Global Affairs

ವಿಮಾನದ ಸಂಚಲ್ಲಿ ಮತ್ತಿಬ್ಬರು ಪೈಲೆಟ್ಸ್ : Flydubai Investigation Update.!

ವಿಮಾನದ ಸಂಚಲ್ಲಿ ಮತ್ತಿಬ್ಬರು ಪೈಲೆಟ್ಸ್ : Flydubai Investigation Update.!
ಸ್ಮಿತ್ ಮಚ್ಚಾರ್.. ಈ ಹೆಸರನ್ನ ನೀವು ಇನ್ನೂ ಸ್ವಲ್ಪ ದಿನ ಮರೆಯೋದಕ್ಕೆ ಸಾಧ್ಯ ಆಗೋದಿಲ್ಲ.. ನೂರಾರು ಪ್ರಯಾಣಿಕರ ಜೀವ ಕಾಪಾಡಿ, ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿದ್ದಾಗ, ಭಾರತದ ಪ್ರಧಾನಿಯ ಜೊತೆ ಫೋನ್ ನಲ್ಲಿ ಮಾತಾಡ್ತಾ ಮಾತಾಡ್ತಾ ಭಾವುಕನಾದ ಮಚ್ಚಾರ್ ಮುಖವನ್ನ ಆತನ ದನಿಯನ್ನ, ಹನುಮಾನ್ ಚಾಲೀಸಾ ನನ್ನನ್ನ ಕಾಪಾಡ್ತು ಅಂತಾ ಹೇಳಿಕೊಳ್ಳುವ ಆತನ ಪ್ರಾಮಾಣಿಕತೆಯನ್ನ ಹೇಗೆ ಮರೆಯೋದಕ್ಕೆ ಸಾಧ್ಯ ಆಗುತ್ತೆ..? ಇನ್ನು ನಮ್ಮಲ್ಲಿ ಒಳ್ಳೇದನ್ನ ನೆನಪಿಟ್ಟುಕೊಳ್ಳೋ ಹಾಗೇ ಅಲ್ಲೊಂದು ಕೆಟ್ಟದನ್ನ ಹುಡುಕೋ ಮನಸ್ಥಿತಿಗಳೂ ಇರುತ್ವೆ.. ಫ್ಲೈ ದುಬೈ ವಿಮಾನವನ್ನ ಮಚ್ಚಾರ್ ಕಾಪಾಡಿದ್ರೂ ಅಂದಕೂಡಲೇ, ಅಲ್ಲಿ ಇದೆಲ್ಲಾ ನಾಟಕ ಅಂತಾ ಕೆಲವರು ಶುರುಮಾಡಿಕೊಂಡ್ರು.. ಅಲ್ಲಿ ಕಾಪಾಡಲ್ಪಟ್ಟಿದ್ದು ಇಸ್ರೇಲಿನ ಜನ. ವಿಮಾನವನ್ನ ಕೆಡವಬೇಕೂ ಅಂದ್ಕೊಂಡ್ಡವನ ಹೆಸರು, ಹಮಾಂ ಅಲ್ ಹಾಮಾಮಿ.. ಆದ್ರೆ ಫ್ಲೈ ದುಬೈ ಸಂಸ್ಥೆ ಇಲ್ಲಿ ಕೈಕಟ್ಟಿಕೊಂಡು ಕೂತ್ಕೊಳೋದಕ್ಕೆ ಆಗೋದಿಲ್ಲ. ಹೀಗಾಗಿ ಅವರು ಒಂದು ತನಿಖೆಯನ್ನ ಅಲ್ಲಿ ಶುರು ಮಾಡಿದ್ರು..ಆ ತನಿಖೆಗೆ ಸಂಬಂಧಿಸಿದ ಒಂದಷ್ಟು ಮಾಹಿತಿಗಳು ಹೊರ ಬೀಳ್ತಾ ಇವೆ. ಅಲ್ಲಿ ಒಮನಿ ಕೋ ಪೈಲೆಟ್ ಅಲ್ ಹಮಾಮಿ ಜೊತೆಯಲ್ಲಿ ಇನ್ನಷ್ಟು ಜನ ಈ ವಿಮಾನವನ್ನ ಕೆಡವಿಬಿಡೋ ಸಂಚಲ್ಲಿ ಭಾಗಿಯಾಗಿದ್ರು ಅನ್ನೋ ಅನುಮಾಗಳು ಇವೆ. ಹೀಗಾಗಿನೇ ವಿಚಾರಣೆಯ ನಂತರ ಮತ್ತಿಬ್ಬರು ಪೈಲೆಟ್​ಗಳನ್ನ ಅರೆಸ್ಟ್​ ಮಾಡಲಾಗಿದೆ. ಅಂದಹಾಗೆ ಅಲ್ಲಿ ಅರೆಸ್ಟ್ ಆಗಿರುವವರು ಮಾಲ್ಡೀವ್ಸ್ ಮೂಲದ ಪೈಲೆಟ್​ಗಳು.. ಈಗ ಅರೆಸ್ಟ್ ಆಗಿರೋ ಪೈಲೆಟ್ಗಳ ಪಾತ್ರ ಈ ಸಂಚಲ್ಲಿ ಏನು.? ಅವರು ದುಬೈ ವಿಮಾನವನ್ನ ಕೆಡವೋದಕ್ಕೆ ಯಾಕೆ ಸಂಚು ರೂಪಿಸಿದ್ರು.? ಇಲ್ಲೀವರೆಗಿನ ತನಿಖೆಯಲ್ಲಿ ಗೊತ್ತಾಗಿರೋ ಅಂಶಗಳೇನು ಅನ್ನೋದ್ರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Raghavendra N
Written By

Raghavendra N

Content Writer

17 years of experience in Media and Digital Media.Expertise in Scripting, Video Production,Documentary Making and ad Films

Comments

No comments yet.