ಕರ್ನಾಟಕ ಇತಿಹಾಸದ ಪುಟಗಳಲ್ಲಿ ಕಣ್ಣಾಡಿಸುತ್ತಾ ಹೋದ್ರೆ ಅದೆಷ್ಟೋ ಕುತೂಹಲಕಾರಿ ವಿಚಾರಗಳು ನಮ್ಮನ್ನ ಆಶ್ಚರ್ಯಕ್ಕೆ ಈಡು ಮಾಡುತ್ತವೆ. ಅದರಲ್ಲೂ ಈ ಕಪ್ಪು ಮಣ್ಣಿನ ಚರಿತ್ರೆಯನ್ನ ನೆನಪು ಮಾಡಿಕೊಳ್ಳುವಾಗ ಅವನೊಬ್ಬನನ್ನ ಮರೆಯೋ ಹಾಗೇ ಇಲ್ಲ. ಕನ್ನಡಿಗರಿಗಾಗಿ ಒಂದು ಸಾಮ್ರಾಜ್ಯವನ್ನೇ ಕಟ್ಟಿ ಉತ್ತರ ಭಾರತದ ಸಾಮ್ರಾಟನಿಗೆ ಸೋಲಿನ ರುಚಿ ತೋರಿಸಿ ಇವತ್ತಿಗೂ ಮಾಸದ ಅದ್ಭುತ ಕಲಾಕೃತಿಗಳನ್ನ ನಮಗಾಗಿ ಬಿಟ್ಟು ಹೋಗಿರೋ ಆ ವೀರಾಗ್ರಣಿಯ ಪರಿಚಯವನ್ನ ನಿಮಗೆ ಮಾಡಿಕೊಡಬೇಕು. ಅದು ಕರ್ನಾಟಕದ ಹೆಮ್ಮೆಯ ಸಾಮ್ರಾಜ್ಯ. ಉತ್ತರ ಭಾರತದ ಸಾಮ್ರಾಟನಿಗೆ ಸೋಲಿನ ರುಚಿ ತೋರಿಸಿದ್ದ ವಂಶ ಅದು. ರಾಜಾಧಿರಾಜರು ಅಹವಮಲ್ಲರು ಇದ್ದ ಭೂಮಿ ಅದು. ಕರ್ನಾಟಕದ ಇತಿಹಾಸದಲ್ಲಿ ತಮ್ಮದೇ ಆದ ಛಾಪು ಮೂಡಿಸಿ, ತಮ್ಮ ಆಡಳಿತದಿಂದಲೇ ಇಂದಿಗೂ ತಮ್ಮ ಹೆಸರನ್ನ ಜೀವಂತವಾಗಿ ಉಳಿಸಿಕೊಂಡಿರುವ ಅತಿ ದೊಡ್ಡ ಸಾಮ್ರಾಜ್ಯ ಅದು. ಅಂತಹ ಸಾಮ್ರಾಜ್ಯಕ್ಕೆ ಮುಕುಟ ಪ್ರಾಯದಂತಿದ್ದವನು ಆ ಸಾಮ್ರಾಟ. ಅವನೇ ದಕ್ಷಿಣ ಪಥೇಶ್ವರ ಬಿರುದಾಂಕಿತ ಇಮ್ಮಡಿ ಪುಲಕೇಶಿ. ಅವನನ್ನ ಇತಿಹಾಸಕಾರರು ರಣವಿಕ್ರಮ ಅಂತ ಕರೀತಾರೆ. ಸಾಮ್ರಾಜ್ಯ ವಿಸ್ತರಣಾಕಾಂಕ್ಷಿ ಅಂತ ಗುರುತಿಸುತ್ತಾರೆ. ಅಂದ ಹಾಗೆ ಇಮ್ಮಡಿ ಪುಲಿಕೇಶಿಯ ಮೂಲ ಹೆಸರು ಎರೆಯ ಅಂತ. ಈ ಇಮ್ಮಡಿ ಪುಲಿಕೇಶಿ ತನ್ನ ಅಜ್ಜಿಯ ಮಾರ್ಗದರ್ಶನದಲ್ಲಿ ರಾಜಧಾನಿ ಬಾದಾಮಿಯಿಂದ ದೂರದಲ್ಲಿ ಬೆಳೀತಾನೆ. ಪ್ರೌಢಾವಸ್ಥೆಗೆ ಬಂದಾಗ ಪುಲಿಕೇಶಿ ತನ್ನ ಚಿಕ್ಕಪ್ಪನೊಂದಿಗೆ ಯುದ್ಧ ಮಾಡಬೇಕಾಗಿ ಬರುತ್ತೆ. ಚಾಲುಕ್ಯ ಕುಲತಿಲಕ ಅಂತಲೇ ಗುರುತಿಸಿಕೊಂಡಿದ್ದ ಮಂಗಳೇಶ ರಾಜ್ಯಾಧಿಕಾರಕ್ಕಾಗಿ ಅಣ್ಣನ ಮಗನನ್ನೇ ಕೊಲ್ಲಿಸೋದಕ್ಕೆ ಮುಂದಾಗಿದ್ದ. ಹೀಗಾಗಿ ಪುಲಿಕೇಶಿ ಮತ್ತು ಮಂಗಳೇಶನ ನಡುವೆ ಯುದ್ಧ ನಡೀತು. ಕ್ರಿಸ್ತಶಕ ಆರುನೂರ ಒಂಭತ್ತರಲ್ಲಿ ತನ್ನ ಚಿಕ್ಕಪ್ಪ ಮಂಗಳೇಶನನ್ನ ಇವತ್ತಿನ ಆಂಧ್ರಪ್ರದೇಶದ ಅನಂತಪುರಂ ಬಳಿ ನಡೆದ ಯುದ್ಧದಲ್ಲಿ ಕೊಂದು ವಾತಾಪಿಯ ಸಿಂಹಾಸನವನ್ನ ಅಧಿರೋಹಿಸುತ್ತಾನೆ ಪುಲಕೇಶಿ. ಹೀಗೆ ಚಿಕ್ಕಪ್ಪನ ಮೇಲಿನ ಯುದ್ಧವನ್ನ ಗೆದ್ದ ಮೇಲೆ ಈ ಅರಿಭಯಂಕರ ಮತ್ತ್ಯಾವತ್ತು ತನ್ನ ಜೀವನದಲ್ಲಿ ಹಿಂತಿರುಗಿ ನೋಡಲೇ ಇಲ್ಲ. ತನ್ನ ಸಾಧನೆಯ ಹಾದಿಯಲ್ಲಿ ಬಂದ ಅದೆಷ್ಟೋ ಸಂಕಷ್ಟಗಳನ್ನ ತನ್ನ ಚತುರ ಬುದ್ಧಿಯಿಂದ ನಿವಾರಿಸಿಕೊಂಡು ಮೂವತ್ತಮೂರು ವರ್ಷಗಳ ಕಾಲ ಚಾಲುಕ್ಯ ಸಾಮ್ರಾಜ್ಯದ ಚುಕ್ಕಾಣಿಯನ್ನ ಹಿಡಿದಿದ್ದ. ಅಂದ್ ಹಾಗೆ ಈ ಇಮ್ಮಡಿ ಪುಲಕೇಶಿಯ ಆಡಳಿತಾವಧಿ ಹೂವಿನ ಹಾಸಿಗೆಯೇನಾಗಿರಲಿಲ್ಲ. ಅದು ಸಂಘರ್ಷದಿಂದ ಗಿಟ್ಟಿಸಿಕೊಂಡ ಸಿಂಹಾಸನ. ಅದರ ತುಂಬಾ ಮುಳ್ಳುಗಳೇ ಇದ್ವು. ಪುಲಿಕೇಶಿಯ ಸಾಧನೆಯನ್ನ ಸಂಪೂರ್ಣವಾಗಿ ತಿಳಿಯಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.
Also Read: 5300 ವರ್ಷಗಳ ಹಿಂದೆಯೇ ದಕ್ಷಿಣ ಭಾರತದಲ್ಲಿ Iron Age: Tamirabarani River.!
ಪುಲಕೇಶಿ ಎಂಬ ಕನ್ನಡ ವಿಕ್ರಮನ ಕತೆ: Pulakeshi - The pride of Karnataka..!
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.