ರಷ್ಯಾ ಮತ್ತು ಯುಕ್ರೆನ್ ಯುದ್ದ ಯುರೋಪ್ಗೆ ಹಬ್ಬುತ್ತಾ.? ಇಂತಹದ್ದೊಂದು ಭಯ ಸಾಕಷ್ಟು ತಿಂಗಳುಗಳಿಂದ ಕಾಡ್ತಲೇ ಇದೆ. ಪೋಲ್ಯಾಂಡ್ ಈ ಬಗ್ಗೆ ಎಚ್ಚರಿಸ್ಥಾ ಇದೆ. ಬಾಲ್ಟಿಕ್ ದೇಶಗಳು ರಷ್ಯಾದ ನಡೆಯನ್ನ ಅನುಮಾನಿಸ್ತಾ ಇವೆ..ಇದೇ ವೇಳೆ ರಷ್ಯಾ ಕೂಡಾ ತನ್ನ ವಿರುದ್ದ ಮಾತಾಡ್ತಾ ಇರುವ ಯುರೋಪಿಯನ್ ಯೂನಿಯನ್ ವಿರುದ್ದ ಬೆದರಿಕೆಯನ್ನ ಒಡ್ಡಿದ್ದು, ಅಣ್ವಸ್ತ್ರಗಳ ಭಯವನ್ನ ಅವ್ರು ತೋರಿಸ್ತಾ ಇದ್ದಾರೆ. ಇದ್ರ ನಡುವೆ ಭಾರತ ರಷ್ಯಾ ಮತ್ತು ಯುಕ್ರೆನ್ ನಡುವಿನ ಸಂಧಾನಕ್ಕೆ ಪ್ರಯತ್ನ ಪಡ್ತಾ ಇದ್ದು ಭಾರತದ ಈ ಪ್ರಯತ್ನಕ್ಕೆ ಫಿನ್ಲ್ಯಾಂಡ್ ಬೆಂಬಲವನ್ನ ಕೊಟ್ಟಿದ್ದು ಭಾರತಕ್ಕೆ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸ್ಥಾನ ಸಿಗಬೇಕು ಅನ್ನೋವಾದಕ್ಕೆ ಪೂರಕವಾಗಿ ನಿಂತಿದೆ. ಇದ್ರ ನಡುವೆ ಈ ಯುದ್ದ ಯುರೋಪ್ಗೆ ಹರಡಬಹುದ ಅನ್ನೊ ಭಯದಲ್ಲಿ ಫ್ರಾನ್ಸ್ ಈಗ ಕ್ಷಿಪಣಿಗಳ ಪರೀಕ್ಷೆಗಳನ್ನ ನಡೆಸ್ತಾ ಇರೋದು, ಯುದ್ದ ಅನ್ ಪ್ರಿಡಿಕ್ಟಬಲ್ ಆಗುವ ಕಡೆಗೆ ಹೋಗ್ತಾ ಇದೆ ಅನ್ನೋ ಅನುಮಾನವನ್ನ ಹುಟ್ಟಿಸ್ತಾ ಇದೆ. ಹಾಗಾದ್ರೆ ಏನಿದು ಯುದ್ಧದ ದಿಕ್ಕು ಬದಲಾಗ್ತಾ ಇರುವ ಕಥೆ.
ಇಲ್ಲಿ ಫ್ರಾನ್ಸ್ ಪರೀಕ್ಷೇ ಮಾಡಿರೋ ಮಿಸೈಲ್ ಎಂಥದ್ದು, ರಷ್ಯಾದ ವಿರುದ್ದ ಫ್ರಾನ್ಸ್ ಕುಡ ಅನ್ವಸ್ತ್ರ ಯುದ್ದಕ್ಕೆ ಸಿದ್ದವಾಗಿ ಬಿಡ್ತಾ ಅನ್ನೊದ್ರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
ಅಣುಯುದ್ಧಕ್ಕೆ ಸಿದ್ಧ ಆದ್ವಾ ಫ್ರಾನ್ಸ್ - ರಷ್ಯಾ: France Vs Russia.!
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.