ನಾವೆಲ್ ಆಯಿಲ್ ಇಂಗ್ ಅಥವಾ ಹೊಕ್ಕಳಿಗೆ ಎಣ್ಣೆ ಹಚ್ಚುವುದು ಎಂಬ ಪುರಾತನ ಆಯುರ್ವೇದ ಪದ್ಧತಿಗೆ ಇಂದಿಗೂ ಬಹಳ ಮಹತ್ವವಿದೆ. ಆಯುರ್ವೇದದ ಪ್ರಕಾರ ಹೊಕ್ಕಳು ಮರ್ಮ ಪಾಯಿಂಟ್ ಎಂದು ಕರೆಯಲ್ಪಡುತ್ತದೆ. ಮರದ ಬೇರಿಗೆ ನೀರು ಹಾಕಿದರೆ ಇಡೀ ಮರಕ್ಕೆ ಪೋಷಣೆ ಸಿಗುವಂತೆ, ಹೊಕ್ಕಳಿಗೆ ಎಣ್ಣೆ ಹಚ್ಚಿದರೆ ಅಡಿಯಿಂದ ಮುಡಿಯವರೆಗೆ ಇಡೀ ದೇಹಕ್ಕೆ ಅದರ ಲಾಭ ಸಿಗುತ್ತದೆ.
ಬೇರೆ ಬೇರೆ ಎಣ್ಣೆಗಳಿಂದ ಬೇರೆ ಬೇರೆ ಸ್ಕಿನ್ ಕೇರ್ (Skin Care) ಮತ್ತು ಆರೋಗ್ಯ ಪ್ರಯೋಜನಗಳಿವೆ. ಸಾಸಿವೆ ಎಣ್ಣೆ (Mustard Oil) ಹಚ್ಚುವುದರಿಂದ ಒಣ ತುಟಿ ಮತ್ತು ಒಣ ಚರ್ಮದ ಸಮಸ್ಯೆ ಕಡಿಮೆಯಾಗುತ್ತದೆ. ವಿಟಮಿನ್ ಇ ಸಮೃದ್ಧವಾಗಿರುವ ಬಾದಾಮಿ ಎಣ್ಣೆ (Almond Oil) ಒಣ ಚರ್ಮಕ್ಕೆ ಒಳ್ಳೆಯದು. ಎರಡು ಹನಿ ಬೇವಿನ ಎಣ್ಣೆ (Neem Oil) ಹಚ್ಚಿದರೆ ಮೊಡವೆ ಮತ್ತು ಇತರ ಚರ್ಮ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಗ್ಯಾಸ್ಟ್ರಿಕ್, ಬ್ಲೋಟಿಂಗ್, ಆಸಿಡಿಟಿ ಮತ್ತು IBS ಸಮಸ್ಯೆ ಇರುವವರು ಎಳ್ಳೆಣ್ಣೆ (Sesame Oil) ಹಚ್ಚಬಹುದು.
ಮೂಡ್ ಸ್ವಿಂಗ್ಸ್, ಆಂಕ್ಸೈಟಿ (Anxiety) ಮತ್ತು ಡಿಪ್ರೆಶನ್ (Depression) ಸಮಸ್ಯೆ ಇರುವವರು ದೇಸಿ ಹಸುವಿನ ತುಪ್ಪವನ್ನು ಹೊಕ್ಕಳಿಗೆ ಹಚ್ಚಿ ಮಸಾಜ್ ಮಾಡಿದರೆ ಫೀಲ್ ಗುಡ್ ಹಾರ್ಮೋನ್‌ಗಳು ಬಿಡುಗಡೆಯಾಗುತ್ತವೆ. ಇದಕ್ಕೆ ಕಾರಣ ನಮ್ಮ ಗಟ್-ಬ್ರೇನ್ ಕನೆಕ್ಷನ್ (Gut-Brain Connection). ಋತುಚಕ್ರದ ಸಮಯದಲ್ಲಿ ಬರುವ ಕ್ರ್ಯಾಂಪ್ಸ್ (Cramps), ಬೆನ್ನು, ಕುತ್ತಿಗೆ ಮತ್ತು ಕಾಲು ನೋವಿಗೆ ಸಾಸಿವೆ ಎಣ್ಣೆ ಮಸಾಜ್ ಬಹಳ ಸಹಕಾರಿ.
Also Read: ಕ್ಯಾಲ್ಸಿಯಂ : ಕೊರತೆಯ ಲಕ್ಷಣಗಳು ಮತ್ತು 5 ಸಸ್ಯಾಹಾರಿ ಆಹಾರ ಪದಾರ್ಥಗಳು..!
ಬೆಳಗ್ಗೆ ಸ್ನಾನದ ನಂತರ ಉಂಗುರದ ಬೆರಳಿನಿಂದ ವೃತ್ತಾಕಾರವಾಗಿ ಎಣ್ಣೆ ಹಚ್ಚಿ ಮಸಾಜ್ ಮಾಡುವುದು, ಮತ್ತು ರಾತ್ರಿ ಮಲಗುವ ಮುನ್ನ 2-3 ಹನಿ ಎಣ್ಣೆ ಹಾಕಿ ಲಘುವಾಗಿ ಮಸಾಜ್ ಮಾಡುವುದು — ಇವೆರಡೂ Navel Oiling ಮಾಡಲು ಉತ್ತಮ ಸಮಯಗಳು. ಎಣ್ಣೆ ಯಾವಾಗಲೂ ಪ್ಯೂರ್ (Pure) ಆಗಿರುವಂತೆ ಖಚಿತಪಡಿಸಿಕೊಳ್ಳಿ, ಆಗ ಮಾತ್ರ ಅದು ಸರಿಯಾಗಿ ಕೆಲಸ ಮಾಡುತ್ತದೆ. ನಾಭಿ ಚಿಕಿತ್ಸೆಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
ಆಯುರ್ವೇದದ ಪುರಾತನ ಟೆಕ್ನಿಕ್ ಮತ್ತು ಅದರ ಪ್ರಯೋಜನಗಳು: Navel Oiling.!
Written By
Raksha V
Content Writer15 years of Experience in Media and Digital Media as a Sr.Anchor,Correspondent and Content Writer.
Comments
No comments yet.