Devotional

ಸೂರ್ಯದೇವನ ಸಾರಥಿ ಅರುಣ ಯಾರು: The Story of Aruna

ಸೂರ್ಯದೇವನ ಸಾರಥಿ ಅರುಣ ಯಾರು: The Story of Aruna
ಪ್ರತಿನಿತ್ಯ ಮುಂಜಾನೆ ನಾವು ಆರಾಧಿಸುವ, ನಮ್ಮ ಕಣ್ಣಿಗೆ ಕಾಣುವ ದೇವರು ಸೂರ್ಯ (Sun God Surya). ಈ ಸೂರ್ಯದೇವನು ಯಾವಾಗಲೂ ಏಳು ಕುದುರೆಗಳ ರಥದ ಮೇಲೆ ಸವಾರಿ ಮಾಡುತ್ತಾನೆ ಎಂದು ಪುರಾಣ ಕಥೆಗಳಲ್ಲಿ ಕೇಳಿದ್ದೇವೆ. ಕೃಷ್ಣ ಪರಮಾತ್ಮನ ರಥಕ್ಕೆ ಅರ್ಜುನ ಹೇಗೆ ಸಾರಥಿಯಾಗಿದ್ದನೋ, ಹಾಗೆಯೇ ಸೂರ್ಯದೇವನ ರಥಕ್ಕೂ ಒಬ್ಬ ನಿಷ್ಠಾವಂತ ಸಾರಥಿ ಇದ್ದನು. ಆತನೇ ಅರುಣ (Charioteer Aruna). ಈ ಅರುಣನಿಗೂ ರಾಮಾಯಣದಲ್ಲಿನ ವಾಲಿ ಮತ್ತು ಸುಗ್ರೀವನಿಗೂ ಒಂದು ನಂಟಿದೆಯಂತೆ. ಈ ಲೇಖನದಲ್ಲಿ, ಸದಾ ಚಲಿಸುತ್ತಿರುವ ಏಳು ಕುದುರೆಗಳ ಸೂರ್ಯನ ರಥದ ಸಾರಥಿಯಾದ ಅರುಣ ಯಾರು ನೋಡೋಣ. ದಂತಕಥೆಯ ಪ್ರಕಾರ ವಿನುತೆ ತನ್ನ ಪತಿ ಮಹರ್ಷಿ ಕಶ್ಯಪರಿಂದ ಇಬ್ಬರು ಬಲಿಷ್ಠ ಪುತ್ರರ ವರವನ್ನು ಬಯಸಿದಳು. ಅದೇ ರೀತಿ ಕಶ್ಯಪರು ವರವನ್ನು ನೀಡಿದರು. ವಿನುತೆ ಎರಡು ಮೊಟ್ಟೆಗಳಿಗೆ ಜನ್ಮ ನೀಡಿದಳು. ೫೦೦ ವರ್ಷಗಳು ಕಳೆದರೂ ಮೊಟ್ಟೆಯಿಂದ ಪುತ್ರರ ಜನನವಾಗದೇ ಇರುವುದರಿಂದ, ತನ್ನೆರಡು ಮೊಟ್ಟೆಗಳಲ್ಲಿ ಒಂದನ್ನು ಒಡೆದಾಗ, ಅದರಿಂದ ಮೇಲಿನ ಭಾಗದ ದೇಹ ಮನುಷ್ಯರಂತೆ ಇರುವ ಮತ್ತು ಇನ್ನರ್ಧ ಭಾಗ ಪ್ರೌಢಾವಸ್ಥೆ ಬಂದಿರದ, ಕಾಲುಗಳಿರದ ಪುತ್ರನ ಜನನವಾಯಿತು. ಆತನೇ ಅರುಣ. ಇನ್ನು ಈ ಅರುಣ ಸೂರ್ಯನಿಗೆ ಸಾರಥಿಯಾಗಿದ್ದು ಹೇಗೆ ಎಂಬುದನ್ನು ನೋಡೋಣ. ಪುರಾಣ ಕಥೆಯ ಪ್ರಕಾರ, ಸಮುದ್ರ ಮಥನದಿಂದ ಬಂದ ಅಮೃತವನ್ನು ಮೋಹಿನಿ ಅವತಾರದಲ್ಲಿದ್ದ ವಿಷ್ಣು ದೇವತೆಗಳಿಗೆ ಹಂಚುತ್ತಿದ್ದಾಗ, ಸ್ವರ್ಭಾನು ಎಂಬ ರಾಕ್ಷಸ ದೇವತೆಗಳ ರೂಪದಲ್ಲಿ ಕುಳಿತು ಅಮೃತ ಪಡೆಯಲು ಮುಂದಾದನು. ಇದನ್ನು ಗಮನಿಸಿದ ಸೂರ್ಯ ಮತ್ತು ಚಂದ್ರ, ಮೋಹಿನಿ ರೂಪದಲ್ಲಿದ್ದ ವಿಷ್ಣುವಿಗೆ ಸೂಚನೆ ನೀಡಿದರು. ಆಗ ವಿಷ್ಣು ಆ ರಾಕ್ಷಸನ ತಲೆಯನ್ನು ತುಂಡರಿಸಿದನು. ಆದರೆ ಆಗಲೇ ಅಮೃತ ಸೇವಿಸಿದ್ದರಿಂದ ಆತನ ತಲೆ ಮತ್ತು ದೇಹ ಬೇರೆ ಬೇರೆಯಾಗಿ ಅಮರವಾದವು. ಇವೇ ರಾಹು ಮತ್ತು ಕೇತುಗಳಾದವು. ವಿಷ್ಣುವಿಗೆ ಸೂಚನೆ ನೀಡಿದ ಸೂರ್ಯ ಮತ್ತು ಚಂದ್ರರ ಮೇಲೆ ಕೋಪಗೊಂಡ ರಾಹು, ಬೆಳಕನ್ನು ನೀಡುವ ಸೂರ್ಯ ಮತ್ತು ಚಂದ್ರನನ್ನು ನುಂಗುವಂತೆ ಅಡ್ಡಲಾಗಿ ಬರುತ್ತಾನೆ. ಇದನ್ನೇ ಸೂರ್ಯ ಹಾಗೂ ಚಂದ್ರನಿಗೆ ಬರುವ ಗ್ರಹಣ (Solar and Lunar Eclipse) ಎಂದು ಕರೆಯಲಾಗುತ್ತದೆ. ರಾಹು ಸೂರ್ಯನನ್ನು ನುಂಗಲು ಬರುತ್ತಿರುವಂತೆ ಭಾಸವಾದಾಗ, ಸೂರ್ಯನು ತನ್ನ ಕಿರಣಗಳಿಂದ ಅತಿಯಾದ ಶಾಖವನ್ನು ಹೊರಹಾಕತೊಡಗಿದನು. ಇದರಿಂದ ಹತ್ತಿರ ಬರುತ್ತಿದ್ದ ರಾಹು ಸುಟ್ಟುಹೋಗುವ ಸಾಧ್ಯತೆ ಇತ್ತಾದರೂ, ಈ ಶಾಖವನ್ನು ಎದುರಿಸಲು ಇಡೀ ಜಗತ್ತಿಗೆ ಸಾಧ್ಯವಾಗುತ್ತಿರಲಿಲ್ಲ. ಬ್ರಹ್ಮದೇವನ ಸಲಹೆಯ ಮೇರೆಗೆ ಮಹರ್ಷಿ ಕಶ್ಯಪರು ತಮ್ಮ ಮಗನಾದ ಅರುಣನನ್ನು ಸೂರ್ಯನ ಕೋಪವನ್ನು ಕಡಿಮೆಗೊಳಿಸಲು ಕಳುಹಿಸಿದರು. ಅರುಣ ಸೂರ್ಯನ ಮುಂದೆ ನಿಂತು ಹೊರಚೆಲ್ಲುತ್ತಿದ್ದ ಶಾಖವನ್ನು ತಡೆಹಿಡಿದನು. ಇದರಿಂದ ಸಂತೃಪ್ತನಾದ ಸೂರ್ಯ, ಅರುಣನನ್ನು ತನ್ನ ರಥದ ಸಾರಥಿಯಾಗುವಂತೆ ಕೇಳಿಕೊಂಡನು. ಆಗ ಸೂರ್ಯ, ಜಗತ್ತಿಗೆ ಸೂರ್ಯೋದಯಕ್ಕೂ ಮುನ್ನ ಅರುಣೋದಯವಾಗಲಿ ಎಂದು ಹರಸಿದನೆಂದು ದಂತಕಥೆಗಳು ಹೇಳುತ್ತವೆ. ರಾಮಾಯಣದ ಕಥೆಯಲ್ಲಿ ಬರುವ ಎರಡು ರಣಹದ್ದುಗಳಾದ ಜಟಾಯು ಮತ್ತು ಸಂಪತಿಯ ಬಗ್ಗೆ ನೀವು ಕೇಳಿಯೇ ಇರುತ್ತೀರಿ. ಇವರಿಬ್ಬರೂ ಅರುಣ ಮತ್ತು ಶ್ಯೇನಿ ದಂಪತಿಗಳ ಪುತ್ರರು. ಈ ಅರುಣನಿಗೆ ಇನ್ನೂ ಇಬ್ಬರು ಮಕ್ಕಳಿದ್ದರಂತೆ. ಆ ಇಬ್ಬರು ಮಕ್ಕಳ ಬಗ್ಗೆ ಇನ್ನೊಂದು ಕುತೂಹಲಕಾರಿ ಕಥೆ ಕೂಡ ಕೇಳಿಬರುತ್ತದೆ. ಸಹೋದರರು ಮುಂದೆ ರಾಮಾಯಣದಲ್ಲಿ (Ramayana Epic) ಪ್ರಮುಖ ಪಾತ್ರಗಳಾಗಿ ಕಾಣಿಸಿಕೊಳ್ಳುತ್ತಾರೆ.
Raghavendra N
Written By

Raghavendra N

Content Writer

17 years of experience in Media and Digital Media.Expertise in Scripting, Video Production,Documentary Making and ad Films

Comments

No comments yet.