ಇಲ್ಲಿ ಕಿತ್ತು ಅಲ್ಲಿ ಕೊಡೊದು ಅಂತಾರಲ್ಲ ಅಂತ ಕೆಲಸವನ್ನ ಕಳೆದ ಕೆಲ ವರ್ಷಗಳಿಂದಾ ರಾಜ್ಯ ಸರ್ಕಾರ(State govt) ಮಾಡ್ತಲೇ ಬರ್ತಾ ಇದೆ. ಈಗ ಅಂಥದ್ದೇ ಕೆಲಸ ಮತ್ತೆ ನಡೆದಿದೆ. ಡಿಕೆ ಶಿವಕುಮಾರ್(D K Shivakumar)ಮುಖ್ಯಮಂತ್ರಿ ಆದ ಮೇಲೆ ಮೊದಲ ಬಾರಿಗೆ ಹಾಲಿನ ದರ(Milk Price) ಏರಿಸಲಾಗ್ತಾ ಇದೆ ಅಂತಾ ಹೇಳಿಕೊಂಡು, ಒಂದೆಂಟು ರುಪಾಯಿ ಹೆಚ್ಚು ಮಾಡ್ತಾ ಇದೀವಿ ಅಂತಾ ಹೇಳ್ತಾ ಹೇಳ್ತಾ ಅದನ್ನ ಹದಿನಾಲ್ಕು ರೂಪಾಯಿ ವರೆಗೆ ಹೆಚ್ಚು ಮಾಡಿದಾರೆ. ಮಧ್ಯಮವರ್ಗದ ಜನರ ಜೇಬುಗಳ ಮೇಲೆ ಬರೆ ಹಾಕ್ತಾ ಇದೆ. ಈಗಾಗಲೇ ಹೆಚ್ಚಳವಾಗಿರೋ ಆಹಾರ ಪದಾರ್ಥಗಳ ಬೆಲೆಯ ಕಾರಣದಿಂದ ಜನ ಬೇಸತ್ತಿದ್ದಾರೆ. ಈ ಹಾಲಿನ(Milk) ಏರಿಕೆಯ ಹಿಂದಿನ ಕಾರಣ ಏನು.? ಗ್ರಾಹಕರ ಜೇಬಿಗೆ ಕತ್ತರಿ ಹಾಕಿದ್ದರಲ್ಲಿ, ಸರ್ಕಾರ ಹಾಲು ಉತ್ಪಾದಕ ರೈತರಿಗೆ(Farmers) ಏಷ್ಟು ಕೊಡ್ತಾ ಇದೆ. ಗ್ರಾಹಕರ ಮೇಲೆ ಇದ್ರಿಂದ ಆಗುವ ಪರಿಣಾಮ ಏನು ಅನ್ನೊದ್ರ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ. ನವಂಬರ್ ಒಂದು.. ಕನ್ನಡ ರಾಜ್ಯೋತ್ಸವದ ಖುಷಿಯಲ್ಲಿ ರಾಜ್ಯದ ಜನ ಇದ್ರು.. ಆದ್ರೆ ಅವತ್ತೇ ಸರ್ಕಾರ(Karnataka Govt) ಹಾಲಿನ ರುಚಿ ಕೆಡಿಸೋ ಕೆಲಸಾ ಮಾಡಿದೆ. ಹಾಲಿನ ಬೆಲೆ ಲೀಟರ್ ಗೆ 8 ರೂಪಾಯಿಂದ 14 ರೂಪಾಯಿವರೆಗೂ ಹೆಚ್ಚಳ ಮಾಡಲಾಗಿದೆ. ಹೀಗಾಗಿ ಇನ್ನು ಮುಂದೆ ಒಂದು ಕುಟುಂಬ ಕಡಿಮೆ ಅಂದ್ರೆ 120 ರೂಪಾಯಿಗಳನ್ನ ತಮ್ಮ ಹೆಚ್ಚುವರಿ ಬಜೆಟ್ಗೆ(Budget) ಸೇರಿಸಬೇಕಾಗುತ್ತೆ. ಅರೇ ಬರೀ ನೂರಿಪ್ಪತ್ತು ರೂಪಾಯಿನಾ ಅನ್ಕೋಬೇಡಿ. ಈಗ ಹಾಲಿನ ದರ ಎಷ್ಟೆಷ್ಟು ಹೆಚ್ಚಾಗಿದೆ ಅನ್ನೋದರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
ಹಾಲಿಗೆ ಬೆಲೆ ಏರಿಕೆ ಹುಳಿ: Milk Price Hike in Karnataka .!
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.