Bharata

ಪಿತೃಪಕ್ಷದಲ್ಲಿ ಏನು ಮಾಡಬೇಕು ಗೊತ್ತಾ: Unknown facts about Pitru Paksha.!

ಪಿತೃಪಕ್ಷದಲ್ಲಿ ಏನು ಮಾಡಬೇಕು ಗೊತ್ತಾ: Unknown facts about Pitru Paksha.!
ಪಿತೃಪಕ್ಷ.. ಪ್ರತಿ ವರ್ಷ ಜನ್ರ ಧಾರ್ಮಿಕ ಆಚರಣೆಗಳನ್ನ ಬಡಿದೆಬ್ಬಿಸುವ ಕಾಲ. ನಮ್ಮಲ್ಲಿ ಸಾಕಷ್ಟು ಜನ ಪಿತೃಪಕ್ಷದ ಆಚರಣೆ ಮಾಡ್ತಾರೆ. ಅವರವರ ಪದ್ದತಿಗಳ ಪ್ರಕಾರ ಆಚರಣೆ ನಡೆಯುತ್ತೆ. ಸಸ್ಯಾಹಾರಿಗಳೂ ಮಾಂಸಾಹಾರಿಗಳು ಇಬ್ಬರೂ ಅದನ್ನ ಅವರವರ ಶೈಲಿಯಲ್ಲೇ ಮಾಡಿಕೊಳ್ತಾರೆ. ಇಲ್ಲಿ ಯಾರು ಹೇಗೆ ಮಾಡ್ತಾರೆ ಅನ್ನೋದು ಮುಖ್ಯ ಅಲ್ಲಾ ಆ ಹಬ್ಬದ ಹಿನ್ನೆಲೆ ಮತ್ತು ಅದನ್ನ ಆಚರಿಸೋದಕ್ಕೆ ಇರೋ ಕಾರಣಗಳು ಉದ್ದೇಶಗಳು ಮಾತ್ರ ಮುಖ್ಯ. ಇಲ್ಲಿ ಮಾಂಸಾಹಾರಿಗಳು ಸಸ್ಯಾಹಾರಿಗಳೂ ಇಬ್ಬರೂ ಕೂಡಾ ಅಲ್ಲಿ ತಮ್ಮ ಪೂರ್ವಜರನ್ನ ನೆನಪು ಮಾಡಿಕೊಳ್ತಾರೆ. ಅವರಿಗೆ ಎಡೆ ಸಮರ್ಪಿಸ್ತಾರೆ. ಪಿತೃಲೋಕಗಳಲ್ಲಿ ಇರೋ ಹಿರಿಯರನ್ನ ನೆನಪು ಮಾಡಿಕೊಂಡು, ನಮಗೆ ಈ ದೇಹ ಕೊಟ್ಟು ಒಂದಷ್ಟು ಒಳ್ಳೇ ಕೆಲಸಾ ಮಾಡೋದಕ್ಕೆ ಅವಕಾಶ ಕೊಟ್ಟವರಿಗೆ ಧನ್ಯವಾದಗಳನ್ನ ಅರ್ಪಿಸೋ ಪರ್ವ ಕಾಲ ಇದು.. ಇನ್ನು ಇದೇ ಸೆಪ್ಟಂಬರ್ 26 ರಿಂದ ಅಕ್ಟೋಬರ್ 10 ರವರೆಗೆ ಪಿತೃಪಕ್ಷ. ಆ ನಂತರ, ನವರಾತ್ರಿ ಶುರುವಾಗುತ್ತೆ. ಪಿತೃಪಕ್ಷದಲ್ಲೇ ಮಹಾಲಯ ಅಮಾವಾಸ್ಯೆ ಅತ್ಯಂತ ಶ್ರೇಷ್ಟ ಅಂತ ಕರೆಸಿಕೋಳ್ಳುತ್ತೆ. ಹಾಗಾದ್ರೆ ಏನಿದು ಪಿತೃತ್ಪಕ್ಷದ ಮಹತ್ವ.? ಇದ್ರ ಹಿಂದಿರುವ ಪೌರಾಣಿಕ ಹಿನ್ನಲೆ ಏನು.? ಪಿತೃಪಕ್ಷಕ್ಕು ಕರ್ಣನಿಗೂ ಇರೋ ನಂಟೇನು..? ಇಂಥಾ ಆಚರಣೆಗಳು ನಮ್ಮ ದೇಶದಲ್ಲಿ ಮಾತ್ರ ಇವೆಯಾ ಅಥವಾ ಹೊರಗೂ ಇವೆಲ್ಲಾ ಆಚರಣೆಯಲ್ಲಿವೆಯಾ ಅನ್ನೋದರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Raghavendra N
Written By

Raghavendra N

Content Writer

17 years of experience in Media and Digital Media.Expertise in Scripting, Video Production,Documentary Making and ad Films

Comments

No comments yet.