ಏನಿದು ITBPಯ ಹಿಮವೀರರ ಕಥೆ: China Border Issue.!
ಭಾರತ ಮತ್ತು ಚೈನಾದ(China) ನಡುವಿನ ಸಂಘರ್ಷ ನಿಧಾನವಾಗಿ ಹೆಚ್ಚಾಗ್ತಾ ಇದೆ.. ಅರುಣಾಚಲ ಪ್ರದೇಶದಲ್ಲಿ (Arunachal Pradesh) ಮತ್ತೆ ಚೈನಾದ (China) ಉಪಟಳ ಶುರುವಾಗಿ ತಿಂಗಳುಗಳು ಕಳೆದಿವೆ. ಅಲ್ಲಿನ ಗಡಿಯನ್ನ ಸರಿಯಾಗಿ ಗುರುತು ಮಾಡೋದಕ್ಕೆ ಸಾಧ್ಯ ಆಗಿಲ್ಲ. ಹೀಗಾಗಿ ಆಗಾಗ ಚೈನಾ ಪಡೆಗಳು ಭಾರತದ ಗಡಿ ದಾಟಿ ಒಳಗೆ ಬರುತ್ವೆ. ಅಲ್ಲಿ ನಮ್ಮ ಐಟಿಬಿಪಿ (ITBP) ಪಡೆಗಳ ಜೊತೆ ಮುಖಾಮುಖಿ ನಡೆಯುತ್ತೆ. ಚೀನೀ ಯೋಧರನ್ನ ಅಲ್ಲಿಂದಾ ಹಿಮ್ಮೆಟ್ಟಿಸೋ ಕೆಲಸವನ್ನ ಐಟಿಬಿಪಿ (ITBP) ಮಾಡುತ್ತೆ. ಇಷ್ಟಾದ್ರೂ, ಚೈನಾದ ಗಡಿಯನ್ನ ಕಾಯವ ಬೃಹತ್ ಸೇನಾಪಡೆ, ಅವರ ಆಧುನಿಕ ವ್ಯವಸ್ಥೆಗಳ ಮುಂದೆ, ನಮ್ಮ ಪ್ಯಾರಾಮಿಟಲಿರಿಯ ಶಕ್ತಿ ಸಾಕಾಗುತ್ತಾ ಅನ್ನೋ ಪ್ರಶ್ನೆ ಸಾಕಷ್ಟು ಜನರನ್ನ ಕಾಡದೇ ಇಲ್ಲ. ಇನ್ನು ಮೊನ್ನೆ ಸಾಂಪ್ರದಾಯಿಕ ಶೈಲಿಯಲ್ಲಿ ನಾವು ಚೀನೀಯರನ್ನ ಎದುರಿಸೋದು ಕಷ್ಟ ಅಂತಾ ಐಟಿಬಿಪಿ ಮುಖ್ಯುಸ್ಥರೂ ಹೇಳಿದಾರೆ. ಡ್ರೋಣ್ ಹಾಗೂ ಅಸಾಂಪ್ರದಾಯಿಕ ಶೈಲಿಗಳ ಬಗ್ಗೆ ಒತ್ತು ಕೊಡಬೇಕಾದ ಅಗತ್ಯವನ್ನ ಅವರು ಹೆಚ್ಚು ಪ್ರತಿಪಾದಿಸಿದಾರೆ, ಅದಕ್ಕಾಗೀನೇ ಹಿಮವೀರರಲ್ಲೇ ಬಲಿಷ್ಠರನ್ನ ಆಯ್ಕೆ ಮಾಡಿ, ಶೌರ್ಯಪಡೆಗಳನ್ನ ಸಿದ್ದಪಡಿಸಲಾಗಿದೆ. ಐಟಿಬಿಪಿಯಲ್ಲಿ(ITBP) ಈಗ ಪ್ರತಿ ಬಟಾಲಿಯನ್ನಲ್ಲೂ ಒಂದೊಂದು ಶೌರ್ಯಪಡೆ ಇದೆ. ಆ ಕಮ್ಯಾಂಡೋಗಳೇ ಈಗ ಚೈನಾದ ಒಳನುಸುಳುವಿಕೆಯನ್ನ ತಡೀತಾ ಇರೋದು. ಇಂಥಾ ಚೈನಾ ಗಡಿಯನ್ನ ಕಾಯ್ತಾ ಇರೋ ಐಟಿಬಿಪಿಯಲ್ಲಿನ(ITBP) ಒಂದಷ್ಟು ಸಮಸ್ಯೆಗಳು ಕೂಡಾ ಹೊರ ಬರ್ತಾ ಇವೆ. ಹಾಗಾದ್ರೆ ಆ ಪಡೆಗಳು ಅನುಭವಿಸ್ತಾ ಇರೋ ಕೊರತೆಗಳು ಏನು..? ಇದೇ ರೀತಿ ಭಾರತದ ಇನ್ಯಾವ ಪಡೆಗಳು ಸಮಸ್ಯೆಗಳನ್ನ ಎದುರಿಸ್ತಾ ಇವೆ.? ಅಲ್ಲಿ ಸರ್ಕಾರದಿಂದ ಆಗಬೇಕಿರೋದು ಏನು.? ಗಡಿ ಕಾಯುವ ಯೋಧರ ನೇಮಕದಲ್ಲಿ ಯಾಕೆ ಇಷ್ಟು ನಿರ್ಲಕ್ಷ್ಯ ಅನ್ನೋದ್ರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.