ಆ ಸ್ಥಳಕ್ಕೆ ಹೋದ್ರೆ ಅಲ್ಲಿ ವಿಚಿತ್ರವಾದ ಅನುಭವ ಆಗುತ್ತೆ. ಏನೋ ಒಂಥರಾ ರೋಮಾಂಚನ. ಕನ್ನಡದ ಬಗ್ಗೆ ಕನ್ನಡಿಗರ ಶೌರ್ಯದ ಬಗ್ಗೆ ಅಭಿಮಾನ ಮೂಡುತ್ತೆ. ಅಲ್ಲಿಗೆ ಕಾಲಿಟ್ಟ ತಕ್ಷಣ ಆ ವೀರ ಪರಾಕ್ರಮಿಯ ಸಾಹಸದ ಗಾಥೆಗಳು ಕಿವಿಯಲ್ಲಿ ಬಂದು ಅಪ್ಪಳಿಸಿದ ಹಾಗಾಗುತ್ತೆ. ಬೆಂಗಳೂರಿನಿಂದ ಆ ಪ್ರದೇಶಕ್ಕೆ ಹೋದರಂತೂ ಕನ್ನಡ ಭಾಷೆಯ ಮೇಲಿನ ಅಭಿಮಾನ ನಮ್ಮ ಕಣ್ಣುಗಳಲ್ಲಿ ನೀರುಕ್ಕಿಸುತ್ತೆ. ಅಂತದ್ದೊಂದು ಪ್ರದೇಶ ಇವತ್ತು ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಒಂದು ಕಾಲದಲ್ಲಿ ಕನ್ನಡ ನಾಡಿನ ರಾಜಧಾನಿಯಾಗಿ ಮೆರೆದ ಆ ಪ್ರದೇಶ ಇವತ್ತು ಸೊರಗಿ ನಿಂತಿದೆ. ಸ್ವಚ್ಛ ಪರಿಸರ, ಪುರಾತನ ದೇವಾಲಯ, ಇಟ್ಟಿಗೆಯಿಂದ ನಿರ್ಮಿಸಿದ ಕೋಟೆ, ಕಿರಿದಾದ ರಸ್ತೆಗಳು ಇಂಥ ಪ್ರದೇಶವನ್ನು ನೋಡಿದ್ರೆ ನಿಮಗೆ ಇದ್ಯಾವುದೋ ಹಳೆ ಹಳ್ಳಿ ಇರಬೇಕು ಅಂತ ಅನ್ಸುತ್ತೇನೋ ಆದರೆ ಇಲ್ಲಿ ನಿಮ್ಮ ಊಹೆ ಖಂಡಿತ ತಪ್ಪಾಗುತ್ತೆ. ಇದು ಕನ್ನಡ ನಾಡಿನ ಪ್ರಪ್ರಥಮ ರಾಜಧಾನಿ, ಕನ್ನಡ ವಂಶದ ಸುಭದ್ರ ನೆಲೆ, ವೀರ ಕನ್ನಡಿಗ ಮಯೂರವರ್ಮನಿಗೆ ಜನ್ಮ ಕೊಟ್ಟ ಭೂಮಿ, ಇದು ಬನವಾಸಿ. ಬನವಾಸಿ ಪ್ರಕೃತಿಯ ಮಡಿಲಲ್ಲಿ ಗಿರಿಕಂದರಗಳ ಸಾಲಲ್ಲಿ ಮೈದಳೆದು ವರದಾ ನದಿ ತೀರದಲ್ಲಿ ನಿರ್ಮಾಣಗೊಂಡಿರುವ ಪಟ್ಟಣ. ಇಲ್ಲಿರೋ ಮಧುಕೇಶ್ವರ ದೇವಾಲಯದ ವಾಸ್ತು ವೈಭವವನ್ನು ನೋಡುವುದಕ್ಕೆ ಎರಡು ಕಣ್ಣು ಸಾಕಾಗುವುದಿಲ್ಲ. ಈ ಬನವಾಸಿ ಇರುವುದು ಇವತ್ತಿನ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಲ್ಲಿ. ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಮೂರು ನೂರ ಎಪ್ಪತ್ತ್ ನಾಲ್ಕು ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಈ ಪ್ರದೇಶದಲ್ಲೇ ಕನ್ನಡ ನಾಡನ್ನ ಆಳಿದ ಹೆಮ್ಮೆಯ ವಂಶವೊಂದು ಹುಟ್ಟಿದ್ದು, ಅದೇ ಕದಂಬ ವಂಶ. ಅದು ಕನ್ನಡ ನಾಡಿನ ಕೀರ್ತಿಯ ಶಿಖರಕ್ಕೆ ಗರಿ ಮೂಡಿಸಿದ ವಂಶ. ಈ ವಂಶದ ಮಯೂರವರ್ಮ ಇಡೀ ಕನ್ನಡ ನಾಡನ್ನ ಒಂದುಗೂಡಿಸಿ ಆಳಿದ ಮೊದಲ ಅರಸ ಅನ್ನೋ ಕೀರ್ತಿಗೆ ಪಾತ್ರನಾಗಿದ್ದಾನೆ. ಕ್ರಿಸ್ತಶಕ ಮುನ್ನೂರ ನಲವತ್ತೈದರಲ್ಲಿ ಮಯೂರ ಕದಂಬ ವಂಶದ ಆಳ್ವಿಕೆಗೆ ಭದ್ರ ಬುನಾದಿಯನ್ನ ಹಾಕಿದ್ದ. ಅವನ ಸಾಧನೆಯನ್ನ ಸಂಪೂರ್ಣವಾಗಿ ತಿಳಿಯಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.
AlsoRead:https://mediamasters.co.in/article.php?slug=husbandberunda-pride-of-karnataka-the-story-of-two-headed-bird
ಕನ್ನಡ ಸಾಮ್ರಾಜ್ಯಕ್ಕೆ ಬುನಾದಿ ಹಾಕಿತ್ತು ಅವಮಾನದ ಕಿಚ್ಚು: The Story of Mayura varma.!
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.