Bharata

ರೋಹಿಂಗ್ಯಾಗೆ ವಿಶೇಷ ಆಥಿತ್ಯ: | Jammu & Kashmir Rohingya Debate.!

ರೋಹಿಂಗ್ಯಾಗೆ ವಿಶೇಷ ಆಥಿತ್ಯ: | Jammu & Kashmir Rohingya Debate.!
ಭಾರತದಿಂದಾ ಬಾಂಗ್ಲಾ ದೇಶೀಯರನ್ನ ಹೊರ ಹಾಕುವ ಕೆಲಸಕ್ಕೆ ವೇಗ ಸಿಗ್ತಾ ಇದೆ. ಅದರಲ್ಲೂ ಜಮ್ಮೂ ಕಾಶ್ಮೀರದ ಭಾಗದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ದೇಶೀಯರನ್ನ ಸಿಲಿಗುರಿ ಕಾರಿಡಾರ್ ಮೂಲಕ ಬಾಂಗ್ಲಾಗೆ ಕಳಿಸಲಾಗ್ತಾ ಇದೆ. ಅಪರೂಪಕ್ಕೆ ಬಾಂಗ್ಲಾ ದೇಶ ಕೂಡಾ ತನ್ನ ನಾಗರಿಕರನ್ನ ಒಳಗೆ ತಗೊಳೋದಕ್ಕೆ ಅಂಗೀಕರಿಸಿದೆ. ಒಟ್ಟು ಆರುನೂರು ಮಂದಿಯನ್ನ ಈಗಾಗಲೇ ಅಲ್ಲಿಗೆ ಕರಕೊಂಡು ಹೋಗಿದಾರೆ, ಹಂತಹಂತವಾಗಿ ಅವರನ್ನ ಗಡಿ ದಾಟಿಸಲಾಗ್ತಾ ಇದೆ. ಇದೇ ಸಂದರ್ಭದಲ್ಲಿ ಜಮ್ಮೂ ಕಾಶ್ಮೀರದಲ್ಲಿನ ರೋಹಿಂಗ್ಯಾಗಳನ್ನ ಕೂಡಾ ಪತ್ತೆ ಹಚ್ಚಿ ಅವರನ್ನೂ ದೇಶದಿಂದಾ ಹೊರ ಹಾಕೋ ಪ್ರಯತ್ನಗಳು ಆಗಿದ್ದು, ಇದಕ್ಕೆ ಕಾಶ್ಮೀರದಲ್ಲಿನ ಆಡಳಿತ ಹಾಗೂ ಪ್ರತಿ ಪಕ್ಷಗಳ ವಿರೋಧ ಇದೆ. ಅಲ್ಲಿನ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ರೋಹಿಂಗ್ಯಾಗಳನ್ನ ಹೊರ ಹಾಕೋದು ಅಮಾನವೀಯ ಅಂತಾ ಹೇಳಿದಾರೆ. ಕಾನೂನುಬಾಹಿರ ಅಂತಾ ಕೂಡಾ ಕರೆದಿದಾರೆ. ಹಾಗಾದ್ರೆ ರೋಹಿಂಗ್ಯಾಗಳನ್ನ ಭಾರತದಲ್ಲಿ ಇಟ್ಟಕೊಳ್ಳಬೇಕು ಅನ್ನೋಥರದ ಕಾನೂನು ಕಟ್ಟಳೆಗಳು ಏನಾದ್ರೂ ಇವೆಯಾ..? ಇಷ್ಟಕ್ಕೂ ರೋಹಿಂಗ್ಯಾಗಳನ್ನ ಹೊರ ಹಾಕೋದು ಬಾಂಗ್ಲಾ ದೇಶೀಯರನ್ನ ಹೊರ ಹಾಕಿದಷ್ಟು ಸುಲಭ ಯಾಕಲ್ಲಾ..? ಕಾಶ್ಮೀರದಲ್ಲಿ ಓಮರ್ ಹಾಗೂ ಅಲ್ಲಿನ ರಾಜಕೀಯ ಪಕ್ಷಗಳ ವಿರೋಧಕ್ಕೆ ಕಾರಣ ಏನು ಅನ್ನೊದ್ರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
M S Raghavendra
Written By

M S Raghavendra

Cheif Editor

Over 30 Years of Experience in Media. Expertise in Youtube Content Creation, Choosing niche ,Digital Marketing.

Comments

No comments yet.