ಪ್ರತಿಪಕ್ಷಗಳ ತೀವ್ರ ಗದ್ದಲದ ನಡುವೆ ಲೋಕಸಭೆಯಲ್ಲಿ Public Examinations (Prevention of Unfair Means) ಕಾಯ್ದೆ ಧ್ವನಿಮತದ ಮೂಲಕ ಅಂಗೀಕಾರಗೊಂಡಿದೆ. ಇದೇ ವೇಳೆ ವಂದೇ ಮಾತರಂ ಗೀತೆಗೆ ಅವಮಾನ ಮಾಡುವುದನ್ನು ಶಿಕ್ಷಾರ್ಹ ಅಪರಾಧವನ್ನಾಗಿಸುವ Prevention of Insults to National Honour (Amendment) Bill 2026 ಮಂಡನೆಯ ವೇಳೆ ಪ್ರತಿಪಕ್ಷ ಸದಸ್ಯರು ಚರ್ಚೆ ಬಹಿಷ್ಕರಿಸಿ ಸದನದಿಂದ ಹೊರನಡೆದಿದ್ದಾರೆ. ಈ Monsoon Session ನಲ್ಲಿ ವಿದೇಶಿ ದೇಣಿಗೆಗೆ ಸಂಬಂಧಿಸಿದ FCRA ಬಿಲ್ ಸೇರಿ ಹಲವು ಮಹತ್ವದ ಮಸೂದೆಗಳ ಮಂಡನೆಗೆ ಸರ್ಕಾರ ಸಿದ್ಧತೆ ನಡೆಸಿದೆ.
ಪರೀಕ್ಷಾ ಅಕ್ರಮಗಳ ಬಿಲ್ ಮಂಡನೆಗೂ ಮುನ್ನ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿ ಪ್ರತಿಭಟನೆ ನಡೆದಿದ್ದು, ಪೊಲೀಸರ ಲಾಠಿ ಚಾರ್ಜ್ ಪ್ರಕರಣ ಕೂಡ ಸದನದಲ್ಲಿ ಪ್ರತಿಧ್ವನಿಸಿತು. ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ Amit Shah ಅವರನ್ನು ಗುರಿಯಾಗಿಸಿ ಶಿಕ್ಷಣ ಸುಧಾರಣೆ ಹಾಗೂ ವಿದ್ಯಾರ್ಥಿ ಪ್ರತಿಭಟನೆಗಳ ಬಗ್ಗೆ ಸುದೀರ್ಘ ಭಾಷಣ ಮಾಡಿದರು. ಆದರೆ ಸರ್ಕಾರ ವಿದ್ಯಾರ್ಥಿಗಳ ಮೇಲೆ ಗುಂಡು ಅಥವಾ ಪೆಲೆಟ್ ಬಳಕೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿತು.
ಭಾರತದಲ್ಲಿ competitive exam coaching ಉದ್ಯಮ ಬೃಹತ್ ಮಟ್ಟಕ್ಕೆ ಬೆಳೆದಿದೆ. ಕೇಂದ್ರ ಸರ್ಕಾರದ ಒಟ್ಟು ಶಿಕ್ಷಣ ಬಜೆಟ್ ₹1,39,289 ಕೋಟಿ ಇದ್ದರೆ, ಕೋಚಿಂಗ್ ಸೆಂಟರ್‌ಗಳ ವಾರ್ಷಿಕ ವಹಿವಾಟು ₹57,000–58,000 ಕೋಟಿಗಳಷ್ಟಿದ್ದು, ಇದು higher education ಬಜೆಟ್‌ಗಿಂತ (₹56,000 ಕೋಟಿ) ಹೆಚ್ಚು. ದೇಶದಲ್ಲಿ ಸುಮಾರು 68,000 ನೋಂದಾಯಿತ coaching centres ಇದ್ದು, ಮುಂದಿನ ಎರಡು ವರ್ಷಗಳಲ್ಲಿ ಈ ವಹಿವಾಟು ₹1,30,000 ಕೋಟಿ ತಲುಪುವ ಅಂದಾಜಿದೆ. NEET ಪರೀಕ್ಷೆಗೆ ವರ್ಷಕ್ಕೆ 24 ಲಕ್ಷ ವಿದ್ಯಾರ್ಥಿಗಳು ಹಾಜರಾದರೂ ಕೇವಲ 1,36,939 ಮೆಡಿಕಲ್ ಸೀಟುಗಳಿದ್ದು, ಸುಮಾರು 20 ಲಕ್ಷ ವಿದ್ಯಾರ್ಥಿಗಳು ಪ್ರವೇಶ ಪಡೆಯದೆ ಹೊರಗುಳಿಯುತ್ತಾರೆ.
Also Read: ಕೇಂದ್ರದ ಹೊಸ ಹೇಳಿಕೆಯಿಂದ ಕಾಂಗ್ರೆಸ್ ಸರ್ಕಾರಕ್ಕೆ ಇಕ್ಕಟ್ಟು: Mekedatu Dam Dispute.!
ಖಾಸಗಿ ಮತ್ತು ಸರ್ಕಾರಿ ಶಾಲೆಗಳ ನಡುವಿನ ಸಿಲಬಸ್ ಅಸಮಾನತೆ, ಗುಣಮಟ್ಟದ ಕೊರತೆ National Education System ಸುಧಾರಣೆಗೆ ಒತ್ತಾಯಿಸುತ್ತಿದೆ. Job-oriented courses ಹಾಗೂ ಉದ್ಯೋಗ ಸೃಷ್ಟಿ ಇಲ್ಲದೆ ಕೇವಲ ಡಾಕ್ಟರ್-ಇಂಜಿನಿಯರ್ ಕನಸುಗಳನ್ನೇ ಮಾರಾಟ ಮಾಡುವ ಪ್ರವೃತ್ತಿ ವಿದ್ಯಾರ್ಥಿಗಳ ಆತ್ಮವಿಶ್ವಾಸಕ್ಕೆ ಧಕ್ಕೆ ತರುತ್ತಿದೆ ಎಂಬ ಕಳವಳ ವ್ಯಕ್ತವಾಗಿದೆ.
ಕೇಂದ್ರ ಸರ್ಕಾರ ರಚಿಸಿರುವ Exam Reform Committee ಯಲ್ಲಿ Nandan Nilekani, ISRO ಅಧ್ಯಕ್ಷ Somanath, IIT Madras ನ V. Kamakoti ಅವರಂತಹ ಪರಿಣಿತರಿದ್ದಾರೆ.
Public Examinations Prevention of Unfair Means ಕಾಯ್ದೆಯಡಿ ಪ್ರಶ್ನೆ ಪತ್ರಿಕೆ ಸೋರಿಕೆಗೆ ದಂಡ ₹1 ಕೋಟಿಯವರೆಗೆ ಹೆಚ್ಚಿಸಲಾಗಿದ್ದು, organised crime ಗೆ ಕನಿಷ್ಠ 5-7 ವರ್ಷ, ಗರಿಷ್ಠ 10 ವರ್ಷ ಜೈಲು ಶಿಕ್ಷೆ ಹಾಗೂ ₹10 ಕೋಟಿಯವರೆಗೆ ದಂಡ ವಿಧಿಸುವ ಅವಕಾಶವಿದೆ. ಪ್ರತಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ Fast Track Courts ಸ್ಥಾಪನೆ, ಎರಡು ತಿಂಗಳಲ್ಲಿ ತನಿಖೆ ಪೂರ್ಣ ಹಾಗೂ ಮೂರು ತಿಂಗಳಲ್ಲಿ ವಿಚಾರಣೆ ಮುಗಿಸುವ ಕಟ್ಟುನಿಟ್ಟಿನ ಕಾಲಮಿತಿ ಈ ಕಾಯ್ದೆಯಲ್ಲಿದೆ.
ಸಂಸತ್ತಿನಲ್ಲಿ ಗದ್ದಲ, ಪರೀಕ್ಷಾ ಅಕ್ರಮ ಕಾಯ್ದೆಗೆ ಅಂಗೀಕಾರ: Monsoon Session 2026
Written By
M S Raghavendra
Cheif EditorOver 30 Years of Experience in Media. Expertise in Youtube Content Creation, Choosing niche ,Digital Marketing.
Comments
No comments yet.