Global Affairs

ಆ ಮೂರು ದೇಶಗಳಿಗಿಂತಾ ಇರಾನೇ ಸ್ಟ್ರಾಂಗಾ: Islamic NATO.!

ಆ ಮೂರು ದೇಶಗಳಿಗಿಂತಾ ಇರಾನೇ ಸ್ಟ್ರಾಂಗಾ: Islamic NATO.!
ಭಾರತ ಇಸ್ರೇಲ್ ಹಾಗೂ ಇರಾನ್ ಗಳ ವಿರುದ್ದ ಮಧ್ಯ ಏಷ್ಯಾದಲ್ಲಿ ಒಂದು ಸೇನಾ ಸಹಕಾರ ಕೂಟ ತಲೆ ಎತ್ತಿದೆ. ಯಾರೊಬ್ಬರ ಮೇಲೆ ದಾಳಿ ಆದ್ರೂ ಅದು ಮೂರೂ ಮಂದಿಯ ಮೇಲೆ ದಾಳಿ ಆದಂತೆ ಅನ್ನೋ ತತ್ವದ ಮೇಲೆ ಸಿದ್ದ ಗೊಂಡಿರೋ ಈ ಕೂಟದಲ್ಲಿ ಮೂರೂ ಇಸ್ಲಾಮಿಕ್ ದೇಶಗಳಿಗೆ ಮೆಕ್ಕಾದಲ್ಲಿ ಒಪ್ಪಂದಕ್ಕೆ ಸಹಿ ಬಿದ್ದಿದೆ ಹೀಗಾಗಿಇದನ್ನ ಇಸ್ಲಾಮಿಕ್ ನ್ಯಾಟೋ ಅಂತಾ ಒಂದಷ್ಟು ಜನ ಕರೀತಾ ಇದಾರೆ. ಈ ಕೂಟಕ್ಕೆ ಇನ್ನಷ್ಟು ಮುಸ್ಲಿಂ ದೇಶಗಳನ್ನ ಸೇರ್ಪಡೆ ಮಾಡಿಕೊಳ್ಳೋ ಪ್ರಯತ್ನವನ್ನ ಟರ್ಕಿ ಪಾಕಿಸ್ತಾನಗಳು ಶುರು ಮಾಡ್ತಾ ಇವೆ. ಆದ್ರೆ, ಇಲ್ಲಿ ಮೂರೂ ದೇಶಗಳಿಗಿರೋ ಪ್ರತ್ಯೇಕ ಆಸಕ್ತಿಗಳು, ಪ್ರತ್ಯೇಕ ಶತ್ರುತ್ವ ಹಾಗೂ ಸ್ನೇಹಗಳು ಹೆಚ್ಚು ಇಸ್ಲಾಮಿಕ್ ದೇಶಗಳು ಇತ್ತ ಆಕರ್ಷಿತಗೊಳ್ಳದ ಹಾಗೆ ತಡೀತಾ ಇವೆ. ಇನ್ನು ಈ ದೇಶಗಳಲ್ಲಿ ಒಂದು ಅಣು ಶಕ್ತಿ . ಇನ್ನೊಂದು ಆರ್ಥಿಕವಾಗಿ ಹಾಗೂ ಆಮದು ಆಯುಧಗಳಿಂದಾ ಅತ್ಯಂತ ಬಲವಾದ ಶಸ್ತ್ರಾಸ್ತ್ರಗಳನ್ನ ಹೊಂದಿರೋ ದೇಶ ಅನ್ನಿಸಿಕೊಂಡ್ರೆ ಮತ್ತೊಂದು ಅತಿ ದೊಡ್ಡ ಸೇನೆ ಹಾಗೂ ಆಯುಧ ತಯಾರಿಕಾ ಸಾಮರ್ಥ್ಯವನ್ನ ಹೊಂದಿರೋ ದೇಶ. ಹಾಗಾದ್ರೆ ಈ ಮೂರೂ ಸೇರಿದ್ರೆ ಭಾರತ ಮತ್ತು ಇಸ್ರೇಲ್ ಗಳನ್ನ ಎದುರಿಸೊ ಶಕ್ತಿ ಸಾಮರ್ಥ್ಯ ಹೊಂದಿವೆಯಾ..? ಅಟ್ ಲೀಸ್ಟ್ ಇರಾನಿನ ಸೇನಾ ಶಕ್ತಿಗೆ ಇವು ಸರಿ ಹೊಂದುತ್ವಾ..? ಈ ಇಸ್ಲಾಮಿಕ್ ನ್ಯಾಟೋ ದೇಶಗಳ ಶಕ್ತಿ ಸಾಮರ್ಥ್ಯಗಳು ಏನು ಅನ್ನೋ ಬಗ್ಗೆ ವಿವರವಾಗಿ ತಿಳಿದುಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

Also Read: ಇಸ್ಲಾಮಿಕ್ ನ್ಯಾಟೋ ಆದ್ರೆ ಭಾರತಕ್ಕೇನು ಸಮಸ್ಯೆ : Saudi–Pakistan–Turkey strategic equation.!
M S Raghavendra
Written By

M S Raghavendra

Cheif Editor

Over 30 Years of Experience in Media. Expertise in Youtube Content Creation, Choosing niche ,Digital Marketing.

Comments

No comments yet.