Global Affairs

Kim Jong Un : ಕಿಮ್ ಮತ್ತು ನಾಯಿ ಮಾಂಸ,ಇದು ಹುಚ್ಚು ದೊರೆಯ ಆದೇಶ..!

Kim Jong Un : ಕಿಮ್ ಮತ್ತು ನಾಯಿ ಮಾಂಸ,ಇದು ಹುಚ್ಚು ದೊರೆಯ ಆದೇಶ..!
ಇವತ್ತಿನ ಸುದ್ದಿ ಇರೋದು ಉತ್ತರ ಕೊರಿಯಾದಲ್ಲಿ. ಈಗ ಉತ್ತರ ಕೊರಿಯಾ ಸಿಕ್ಕಾಪಟ್ಟೆ ಬಿಸಿಲಿನಿಂದ ಕಂಗೆಟ್ಟು ಹೋಗಿದೆ. ಅಲ್ಲಿನ ಉಷ್ಣಾಂಶ ನಲವತ್ತು ಡಿಗ್ರಿಯನ್ನ ದಾಟ್ತಾ ಇದೆ. ಈ ಬಿಸಿಲನ್ನ ಎದುರಿಸುವ ನಿಟ್ಟಿನಲ್ಲಿ ಉತ್ತರ ಕೊರಿಯಾ ಬೀಚ್ ರೆಸಾಟರ್ಟ್ಗಳನ್ನ ಹೆಚ್ಚಾಗಿ ಪ್ರಮೋಟ್ ಮಾಡ್ತಾ ಇದೆ. ದೇಶದೆಲ್ಲೆಡೆ ತುರ್ತು ಅಗತ್ಯಗಳನ್ನ ಪೂರೈಸೋದಕ್ಕಾಗಿ ಆಸ್ಪತ್ರೆಗಳನ್ನ,ಕೇರ್ ಸೆಂಟರ್ಗಳನ್ನ ತೆರೆಯೋದಕ್ಕೆ ಕಿಮ್ ಆದೇಶ ಕೊಟ್ಟಿದ್ದಾನೆ. ಇದೇ ಸಂದರ್ಭದಲ್ಲೇ ಅಲ್ಲೊಂದು ವಿಚಿತ್ರ ಆದೇಶ ಹೊರ ಬಿದ್ದಿದ್ದು, ಕಿಮ್ ಜಾಂಗ್ ಉನ್ ತನ್ನ ದೇಶದ ಜನರು ಹೀಟ್ ವೇವ್​ನಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ನಾಯಿ ಮಾಂಸವನ್ನ ತಿನ್ನಿ ಅಂತ ಹೇಳಿದ್ದಾನೆ. ಇದನ್ನ ಕೇಳಿದ ಹೊರ ದೇಶಗಳು ಅಚ್ಚರಿಯ ಕಣ್ಣುಗಳಿಂದ ನೋಡ್ತಾ ಇವೆ. ಅದ್ರೆ ಉತ್ತರ ಕೊರಿಯಾದ ಜನ ಮಾತ್ರ dangogi ಡಂಗೋಗಿ ಅಥವಾ ಸ್ವೀಟ್ ಮೀಟ್​ನ ಹುಡುಕಾಟದಲ್ಲಿ ತೊಡಗಿವೆ. ಯಾಕಂದ್ರೆ ಅಲ್ಲಿ ನಾಯಿ ಮಾಂಸವನ್ನ ಈ ಹೆಸ್ರಿನಿಂದಲೇ ಕರೆಯಲಾಗುತ್ತೆ. ನಮಗೆ ಅಸಹ್ಯ ಅನಿಸುವ ಆ ಪ್ರಾಣಿಯ ಮಾಂಸ,ಉತ್ತರ ಕೊರಿಯಾದಲ್ಲಿ ಜನ ಇಷ್ಟ ಪಟ್ಟು ತಿನ್ನುವ ಆಹಾರ. ಉತ್ತರ ಕೊರಿಯಾ ಬಿಡಿ ನಮ್ಮಲ್ಲೇ ಈಶಾನ್ಯ ರಾಜ್ಯಗಳಲ್ಲಿ ಈ ನಾಯಿ ಮಾಂಸ ಅನ್ನೋದು ಸ್ವೀಕಾರಾರ್ಹ. ಈ ನಾಯಿ ಮಾಂಸ ಕೆಲ ಕಡೆಗಳಲ್ಲಿ ಇವತ್ತೂ ಬಳಕೆಯಲ್ಲಿದೆ. ಅಂತಹ ದೇಶಗಳ ಪಟ್ಟಿಯಲ್ಲಿ ಉತ್ತರ ಕೊರಿಯಾ ಕೂಡ ಇದೆ. ಹೀಗಾಗಿನೇ ಕಿಮ್ ಜಾಂಗ್ ಉನ್ ತನ್ನ ಜನ್ರಿಗೆ ಬಿಸಿಲಿನ ತಾಪದಿಂದ ಕೂಲ್ ಆಗಿರೋದಕ್ಕೆ ನಾಯಿ ಮಾಂಸದ ಸೂಪ್ ಕುಡಿಯೋದಕ್ಕೆ ಹೇಳಿದ್ದಾನೆ. ಇದಕ್ಕೆ ಸಂಬಂಧ ಪಟ್ಟ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.
Raghavendra N
Written By

Raghavendra N

Content Writer

17 years of experience in Media and Digital Media.Expertise in Scripting, Video Production,Documentary Making and ad Films

Comments

No comments yet.