Bharata

ವಿಮ್ಯಾಗ್ ಲ್ಯಾಬ್ಸ್‌ನ Rare Earth Magnet-Free Motor: ಚೀನಾ Dependency ಇಲ್ಲದ EV ಕ್ರಾಂತಿ.?

ವಿಮ್ಯಾಗ್ ಲ್ಯಾಬ್ಸ್‌ನ Rare Earth Magnet-Free Motor: ಚೀನಾ Dependency ಇಲ್ಲದ EV ಕ್ರಾಂತಿ.?
ಚೈನಾದ ಮೇಲಿನ Dependency, ಕೋವಿಡ್ ಕಾಲದಲ್ಲಿ ಅನುಭವಿಸಬೇಕಾದ Supply Chain ಸಮಸ್ಯೆಗಳು, ಮತ್ತು ಅದರಿಂದ ಉಂಟಾದ ನಷ್ಟಗಳಿಂದಾಗಿ ಒಂದು ಹೊಸ ಆವಿಷ್ಕಾರ ಸಾಧ್ಯವಾಗುತ್ತಿದೆ. ಅದು ಸಂಪೂರ್ಣವಾಗಿ ಯಶಸ್ವಿಯಾದರೆ, ಚೈನಾದ ಮೇಲಿನ ನಿರ್ಭರತೆಯಿಂದ ಜಗತ್ತು ಹೊರಬರಲು ಸಾಧ್ಯವಾಗುತ್ತದೆ.
ಚೈನಾದ Rare Earth Magnet ಅಗತ್ಯವಿಲ್ಲದೆಯೇ ಒಂದು Electric Motor ಸಿದ್ಧವಾಗುತ್ತಿದೆ. ಇನ್ನು ಮುಂದೆ EVಗಳಿಂದ ಹಿಡಿದು ಆಯುಧಗಳವರೆಗೆ ಎಲ್ಲೆಲ್ಲಿ ರೇರ್ ಎರ್ತ್ ಮ್ಯಾಗ್ನೆಟ್ ಅಗತ್ಯವಾಗುತ್ತಿತ್ತೋ, ಅದೆಲ್ಲವನ್ನೂ ಕೇವಲ ಒಂದು Software ಮೂಲಕ ಸಾಧಿಸಬಹುದಾಗಿದೆ. ಇದು ಜಾಗತಿಕ EV ಕ್ಷೇತ್ರದಲ್ಲಿ ಒಂದು Game Changer ಎನಿಸಿಕೊಳ್ಳುತ್ತದೆ; ಪ್ರಮುಖವಾಗಿ ಚೈನಾದ ಪ್ರಾಬಲ್ಯವನ್ನು ಕಡಿಮೆ ಮಾಡುತ್ತದೆ.
Virtual Magnet Synchronous Motor (VMSM) — ಪರ್ಮನೆಂಟ್ ಮ್ಯಾಗ್ನೆಟ್ ಇಲ್ಲದೆಯೇ ಕೆಲಸ ಮಾಡಬಲ್ಲ ಈ ಆಧುನಿಕ ಮೋಟಾರ್ ಆವಿಷ್ಕಾರವಾಗಿರುವುದು ನಮ್ಮ ಬೆಂಗಳೂರಿನಲ್ಲಿ, ಇಲ್ಲಿನ Vimag Labs ಎಂಬ Startup ಕಂಪನಿಯಲ್ಲಿ. ಹಾಗಾದರೆ ಏನಿದು VMSM? ಇದು ಜಗತ್ತಿನ EV ಕ್ಷೇತ್ರವನ್ನು ಹೇಗೆ ಬದಲಿಸುತ್ತದೆ?
ರೇರ್ ಎರ್ತ್ ಮಿನರಲ್ಸ್‌ನಲ್ಲಿ ಚೀನಾದ Monopoly
ಜಗತ್ತಿನ Rare Earth Minerals ಕ್ಷೇತ್ರದಲ್ಲಿ ಚೈನಾ ಸಾಧಿಸಿರುವ ಏಕಸ್ವಾಮ್ಯ ಎಂಥದ್ದು ಎಂಬುದು ನಿಮಗೆ ಗೊತ್ತಿದೆ. ಕಳೆದ ವರ್ಷ ಚೈನಾ ಮ್ಯಾಗ್ನೆಟ್ ಸರಬರಾಜನ್ನು ನಿಲ್ಲಿಸಿತ್ತು. ಈ ನಿರ್ಧಾರ ಎಲೆಕ್ಟ್ರಿಕ್ ವೆಹಿಕಲ್ ಸೇರಿದಂತೆ ಎಲೆಕ್ಟ್ರಿಕ್ ಮೋಟಾರ್ ತಯಾರಿಸುವ ಮತ್ತು ಬಳಸುವ ಎಲ್ಲ ಕಂಪನಿಗಳನ್ನೂ ಸಂಕಷ್ಟಕ್ಕೆ ಈಡು ಮಾಡಿತ್ತು. ಈಗ ಈ ಸಮಸ್ಯೆಗೆ ಭಾರತದ ಸ್ಟಾರ್ಟಪ್ ಕಂಪನಿಯೊಂದು ಪರಿಹಾರ ಹುಡುಕುವ ಪ್ರಯತ್ನ ಮಾಡಿದೆ; ಮೊದಲ ಹಂತದಲ್ಲಿ ಅವರು ಯಶಸ್ಸನ್ನೂ ಪಡೆದಿದ್ದಾರೆ. ಅದರ ಹೆಸರೇ ವರ್ಚುಯಲ್ ಮ್ಯಾಗ್ನೆಟ್ ಸಿಂಕ್ರೋನಸ್ ಮೋಟರ್.
ಇದೇನು ಎಂಬುದನ್ನು ಅರ್ಥಮಾಡಿಕೊಳ್ಳಬೇಕಾದರೆ, ಮೊದಲು ನಾವು Electric Motorಗಳ ಬಗ್ಗೆ ಮತ್ತು ಅದರಲ್ಲಿ ಬಳಸುವ ರೇರ್ ಎರ್ತ್ ಮ್ಯಾಗ್ನೆಟ್‌ಗಳ ಬಗ್ಗೆ ಅರ್ಥ ಮಾಡಿಕೊಳ್ಳಬೇಕು.
ಎಲೆಕ್ಟ್ರಿಕ್ ಮೋಟರ್ ಎಂದರೆ ವಿದ್ಯುತ್ ಶಕ್ತಿಯನ್ನು ಯಾಂತ್ರಿಕ ಚಲನೆ, ಅಂದರೆ Torque ಆಗಿ ಪರಿವರ್ತಿಸುವ ಸಾಧನ. ಫ್ಯಾನ್, ಮಿಕ್ಸಿ, ಎಲಿವೇಟರ್‌ನಿಂದ ಹಿಡಿದು ಎಲೆಕ್ಟ್ರಿಕ್ ಕಾರು, ಬೈಕ್‌ಗಳವರೆಗೆ ಎಲ್ಲದರಲ್ಲೂ ಈ ಎಲೆಕ್ಟ್ರಿಕ್ ಮೋಟಾರ್‌ಗಳ ಬಳಕೆ ಆಗುತ್ತದೆ. ವಿಶೇಷವಾಗಿ EVಗಳಲ್ಲಿ ಈ ಮೋಟಾರ್‌ಗಳನ್ನು ಬಳಸಲು ಕಾರಣ, ಇವುಗಳಿಂದ ಪೆಟ್ರೋಲ್-ಡೀಸೆಲ್‌ಗಿಂತಲೂ ಹೆಚ್ಚಿನ Engine Efficiency ಸಿಗುತ್ತದೆ. ಮಾಲಿನ್ಯ ಕಡಿಮೆ ಇರುತ್ತದೆ; ಚಲಿಸುವ ಭಾಗಗಳು ಕಡಿಮೆ ಇರುವುದರಿಂದ ನಿರ್ವಹಣೆ ಸುಲಭ ಮತ್ತು ಶಬ್ದವೂ ಕಡಿಮೆ ಇರುತ್ತದೆ. ಸ್ಟಾರ್ಟ್ ಆದ ತಕ್ಷಣ ಪೂರ್ಣ ಪ್ರಮಾಣದ ಟಾರ್ಕ್ ಸಿಗುವುದರಿಂದ ವೇಗವರ್ಧನೆ ತುಂಬಾ ಚೆನ್ನಾಗಿರುತ್ತದೆ.
ರೇರ್ ಎರ್ತ್ ಮ್ಯಾಗ್ನೆಟ್ ಯಾಕೆ ಬೇಕಾಗುತ್ತದೆ?
ಇಂದಿನ ಬಹುತೇಕ ಎಲ್ಲಾ EVಗಳು ಬಳಸುವುದು Permanent Magnet Synchronous Motor (PMSM). ಇದರ ರೋಟರ್ ಅಂದರೆ ತಿರುಗುವ ಭಾಗದ ಒಳಗೆ ಶಕ್ತಿಶಾಲಿ ಶಾಶ್ವತ ಮ್ಯಾಗ್ನೆಟ್‌ಗಳನ್ನು ಜೋಡಿಸಲಾಗಿರುತ್ತದೆ. ಈ ಮ್ಯಾಗ್ನೆಟ್‌ಗಳಿಂದಾಗಿ ಮೋಟರ್ ಚಿಕ್ಕದಾಗಿ, ಹಗುರವಾಗಿ ಇರುತ್ತದೆ (ಗಾತ್ರಕ್ಕೆ ಹೋಲಿಸಿದರೆ ಹೆಚ್ಚು ಶಕ್ತಿ); Efficiency ಹೆಚ್ಚಿರುತ್ತದೆ, ಬ್ಯಾಟರಿ ಚಾರ್ಜ್ ಹೆಚ್ಚು ದೂರ ಬರುತ್ತದೆ; ಮತ್ತು ಪ್ರತ್ಯೇಕ Excitation System ಬೇಕಿಲ್ಲ, ಮ್ಯಾಗ್ನೆಟ್ ತಾನಾಗೇ ಸ್ಥಿರ ಮ್ಯಾಗ್ನೆಟಿಕ್ ಫೀಲ್ಡ್ ಕೊಡುತ್ತದೆ. ಹೀಗಾಗಿ ಈ ಶಾಶ್ವತ ಮ್ಯಾಗ್ನೆಟ್‌ಗಳೇ PMSM ಮೋಟರ್‌ನ ಜೀವಾಳ.
ಯಾವ ಯಾವ ರೇರ್ ಎರ್ತ್ ಮಿನರಲ್ಸ್ ಬಳಕೆಯಾಗುತ್ತವೆ?
ಈ ಶಕ್ತಿಶಾಲಿ ಮ್ಯಾಗ್ನೆಟ್‌ಗಳನ್ನು ತಯಾರಿಸಲು ಬಳಸುವ ಮುಖ್ಯ ರೇರ್ ಎರ್ತ್ ಮಿನರಲ್‌ಗಳು ಈ ಕೆಳಗಿನಂತಿವೆ:
ಈ ವಿಷಯದಲ್ಲಿ ಚೀನಾದ Monopoly ಎಷ್ಟಿದೆ?
International Energy Agency (IEA) ಪ್ರಕಾರ, ಚೀನಾ ಜಾಗತಿಕ ರೇರ್ ಎರ್ತ್ ಸಂಸ್ಕರಣೆ ಮತ್ತು ಬೇರ್ಪಡಿಕೆಯ ಸುಮಾರು 91% ಪಾಲನ್ನು ಹಾಗೂ EV ಮೋಟರ್‌ಗಳಲ್ಲಿ ಬಳಸುವ Sintered Permanent Magnet ಉತ್ಪಾದನೆಯ 94% ಪಾಲನ್ನು 2024ರಲ್ಲಿ ಹೊಂದಿತ್ತು. ಕುತೂಹಲಕಾರಿ ಸಂಗತಿ ಎಂದರೆ, ಚೀನಾ ಬಳಿ ಇರುವುದು ಜಾಗತಿಕ ಮೀಸಲಿನ ಸುಮಾರು ಮೂರನೇ ಒಂದು ಭಾಗ ಮಾತ್ರ — ಅಂದರೆ ಚೀನಾದ ನಿಜವಾದ ಶಕ್ತಿ ಇರುವುದು ಗಣಿಗಾರಿಕೆಯಲ್ಲಿ ಅಲ್ಲ, Refining ಮತ್ತು ಮ್ಯಾಗ್ನೆಟ್ ತಯಾರಿಕೆಯಲ್ಲಿ.
ಈ ಶಕ್ತಿಯನ್ನು ಚೀನಾ ಈಗಾಗಲೇ ಬಳಸಿಕೊಂಡಿದೆ ಕೂಡ. 2025ರ ಏಪ್ರಿಲ್‌ನಲ್ಲಿ ಏಳು ಹೆವಿ ರೇರ್ ಎರ್ತ್ ಎಲಿಮೆಂಟ್‌ಗಳು ಮತ್ತು ಸಂಬಂಧಿತ ಮ್ಯಾಗ್ನೆಟ್‌ಗಳ ಮೇಲೆ Export Control ಹೇರಿತ್ತು; ಇದರಿಂದ ಅಮೆರಿಕ ಮತ್ತು ಯುರೋಪಿನ ಕಾರು ಕಂಪನಿಗಳು ಉತ್ಪಾದನೆ ಕಡಿಮೆ ಮಾಡಬೇಕಾಯಿತು. ಆದರೆ 2025ರ ನವೆಂಬರ್ 7ರಂದು ವ್ಯಾಪಾರ ಒಪ್ಪಂದದ ಭಾಗವಾಗಿ ಈ ಕಠಿಣ ನಿಯಮಗಳನ್ನು ಒಂದು ವರ್ಷ ಅಮಾನತಿನಲ್ಲಿ ಇಡಲಾಗಿದೆ. ಈ ಅಸ್ಥಿರತೆಯೇ ಈಗ ಜಗತ್ತಿನಾದ್ಯಂತ "ಚೀನಾ ಇಲ್ಲದ ಮ್ಯಾಗ್ನೆಟ್" ಹುಡುಕಾಟಕ್ಕೆ ಕಾರಣವಾಗಿದೆ.
ಟೆಸ್ಲಾ, ಜಿಎಂ, ಸ್ಟೆಲ್ಲಾಂಟಿಸ್, ವ್ಯಾಲಿಯೋ, ಹೋಂಡಾ ಮುಂತಾದ ದೊಡ್ಡ ಕಂಪನಿಗಳೆಲ್ಲಾ ಪರ್ಯಾಯ ಪರಿಹಾರಗಳ ಮೇಲೆ ಹಣ ಹೂಡುತ್ತಿವೆಯಾದರೂ, ಇದುವರೆಗೆ ಯಾರೂ ರೇರ್ ಎರ್ತ್ ಇಲ್ಲದ Drive Unit ಅನ್ನು ಬೃಹತ್ ಪ್ರಮಾಣದ ಉತ್ಪಾದನೆಗೆ ತಂದಿಲ್ಲ. ಹೀಗಾಗಿ ಈಗ ವಿಮ್ಯಾಗ್ ಲ್ಯಾಬ್‌ಗೆ ಈ ಕ್ಷೇತ್ರದಲ್ಲಿ ದೊಡ್ಡ ಅವಕಾಶದ ಬಾಗಿಲು ತೆರೆಯುತ್ತಿದೆ.
ಬೆಂಗಳೂರಿನ ವಿಮ್ಯಾಗ್ ಲ್ಯಾಬ್ಸ್ ಏನು ಮಾಡಿದೆ?
ಬೆಂಗಳೂರಿನ Vimag Labs ಎಂಬುದು ಒಂದು Deep-Tech Startup; ಈ ಸಂಸ್ಥೆ ಈಗ ಪರ್ಮನೆಂಟ್ ಮ್ಯಾಗ್ನೆಟ್ ಇಲ್ಲದೆಯೇ ಕೆಲಸ ಮಾಡುವ ಎಲೆಕ್ಟ್ರಿಕ್ ಮೋಟರ್ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ. ಇದಕ್ಕೆ ಈಗ Patent ಕೂಡ ಸಿಕ್ಕಿದೆ — ಪೇಟೆಂಟ್‌ನ ಹೆಸರು "A Robust Rotating Transformer Excited Synchronous Motor and Its Control."
ಇಂಥದ್ದೊಂದು ಮ್ಯಾಗ್ನೆಟ್-ಲೆಸ್ ಮೋಟಾರ್ ಸಿದ್ಧಪಡಿಸಬೇಕು ಎಂಬ ಐಡಿಯಾ ಹುಟ್ಟಲು ಕಾರಣ ಕೂಡ Supply Chain ಸಮಸ್ಯೆಯೇ. 2020ರಲ್ಲಿ ಕೋವಿಡ್ ಲಾಕ್‌ಡೌನ್ ಸಮಯದಲ್ಲಿ, ಈ ಸಂಸ್ಥೆಯ ಪ್ರೊಟೊಟೈಪ್ ಮೋಟರ್‌ಗಳಿಗೆ ಬೇಕಾದ ಮ್ಯಾಗ್ನೆಟ್‌ಗಳ ಶಿಪ್‌ಮೆಂಟ್ ಶಾಂಘೈ ಬಂದರಿನಲ್ಲಿ ಸುಮಾರು ಮೂರು ತಿಂಗಳು ಸಿಲುಕಿಕೊಂಡಿತ್ತು. ಇದರಿಂದ ಇವರು ತುಂಬಾ ಸಮಸ್ಯೆ ಎದುರಿಸಿದ್ದರಂತೆ. ಇವರು ಮಾತ್ರವಲ್ಲ, ಅಂದು ಜಗತ್ತಿನ ಎಲ್ಲ ಮೋಟಾರ್ ತಯಾರಿಕಾ ಸಂಸ್ಥೆಗಳು ಅನುಭವಿಸಿದ ಸಮಸ್ಯೆಯನ್ನು ಈ ಸಂಸ್ಥೆಯ ಸಂಸ್ಥಾಪಕ ಮನೀಷ್ ಸೇಠ್ ಗಮನಿಸಿದ್ದರು. ಹೀಗಾಗಿ, ಚೈನಾದ ಮೇಲಿನ ಡಿಪೆಂಡೆನ್ಸಿ ಇಲ್ಲದ ಹಾಗೆ ತಾವೇ ಒಂದು ಮೋಟಾರ್ ತಯಾರಿಸಿದರೆ ಹೇಗೆ ಎಂಬ ಐಡಿಯಾ ಬಂತು. ಅದು ಸಾಧ್ಯವಾಗಬೇಕಾದರೆ ರೇರ್ ಎರ್ತ್ ಮ್ಯಾಗ್ನೆಟ್‌ಗಳಿಗೆ ಪರ್ಯಾಯ ಹುಡುಕಬೇಕಿತ್ತು; ಹೀಗಾಗಿ ವರ್ಚುಯಲ್ ಮ್ಯಾಗ್ನೆಟಿಕ್ ಫೀಲ್ಡ್‌ನ್ನು ಸಾಫ್ಟ್‌ವೇರ್ ಮೂಲಕ ಕ್ರಿಯೇಟ್ ಮಾಡಲು ಸಾಧ್ಯವೇ ಎಂಬ ಪ್ರಯೋಗಗಳು ನಡೆದವು. ಈಗ ಅದು ಸಾಕಾರವಾಗುತ್ತಿದೆ.
ಇದು ಹೇಗೆ ಕೆಲಸ ಮಾಡುತ್ತದೆ? — VMSM ತಂತ್ರಜ್ಞಾನ
ವಿಮ್ಯಾಗ್ ಲ್ಯಾಬ್ಸ್ ಅಭಿವೃದ್ಧಿಪಡಿಸಿದ ಮೋಟರ್‌ ಹೆಸರು ವರ್ಚುಯಲ್ ಮ್ಯಾಗ್ನೆಟ್ ಸಿಂಕ್ರೋನಸ್ ಮೋಟರ್ (VMSM). ಇದು ರೋಟರ್‌ನ ಮ್ಯಾಗ್ನೆಟಿಕ್ ಫೀಲ್ಡ್ ಅನ್ನು Power Electronics ಮತ್ತು ಸ್ವಂತ Control Algorithms ಮೂಲಕ ರಿಯಲ್-ಟೈಮ್‌ನಲ್ಲಿ ಸೃಷ್ಟಿಸಿ ನಿಯಂತ್ರಿಸುತ್ತದೆ.
ಸರಳವಾಗಿ ಹೇಳಬೇಕೆಂದರೆ:
ಹೀಗಾಗಿ, ಶಾಶ್ವತ ಮ್ಯಾಗ್ನೆಟ್‌ನ ಕೆಲಸವನ್ನು ಇಲ್ಲಿ ಸಾಫ್ಟ್‌ವೇರ್-ನಿಯಂತ್ರಿತ ಎಲೆಕ್ಟ್ರೋಮ್ಯಾಗ್ನೆಟ್ ಮಾಡುತ್ತದೆ.
ಇದು ನಿಜವಾಗಲೂ ಸಾಫ್ಟ್‌ವೇರ್‌ನಿಂದ ಕೆಲಸ ಮಾಡುತ್ತದೆಯೇ?
ಹೌದು. ಮೋಟರ್‌ನ ವರ್ತನೆ (behaviour) ಸಂಪೂರ್ಣವಾಗಿ ಸಾಫ್ಟ್‌ವೇರ್ ಮೂಲಕ ನಡೆಯುವುದರಿಂದ, ಶಾಖ ಹೆಚ್ಚಾಗುವ ಅಥವಾ ಕಾಲಕ್ರಮೇಣ ಶಕ್ತಿ ಕಳೆದುಕೊಳ್ಳುವ ಮ್ಯಾಗ್ನೆಟ್‌ಗಿಂತ ಭಿನ್ನವಾಗಿ, Over-The-Air (OTA) ಅಪ್‌ಡೇಟ್‌ಗಳ ಮೂಲಕ ಇದು ಹೆಚ್ಚು ಕಾರ್ಯಕ್ಷಮತೆಯನ್ನು ಹೊಂದಿರುತ್ತದೆ. ಅಂದರೆ, ಸ್ಮಾರ್ಟ್‌ಫೋನಿಗೆ ಸಾಫ್ಟ್‌ವೇರ್ ಅಪ್‌ಡೇಟ್ ಕೊಟ್ಟ ಹಾಗೆ, ಈ ಮೋಟರ್‌ಗೂ ಅಪ್‌ಡೇಟ್ ಕೊಟ್ಟು ಕಾರ್ಯಕ್ಷಮತೆ ಸುಧಾರಿಸುವ ಅವಕಾಶ ಇರುತ್ತದೆ ಎಂಬುದೇ ಇದರ ವಿಶೇಷ.
  • ಚೀನಾ Dependency ಕಡಿಮೆ: ಕಾಪರ್, ಸ್ಟೀಲ್ ಮತ್ತು ಸಾಮಾನ್ಯ ಎಲೆಕ್ಟ್ರಾನಿಕ್ಸ್ ಮಾತ್ರ ಬಳಸಿ, ಆಮದು ಮಾಡಿಕೊಂಡ ರೇರ್ ಎರ್ತ್ ಮ್ಯಾಗ್ನೆಟ್ ಅಗತ್ಯವನ್ನೇ ತೆಗೆದುಹಾಕುವ ಮೂಲಕ ಇದು "ಮೇಕ್ ಇನ್ ಇಂಡಿಯಾ" ಮತ್ತು "ಆತ್ಮನಿರ್ಭರ ಭಾರತ" ಉಪಕ್ರಮಗಳಿಗೆ ಪೂರಕವಾಗಿದೆ.
  • ಸಂಪೂರ್ಣ ಭಾರತದಲ್ಲೇ ತಯಾರಿಕೆ ಸಾಧ್ಯ: ರೇರ್ ಎರ್ತ್ ಸಂಸ್ಕರಣಾ ಘಟಕ (ಇದನ್ನು ಕಟ್ಟಲು ಭಾರತಕ್ಕೆ ಸುಮಾರು 15 ವರ್ಷ ಬೇಕಾಗಬಹುದು ಎಂದು ಸೇಠ್ ಅಂದಾಜಿಸುತ್ತಾರೆ) ಕಾಯದೆಯೇ, ಬೇರೆ ದಾರಿಯಲ್ಲಿ ಸಮಸ್ಯೆಗೆ ಪರಿಹಾರ.
  • Software Upgrade ಸಾಧ್ಯತೆ: ಹಾರ್ಡ್‌ವೇರ್ ಬದಲಾಯಿಸದೆ, ಕಾರ್ಯಕ್ಷಮತೆ ಸುಧಾರಿಸುವ ಅವಕಾಶ.
  • ಇತರೆ ಪರ್ಯಾಯಗಳಾದ Induction Motor, Switched-Reluctance Motorಗಳಲ್ಲಿ ಸಾಮಾನ್ಯವಾಗಿ ಗಾತ್ರ, ಶಕ್ತಿ ಅಥವಾ ಎಫಿಷಿಯೆನ್ಸಿಯಲ್ಲಿ ರಾಜಿ ಮಾಡಿಕೊಳ್ಳಬೇಕಾಗುತ್ತದೆ; ಸೇಠ್ ಪ್ರಕಾರ VMSM ಈ ರಾಜಿಯನ್ನೇ ತಪ್ಪಿಸುವ ಪ್ರಯತ್ನ.
  • ಈ ಮೋಟರ್ ತಯಾರಿ ಈಗ ಯಾವ ಹಂತದಲ್ಲಿದೆ?
    ಇದು ಇನ್ನೂ Pilot ಹಂತದಲ್ಲಿದೆ; ಬೃಹತ್ ಪ್ರಮಾಣದ ಉತ್ಪಾದನೆ ಇನ್ನೂ ಶುರುವಾಗಿಲ್ಲ:
    ಒಂದು ಎಚ್ಚರಿಕೆಯ ಮಾತು
    ಈ ತಂತ್ರಜ್ಞಾನದ ದಿಕ್ಕು ಆಸಕ್ತಿದಾಯಕ, ಮತ್ತು ಪೇಟೆಂಟ್, Funding ಎಲ್ಲಾ ನಿಜ ಇದ್ದರೂ, ಇದನ್ನು ಸ್ವಲ್ಪ ಜಾಗರೂಕತೆಯಿಂದಲೇ ನೋಡಬೇಕು. ಪೈಲಟ್‌ನಲ್ಲಿ ಚೆನ್ನಾಗಿ ಕೆಲಸ ಮಾಡುವ ಮೋಟರ್‌ಗಳು ಯಾವಾಗಲೂ ವೆಚ್ಚ, ಬಾಳಿಕೆ ಮತ್ತು ಎಫಿಷಿಯೆನ್ಸಿ ಪರೀಕ್ಷೆಯಲ್ಲಿ ಗೆಲ್ಲುತ್ತವೆ ಎಂದು ಹೇಳಲಾಗುವುದಿಲ್ಲ. "ಪರ್ಮನೆಂಟ್-ಮ್ಯಾಗ್ನೆಟ್‌ಗೆ ಸರಿಸಮ ಅಥವಾ ಮೀರಿಸುತ್ತದೆ" ಎಂಬ ಹೇಳಿಕೆಯನ್ನು, ಸ್ವತಂತ್ರ Bench Test ಡೇಟಾ ಬರುವವರೆಗೆ, ಪೂರ್ಣ ಪ್ರಮಾಣದಲ್ಲಿ ನಂಬಲಾಗುವುದಿಲ್ಲ ಎಂದು ತಾಂತ್ರಿಕ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.
    ಆದರೂ, ಚೀನಾದ ಮ್ಯಾಗ್ನೆಟ್ ಡಿಪೆಂಡೆನ್ಸಿ ಎಷ್ಟು ಅಪಾಯಕಾರಿ ಎಂಬುದನ್ನು ಇತ್ತೀಚಿನ ವರ್ಷಗಳಲ್ಲಿ ಜಗತ್ತು ಕಂಡಿದೆ. ಹೀಗಾಗಿ, ಬೆಂಗಳೂರಿನ ಪುಟ್ಟ ಸ್ಟಾರ್ಟಪ್‌ವೊಂದು ಈ ದಿಕ್ಕಿನಲ್ಲಿ ಇಟ್ಟ ಹೆಜ್ಜೆ, ಭಾರತದ ಎಲೆಕ್ಟ್ರಿಕ್ ವಾಹನ ಕ್ಷೇತ್ರಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೇ ಗಮನಿಸಬೇಕಾದ ಬೆಳವಣಿಗೆ ಎಂಬುದರಲ್ಲಿ ಎರಡು ಮಾತಿಲ್ಲ. ಅವರಿಗೆ ಈ ಪ್ರಯತ್ನದಲ್ಲಿ ಸಂಪೂರ್ಣ ಯಶಸ್ಸು ಸಿಗಲಿ ಎಂದು ಹಾರೈಸೋಣ.
    M S Raghavendra
    Written By

    M S Raghavendra

    Cheif Editor

    Over 30 Years of Experience in Media. Expertise in Youtube Content Creation, Choosing niche ,Digital Marketing.

    Comments

    No comments yet.