Global Affairs

ಯಾರು ಭಾರತದ ನಂಬರ್ 1 ಮಿತ್ರ: Who is India's Real Friend.!

ಯಾರು ಭಾರತದ ನಂಬರ್ 1 ಮಿತ್ರ: Who is India's Real Friend.!
ಭಾರತದ ನಿಜವಾದ ಫ್ರೆಂಡ್ ಯಾರು..? ಈ ಪ್ರಶ್ನೆಯನ್ನ ನಿಮಗೆ ಕೇಳೀದ್ರೆ ನೀವು ಏನು ಹೇಳ್ತೀರಿ..? ನಮಗೆ ಇಲ್ಲಿ ಭಾರತದ(India) ಶತ್ರು ಯಾರು ಅಂತಾ ಕೇಳಿದ್ರೆ ಥಟ್ಟಂತ ಎರಡು ಮೂರು ದೇಶಗಳ ಹೆಸರನ್ನ ಹೇಳಿ ಬಿಡಿಬಹುದು. ಆದ್ರೆ ಮಿತ್ರ ಯಾರೂ ಅಂತಾ ಕೇಳಿದ್ರೆ ಯಾರ ಹೆಸರು ಹೇಳೋದು..? ಒಬ್ಬೊಬ್ಬರು ಒಂದೊಂದು ದೇಶದ ಹೆಸರನ್ನ ಹೇಳ್ತಾ ಹೋಗಬಹುದು. ಇಂಡಿಯಾ-ಇಸ್ರೇಲ್(India- Israel) ಸೆಂಟರ್ ಅನ್ನೋ ಸಂಸ್ಥೆ, ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಝಾರ್ಖಂಡ್, ಉತ್ತರಾಖಂಡದ ಸಾವಿರಾರು ಯುವಕರನ್ನ ಮಾತಾಡಿಸಿದೆ. ಅದೊಂದು ಚಿಕ್ಕ ಸರ್ವೇ.. ಹಾಗಾದ್ರೆ ಅಲ್ಲಿ ಭಾರತದ(India) ಅತ್ಯಾಪ್ತ ಮಿತ್ರನ ಸ್ಥಾನ ಪಡಕೊಂಡಿದ್ದು ಯಾವ ದೇಶ..? ಭಾರತೀಯ ಯುವಕರು ಯಾವ ದೇಶದ ಜೊತೆಗಿನ ಸಂಭಂಧಗಳನ್ನ ನಂಬ್ತಾರೆ..? ಯಾರನ್ನ ನಮ್ಮ ಅಪ್ತಮಿತ್ರ ಅಂತಾ ಭಾವಿಸ್ತಾರೆ..? ಯಾವ ಯಾವ ದೇಶಗಳು ಆಪಟ್ಟಿಯಲ್ಲಿವೆ ಯಾರಿಗೆ ಎಷ್ಟು ಮಾರ್ಕ್ಸ್ ಬಂದಿವೆ..? ಆದೇಶಗಳು ನಂಬಿಕೆಯನ್ನ ಉಳಿಸಿಕೊಂಡಿರೋದು ಹೇಗೆ..? ಭಾರತದ ಅತ್ಯಾಪ್ತ ಮಿತ್ರ ಯಾರೂ ಅನ್ನೋ ಪ್ರಶ್ನೆಗೆ ಸಾಕಷ್ಟು ಜನ ಬೇರೆ ಬೇರೆ ದೇಶಗಳ ಹೆಸರುಗಳನ್ನ ಹೇಳಿದಾರೆ. ಆದ್ರೆ ಅಲ್ಲಿ ಬಹುಪಾಲು ಜನ ನಮ್ಮ ಆಪ್ತಮಿತ್ರ ಅಂತಾ ಆಯ್ಕೆ ಮಾಡಿರೋದು ಇಸ್ರೇಲನ್ನಲ್ಲ(Isreal)., ಬದಲಿಗೆ ರಷ್ಯಾನ(Russia).. ಅಲ್ಲಿ ರಷ್ಯಾಗೆ(Russia) ಮೊದಲ ಸ್ಥಾನ.. ಹಾಗೇ, ಎರಡನೇ ಸ್ಥಾನ ಇಸ್ರೇಲಿಗೆ(Israel). ಸರ್ವೇಯಲ್ಲಿ ಭಾಗವಹಿಸಿದ್ದ ಯುವಕರ ಪೈಕಿ, ಶೇಕಡಾ 62 ರಷ್ಟು ಮಂದಿ ರಷ್ಯಾ(Russia) ನಮ್ಮ ಅತ್ಯಾಪ್ತ ಅಂತಾ ಹೇಳ್ತಾರೆ. 57% ಜನ ಕಷ್ಟ ಕಾಲದಲ್ಲಿ ಜೊತೆಗೆ ನಿಲ್ಲೋ ದೇಶ ಇಸ್ರೇಲ್(Israel) ಅನ್ನೋ ಅಭಿಪ್ರಾಯವನ್ನ ವ್ಯಕ್ತಪಡಿಸಿದಾರೆ. ಇಂಟರೆಸ್ಟಿಂಗ್ ವಿಷಯ ಅಂದ್ರೆ, ಭಾರತ-ಇಸ್ರೇಲ್ ಸಹಕಾರದ ಬಗ್ಗೆ ಗೊತ್ತಿರೋ ಜನಾ ಏನಿದಾರೆ ಅವರ ಪೈಕಿ, ಶೇಕಡಾ 75ರಷ್ಟು ಮಂದಿ, ಇಸ್ರೇಲನ್ನ(Israel) ಹೆಚ್ಚು ನಂಬ್ತಾರೆ. ಹಾಗಾದ್ರೆ ಭಾರತದ(India) ಗೆಳೆಯರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
M S Raghavendra
Written By

M S Raghavendra

Cheif Editor

Over 30 Years of Experience in Media. Expertise in Youtube Content Creation, Choosing niche ,Digital Marketing.

Comments

No comments yet.