ಅಖಿಲಾಂಡ ಕೋಟಿ ಬ್ರಹ್ಮಾಂಡ ಪಾಲ, ಅಲಮೇಲುಮಂಗ ಮನೋಲ್ಲಾಸಲೋಲ - ಸಪ್ತಗಿರಿಗಳ ಮೇಲೆ ನೆಲೆಸಿರುವ ಶ್ರೀವೆಂಕಟೇಶ (Sri Venkateswara)ನ ಈ ದಿವ್ಯ ನಾಮಸ್ಮರಣೆ ಪ್ರತಿನಿತ್ಯ ಲಕ್ಷಾಂತರ ಭಕ್ತರ ಬಾಯಲ್ಲಿ ಕೇಳಿಬರುತ್ತದೆ. ಶ್ರೀ ವೆಂಕಟೇಶ್ವರ ದೇವಾಲಯ (Tirupati Temple) ಅತ್ಯಂತ ಪ್ರಾಚೀನ ಹಾಗೂ ಜನಪ್ರಿಯ ಧಾರ್ಮಿಕ ಕೇಂದ್ರ. ಗೋವಿಂದನ ನಾಮಸ್ಮರಣೆ ಮಾಡಿಕೊಂಡು ನಿತ್ಯ ಲಕ್ಷಾಂತರ ಭಕ್ತರು ಸ್ವಾಮಿಯ ದಿವ್ಯ ದರ್ಶನ ಪಡೆದು ಪುನೀತರಾಗುತ್ತಾರೆ. ಈ ಮನಮೋಹಕ ದೇವಸ್ಥಾನ ಪ್ರಪಂಚದಲ್ಲೇ ಶ್ರೀಮಂತ ಹಾಗೂ ಹೆಚ್ಚು ಪ್ರಖ್ಯಾತಿಯ ಯಾತ್ರಾ ಕ್ಷೇತ್ರಗಳಲ್ಲಿ ಒಂದು. ಈ ಭಗವಂತನು ಬಾಲಾಜಿ, ವೆಂಕಟೇಶ್ವರ, ವೆಂಕಟಾಚಲಪತಿ, ಶ್ರೀನಿವಾಸ ಮತ್ತು ಏಡುಕೊಂಡಲವಾಡ ಎಂಬಿತ್ಯಾದಿ ನಾಮಗಳಿಂದ ಪ್ರಖ್ಯಾತನಾಗಿದ್ದಾನೆ.
ಗರ್ಭಗುಡಿಯಲ್ಲಿರುವ ತಿಮ್ಮಪ್ಪನ ವಿಗ್ರಹವೇ ಒಂದು ಅದ್ಭುತ. ಪ್ರಪಂಚದ ಯಾವ ಭಾಗದಲ್ಲೂ ಇಂತಹ ಭವ್ಯ ವಿಗ್ರಹವನ್ನು ನೋಡುವುದಕ್ಕೆ ಸಾಧ್ಯವಿಲ್ಲ. ಸಾವಿರಾರು ವರ್ಷಗಳ ಹಿಂದೆ ಉದ್ಭವಿಸಿರುವ ಈ ಉದ್ಭವಮೂರ್ತಿ (Udbhava Murthy) ಇಂದಿಗೂ ಹಾಗೇ ಇದೆ. ನಿತ್ಯ ಪೂಜೆ, ಪುನಸ್ಕಾರ, ಅಭಿಷೇಕಗಳು ನಡೆದರೂ ವಿಗ್ರಹಕ್ಕೆ ಧಕ್ಕೆಯಾಗಿಲ್ಲ, ತನ್ನ ಹೊಳಪನ್ನೂ ಕಳೆದುಕೊಂಡಿಲ್ಲ. ವಿಗ್ರಹಕ್ಕೆ ಪ್ರತಿನಿತ್ಯ ಹಚ್ಚಲಾಗುವ ಪಚ್ಚ ಕರ್ಪೂರದ ಸ್ಪರ್ಶದಿಂದ ಭಾರಿ ಗಾತ್ರದ ಕಲ್ಲುಗಳೂ ಕರಗಿಹೋಗುತ್ತವೆ, ಆದರೆ ಶತಮಾನಗಳಿಂದ ಬಳಸುತ್ತಿದ್ದರೂ ವೆಂಕಟೇಶ್ವರನ ವಿಗ್ರಹಕ್ಕೆ ಒಂದಿಂಚೂ ಧಕ್ಕೆಯಾಗಿಲ್ಲ ಎಂಬುದೇ ಈ ವಿಗ್ರಹದ ವಿಶೇಷ.
ದಂತಕಥೆಯ ಪ್ರಕಾರ 9 ಅಡಿ ಎತ್ತರದ ಈ ವಿಗ್ರಹ ಮಾನವ ನಿರ್ಮಿತವಲ್ಲ. ಸುಮಾರು 35ರಿಂದ 40 ಇಂಚು ವಿಶಾಲ ಎದೆ, ಅಂದಾಜು 27 ಇಂಚು ಸೊಂಟದ ವಿಸ್ತಾರ ಹೊಂದಿರುವ ಈ ವಿಗ್ರಹ ಬ್ಲಾಕ್ ಬಸಾಲ್ಟ್ ಹಾಗೂ ಗ್ರಾನೈಟ್ ಕಲ್ಲಿನ ನಡುವೆ ಬರುವ ಶಿಲಾ ರೂಪದ್ದು. ವಿಶೇಷವೆಂದರೆ, ಈ ವಿಗ್ರಹದ ಮೇಲೆ ಒಂದೇ ಒಂದು ಉಳಿಯ ಪೆಟ್ಟಿನ ಛಾಯೆಯೂ ಕಾಣುವುದಿಲ್ಲ. ವೆಂಕಟೇಶನ ವಿಗ್ರಹವನ್ನು ತಿರುಮಲದಲ್ಲಿ ಯಾರು ಪ್ರತಿಷ್ಠಾಪನೆ ಮಾಡಿದರು ಎಂಬ ಸ್ಪಷ್ಟ ಉಲ್ಲೇಖ ಎಲ್ಲಿಯೂ ಇಲ್ಲ. ಇದು ಭೂಮಿಯಿಂದ ಉದ್ಭವಿಸಿದ ಶಿಲೆಯಿಂದ ತಯಾರಾದದ್ದೋ, ಅಥವಾ ಅಂತರಿಕ್ಷದಿಂದ ಬಿದ್ದ ಶಿಲೆಯೋ ಎಂಬ ಎರಡು ವಾದಗಳಿವೆ. ಸ್ವಾಮಿಯ ವಿಗ್ರಹ ಸಾಲಿಗ್ರಾಮ ಶಿಲೆಯಿಂದ ನಿರ್ಮಿತವಾಗಿರುವುದೆಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ - ಇದು ಭೂಮಂಡಲದ ವಸ್ತುವಿನಿಂದ ಅಲ್ಲ, ಬದಲಿಗೆ ಅಲೌಕಿಕ ಮೂಲದ್ದು ಎಂದು ತಿರುಮಲ ದೇಗುಲದ ಪ್ರಧಾನ ಅರ್ಚಕರೇ ಒಪ್ಪಿಕೊಂಡಿದ್ದಾರೆ.
ವಿಗ್ರಹ ಸದಾಕಾಲ 110 ಡಿಗ್ರಿ ಫ್ಯಾರನ್‌ಹೀಟ್ ಉಷ್ಣತೆಯನ್ನು ಹೊಂದಿರುತ್ತದೆ. ಬೆಳಗಿನ ಜಾವ 4.30ರ ಸಮಯದಲ್ಲಿ ವಿಗ್ರಹಕ್ಕೆ ನೀರು ಹಾಗೂ ಹಾಲಿನಲ್ಲಿ ಸ್ನಾನ ಮಾಡಿಸುವಾಗಲೂ ಇದೇ ಉಷ್ಣಾಂಶ ಇರುತ್ತದೆ, ಸ್ನಾನದ ನಂತರ ವಿಗ್ರಹದ ಮೇಲೆ ಬೆವರಿನ ಹನಿಗಳೂ ಮೂಡುತ್ತವೆ. ತಿರುಮಲ ಬೆಟ್ಟದಲ್ಲಿ ಗೋಕ್ಷೀರದಿಂದ ಮಾತ್ರವೇ ಅಭಿಷೇಕ ಮಾಡಲಾಗುತ್ತದೆ, ಜೊತೆಗೆ ಪರಿಮಳ ದ್ರವ್ಯಗಳಿಂದ ಹಾಗೂ ಕೆಲವೊಮ್ಮೆ ಪುನುಗು ತೈಲದಿಂದಲೂ ಸ್ವಾಮಿಯ ಶಿಲಾ ವಿಗ್ರಹವನ್ನು ಮರ್ದನ ಮಾಡಲಾಗುತ್ತದೆ. ಇವೆಲ್ಲದರಿಂದಾಗಿಯೇ ಗೋವಿಂದನ ವಿಗ್ರಹ ಶತಮಾನಗಳ ಕಾಲದಿಂದಲೂ ಒಂದೇ ರೀತಿಯಲ್ಲಿ ಉಳಿಯುವುದಕ್ಕೆ ಸಾಧ್ಯವಾಗಿದೆ.
ಗರುಡೋತ್ಸವ, ಚಕ್ರಾಸನಂ ಹಾಗೂ ಧ್ವಜಾ ಅವರೋಹಣಂನಂತಹ ಉತ್ಸವಗಳು ಇಲ್ಲಿ ನಡೆಯುತ್ತವೆ. ಅಕ್ಟೋಬರ್‌ನಲ್ಲಿ ಮೂರು ದಿನಗಳ ಕಾಲ ನಡೆಯುವ ನವರಾತ್ರಿ ಬ್ರಹ್ಮೋತ್ಸವದ ಸಂದರ್ಭದಲ್ಲಿ ಸರ್ವ ಆಭರಣಗಳಿಂದ ಅಲಂಕೃತನಾಗುವ ವೆಂಕಟೇಶನನ್ನು ನೋಡುವುದೇ ಕಣ್ಣಿಗೆ ಹಬ್ಬ. ಪ್ರತಿ ಬಾರಿ ಎಷ್ಟೇ ಬಂಗಾರ ಹಾಕಿದರೂ ಶ್ರೀನಿವಾಸನ ವಿಗ್ರಹಕ್ಕೆ ಚ್ಯುತಿ ಬಂದಿಲ್ಲ. ಈತನ ಮಹಿಮೆ ಅರಿತ ಪಲ್ಲವರು, ಚೋಳರು, ಪಾಂಡ್ಯರು, ವಿಜಯನಗರದ ಅರಸರು ಹಾಗೂ ಮರಾಠರು ಈ ದೇವಾಲಯಕ್ಕೆ ಹಲವು ಕಾಣಿಕೆಗಳನ್ನು ನೀಡಿದ್ದಾರೆ. ಶ್ರೀಕೃಷ್ಣದೇವರಾಯರ ಕಾಲದಲ್ಲಿ ಈ ದೇವಾಲಯ ಅಭಿವೃದ್ಧಿ ಹೊಂದಿತು ಎಂಬುದಕ್ಕೆ ಸಾಕ್ಷಿಯಾಗಿ ಇಲ್ಲಿ ಅವರ ವಿಗ್ರಹವೂ ಇದೆ.
ತಿಮ್ಮಪ್ಪನ ಶಿರಕ್ಕೆ ಬಂಗಾರದ ಕಿರೀಟ, ದ್ವಿತಿಲಕದಿಂದ ಹಣೆಯ ಅಲಂಕಾರ, ಬಲಗೈನಲ್ಲಿ ಮುತ್ತು-ರತ್ನಗಳ ಚಕ್ರ, ಎಡಗೈನಲ್ಲಿ ಶಂಖ, ಬಂಗಾರದ ಜರಿಯ ಬಟ್ಟೆ ಹಾಗೂ ಪಾದದ ಭಾಗಕ್ಕೆ ಬಂಗಾರದ ಹೊದಿಕೆ - ಇವೆಲ್ಲವೂ ಈ ವಿಗ್ರಹದ ವೈಭವವನ್ನು ಹೆಚ್ಚಿಸುತ್ತವೆ. ಶಂಖ-ಚಕ್ರಧಾರಿಯಾದ ಚತುರ್ಭುಜ ವೆಂಕಟೇಶ ಒಂದು ಕೈಯನ್ನು ಸೊಂಟದ ಮೇಲಿಟ್ಟುಕೊಂಡಿದ್ದರೆ, ಮತ್ತೊಂದು ಕೈ ಅಭಯಮುದ್ರೆಯಲ್ಲಿದೆ. ಸಾಕ್ಷಾತ್ ಆ ಭಗವಂತನೇ ತಿರುಪತಿಯಲ್ಲಿ ನಿಂತಿದ್ದಾನೆ ಎಂಬ ನಂಬಿಕೆ ಭಕ್ತರಲ್ಲಿ ಇದೆ.
ಮಹಾಭಾರತದಲ್ಲಿ ಒಂದು ಕಥೆ ಇದೆ - ಶ್ರೀಕೃಷ್ಣನ ಅವತಾರ ಸಮಾಪ್ತಿಯಾದ ನಂತರ ಪರಮಾತ್ಮ ಒಂದು ಜ್ಯೋತಿಯ ರೂಪದಲ್ಲಿ ಆಕಾಶ ಮಾರ್ಗವಾಗಿ ಪ್ರಯಾಣಿಸುತ್ತಿದ್ದ. ಆ ಸಮಯದಲ್ಲಿ ಬ್ರಹ್ಮಾದಿ ದೇವತೆಗಳು ಪರಮಾತ್ಮನನ್ನು ಸ್ಮರಿಸಿದಾಗ, ತಾನು ಇನ್ನು ಮುಂದೆ ತಿರುಮಲ ಬೆಟ್ಟದಲ್ಲಿ ಶಿಲಾರೂಪದಲ್ಲಿ ನೆಲೆಸುವುದಾಗಿಯೂ, ಕಲಿಯುಗ ಅಂತ್ಯವಾಗುವವರೆಗೂ ಅಲ್ಲಿಯೇ ನೆಲೆಸಿ ಭಕ್ತರ ಕಷ್ಟಗಳನ್ನು ಪರಿಹರಿಸುವುದಾಗಿಯೂ ತಿಳಿಸಿದ. ಈ ಪ್ರಕಾರ, ಇದು ಭೂಮಂಡಲದಲ್ಲಿ ರೂಪುಗೊಂಡ ಶಿಲೆಯಲ್ಲ, ಸ್ವಯಂ ವ್ಯಕ್ತವಾದ ಪರಮಾತ್ಮ ಶಿಲೆಯಾಗಿ ನೆಲೆಸಿದ ವಿಗ್ರಹ. ಆರ್ಕಿಯಾಲಜಿ ತಜ್ಞರ ಪ್ರಕಾರ ಈ ವಿಗ್ರಹ ರೂಪುಗೊಂಡಿರುವುದು 7ನೇ ಅಥವಾ 8ನೇ ಶತಮಾನದಲ್ಲಿ. ಗೋವಿನ ಗೋತ್ರ ಹಾಗೂ ಪುನುಗು ತೈಲ ಬಳಕೆಯಿಂದ ಇಂತಹ ವಿಗ್ರಹಗಳು ಕೊಂಚವೂ ಧಕ್ಕೆಯಾಗದಂತೆ ಉಳಿಯುತ್ತವೆ ಎಂದು ಅರ್ಚಕರು ಹೇಳುತ್ತಾರೆ. ಏನೇ ಆದರೂ ತಿಮ್ಮಪ್ಪನ ಮಹಿಮೆ ಅಪಾರ.
ತಿರುಪತಿ ವೆಂಕಟೇಶ್ವರ ವಿಗ್ರಹದ ಅಚ್ಚರಿಯ ರಹಸ್ಯಗಳು: Story of Tirupati Balaji Idol.!
Written By
M S Raghavendra
Cheif EditorOver 30 Years of Experience in Media. Expertise in Youtube Content Creation, Choosing niche ,Digital Marketing.
Comments
No comments yet.