ಮಹಾಸಂಗಮಕ್ಕೆ ಸಜ್ಜಾಗಿದೆ ದೆಹಲಿ: BRICS 2026.!
ಬ್ರಿಕ್ಸ್ ಶೃಂಗಕ್ಕೆ ಕ್ಷಣಗಣನೆ ಆರಂಭ ಆಗಿದೆ. ಈ ಬಾರಿಯ ಬ್ರಿಕ್ಸ್ ಸಮ್ಮೇಳನದ ನಿರ್ಣಯವನ್ನ ಸಿದ್ಧಪಡಿಸುವುದು ಮತ್ತು ಅದಕ್ಕೆ ಎಲ್ಲ ದೇಶಗಳ ಒಪ್ಪಿಗೆಯನ್ನು ಪಡೆಯುವದು ಭಾರತದ ಮುಂದಿರೋ ಅತಿ ದೊಡ್ಡ ಸವಾಲು. ಬ್ರಿಕ್ಸ್ ಕೂಡ ಅಮೆರಿಕಾದ ವಿರೋಧಿ ಅಂತ ಗುರುತಿಸಿಕೊಳ್ಳಬಾರದು ಹಾಗೆ ಚೈನಾದ ಏಕಸ್ವಾಮ್ಯಕ್ಕೆ ಕೂಡ ಅದು ಒಳಗಾಗಬಾರದು .ಆ ಕೂಟದಲ್ಲಿ ಇರುವ ದೇಶಗಳ ನಡುವಿನ ವೈಮನಸ್ಯ ಬ್ರಿಕ್ಸ್ ನಿರ್ಣಯದ ಮೇಲೆ ಪ್ರಭಾವ ಪರಿಣಾಮವನ್ನ ಬೀರಬಾರದು. ಆ ಕೂಟದ ಶೃಂಗ ದೇಶಗಳನ್ನು ಒಂದು ಗೂಡಿಸೋ ಹಾಗಿರಬೇಕೆ ಹೊರತು, ಅಲ್ಲಿ ಕೂಡ ಪರಸ್ಪರ ಕಿತ್ತಾಡಿಕೊಳ್ಳುವ ಹಾಗೆ ಆಗಬಾರದು. ರಷ್ಯಾ ಚೈನಾ ಇರಾನ್ ಯುಎಇಗಳ ಪ್ರಮುಖರು ಸಮ್ಮೇಳನಕ್ಕೆ ಆಗಮಿಸುತ್ತಾ ಇದ್ದಾರೆ. ಯಾರ ಘನತೆಗೂ ಧಕ್ಕೆ ಉಂಟಾಗಬಾರದು ಹಾಗಂತ ಭಾರತ ಯಾರದ್ದೋ ಪರ ನಿಂತಿದೆ ಅಂತ ಕೂಡ ಅಲ್ಲಿ ಅನ್ನಿಸಬಾರದು. ಬ್ರಿಕ್ಸ್ ಬಗ್ಗೆ ಅಮೆರಿಕಾಗೆ ಆತಂಕಗಳಿವೆ ಹಾಗೆ ಅಮೆರಿಕಾದ ವಿರೋಧಿ ದೇಶಗಳ ಸಂಖ್ಯೆ ಕೂಡ ಅದರಲ್ಲಿ ತುಂಬಾ ಹೆಚ್ಚಿದೆ. ಹಾಗಂತ ಆ ಕೂಟ ಪ್ರಾದೇಶಿಕ ಅಭಿವೃದ್ಧಿ ಬುದ್ಧಿಗೆ ಗಮನ ಕೊಡಬೇಕೆ ಹೊರತು ಜಗತ್ತನ್ನ ಮತ್ತೆ ಇಬ್ಬಾಗ ಮಾಡಿ ಮತ್ತೊಂದು ಶೀತಲ ಸಮರಕ್ಕೆ ಕೂಡ ಕರ್ಕೊಂಡು ಹೋಗಬಾರದು ಮತ್ತು ಇದೆಲ್ಲವನ್ನ ಬ್ಯಾಲೆನ್ಸ್ ಮಾಡಬೇಕಾದ ದೊಡ್ಡ ಜವಾಬ್ದಾರಿ ಈ ಬಾರಿ ಭಾರತದ ಹೆಗಲ ಮೇಲಿದೆ ಅದಕ್ಕಾಗಿ ಅಲ್ಲಿ ಒಮ್ಮತವನ್ನು ಮೂಡಿಸುವದಕ್ಕಾಗಿ ಶೇರ್ಪಾಗಳು ಅಂದ್ರೆ ಆ ಸಮ್ಮೇಳನದಲ್ಲಿ ಭಾಗಿಯಾಗಲಿರುವ ನಾನಾ ದೇಶಗಳ ರಾಜತಾಂತ್ರಿಕರು ನಿರಂತರ ಮಾತುಕಥೆಗಳನ್ನ ನಡೆಸ್ತಾ ಇದ್ದಾರೆ ಅಲ್ಲಿ ಭಾರತ ದೊಡ್ಡ ಪ್ರಯತ್ನವನ್ನ ಮಾಡ್ತಾ ಇದೆ ಮತ್ತು ಎರಡು ದಿನಗಳ ಶೃಂಗ ಜಗತ್ತಿನ ಗಮನನ್ನ ಕೂಡ ಸೆಳಿತಾ ಇದೆ. ಹಾಗಾದ್ರೆ ಬ್ರಿಕ್ಸ್ ಸಮ್ಮೇಳನದ ಅಧ್ಯಕ್ಷತೆಯನ್ನ ವಹಿಸಿಕೊಂಡ ಭಾರತದ ಮುಂದೆ ಸದ್ಯಕ್ಕೆ ಇರೋ ಸವಾಲುಗಳೇನು? ಈ ಸಮ್ಮೇಳನಕ್ಕೆ ಯಾರೆಲ್ಲಾ ಬರ್ತಾ ಇದ್ದಾರೆ? ಅದಕ್ಕೆ ಸಿದ್ಧತೆಗಳು ಹೇಗೆ ನಡೆದಿವೆ ಮತ್ತು ಇದರಿಂದ ಭಾರತಕ್ಕಾಗುವ ಲಾಭ ಏನು ಅನ್ನೋದನ್ನ ತಿಳಿದುಕೊಳ್ಳೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Written By
M S Raghavendra
Cheif EditorOver 30 Years of Experience in Media. Expertise in Youtube Content Creation, Choosing niche ,Digital Marketing.
Comments
No comments yet.