡಿಎಂಕೆ ನಾಯಕ ಉದಯ ನಿಧಿ ಸ್ಟಾಲಿನ್ ಸಾರ್ವಜನಿಕ ಕಾರ್ಯಕ್ರಮ
ಒಂದರಲ್ಲಿ ತ್ರಿಷಾ ಬಗ್ಗೆ ಅಸಹ್ಯಕರವಾದ ಕಾಮೆಂಟ್ ಮಾಡಿ ಕೇಸನ್ನ ಹಾಕಿಸಿಕೊಂಡಿದ್ದಾರೆ. ಅದು ಒಂದಲ್ಲ, ಒಂಬತ್ತು ಕೇಸುಗಳನ್ನ ಹಾಕಿಸಿಕೊಂಡಿದ್ದಾರೆ. ಮೊನ್ನೆ ಮೊನ್ನೆವರೆಗೆ ಯಾರ ಬೆರಳ ತುದಿಯ ಇಶಾರೆಯಲ್ಲಿ ಅಲ್ಲಿನ ಪೊಲೀಸ್ ವ್ಯವಸ್ಥೆ ಕುಣಿತಾ ಇತ್ತೋ, ಸ್ಟಾಲಿನ್ ಮತ್ತು ಆತನ ಮಗ ಉದಯನಿಧಿಯ ಕಣ್ಸನ್ನೆಯನ್ನ ಕೂಡ ಅರ್ಥ ಮಾಡಿಕೊಳ್ಳುತ್ತಾ ಇತ್ತೋ, ಅದೇ ಪೊಲೀಸ್ ವ್ಯವಸ್ಥೆ ಸ್ಟಾಲಿನ್ ಮಗನನ್ನ ಆತುರಾತುರವಾಗಿ ವಿಚಾರಣೆಗೆ ಅಂತ ವಶಕ್ಕೂ ಪಡ್ಕೊಂಡು ರಿಲೀಸ್ ಮಾಡಿದೆ. ಈ ವಿಚಾರದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.
ಜೂ. ಸ್ಟಾಲಿನ್ ಅರೆಸ್ಟ್.. ಬಿಡುಗಡೆ..! Udhayanidhi Stalin Arrested.!
Written By
M S Raghavendra
Cheif EditorOver 30 Years of Experience in Media. Expertise in Youtube Content Creation, Choosing niche ,Digital Marketing.
Comments
No comments yet.