Devotional

ಯಾರು ಗೊತ್ತಾ ಈ ತಾಯಿ ಕಾತ್ಯಾಯಿನಿ: Kushmanda,Skandamata & Katyayini.!

ಯಾರು ಗೊತ್ತಾ ಈ ತಾಯಿ ಕಾತ್ಯಾಯಿನಿ: Kushmanda,Skandamata & Katyayini.!
ಕುಷ್ಮಾಂಡ ಇಲ್ಲಿ ದೇವಿಯ ಒಂಭತ್ತು ರೂಪಗಳು ಕೂಡ ನಮಗೆ ಬದುಕಿನ ಒಂಭತ್ತು ಗುಣಗಳನ್ನ ಒಂಭತ್ತು ಹಂತಗಳನ್ನ ಒಂಭತ್ತು ಪಾಠಗಳನ್ನ ಹೇಳ್ತಾ ಇವೆ. ಇದನ್ನ ಅರ್ಥ ಮಾಡಿಕೊಂಡು ದೇವಿಯ ಆರಾಧನೆ ಮಾಡಿದರೆ ಆಕೆಯ ಸಂದೇಶವನ್ನ ನಾವು ಅಳವಡಿಸಿಕೊಂಡರೆ ಅದು ಅರ್ಥಪೂರ್ಣ ಅನ್ಸುತ್ತೆ. ಹಾಗಲ್ಲದೆ ಇದ್ರೆ ಅದು ವ್ಯರ್ಥಪೂರ್ಣ. ಇಲ್ಲಿ ನಾಲ್ಕನೇ ರೂಪದ ಬಗ್ಗೆ ನಾವು ನೋಡುದಾದರೆ ಸೃಷ್ಟಿ ಶುರುವಾಗುವ ಮೊದಲಿನ ಕಾಲಘಟ್ಟಕ್ಕೆ ನಾವು ಹೋಗಬೇಕು. ಅವತ್ತಿಗೆ ಇಡೀ ಬ್ರಹ್ಮಾಂಡ ಶೂನ್ಯ ಶೂನ್ಯ.. ಅಲ್ಲಿ ಸೂರ್ಯ ಇಲ್ಲ, ಬೆಳಕಿಲ್ಲ ಭೂಮಿ ಇಲ್ಲ, ಈ ಬ್ರಹ್ಮಾಂಡವು ಇಲ್ಲ.. ಎಲ್ಲೆಲ್ಲೂ ಕತ್ತಲೆ ಕಗ್ಗತ್ತಲೆ. ಆಗ ದೇವಿ ಮೆಲ್ಲನೆ ನಕ್ಕಳು. ಆಕೆಯ ನಗುವಿನಿಂದ ಬ್ರಹ್ಮಾಂಡದ ಜನನ ಆಯಿತು. ನಮ್ಮ ವಿಜ್ಞಾನ ಬಿಗ್ ಬ್ಯಾಂಗ್ ಥಿಯರಿ ಬಗ್ಗೆ ಹೇಳುತ್ತಲ್ವೇ, ಅದನ್ನೇ ಪುರಾಣಗಳು ಭಕ್ತಿಯಿಂದ ದೇವಿ ನಕ್ಕಳು ಅಂತ ಹೇಳುತ್ತವೆ. ಅಣುಬಾಂಬಿನ ಪರೀಕ್ಷೆ ಮಾಡಿದ ಭಾರತ ಅವತ್ತು ಬುದ್ಧನಕ್ಕ ಅಂತ ಹೇಳಲಿಲ್ವೇ ಇದು ಕೂಡ ಹಾಗೇನೆ ಇನ್ನು ಆ ನಗುವಿನ ಬೆಳಕಿನಿಂದ ತಾಯಿ ಈ ಜಗತ್ತನ್ನ ಸೃಷ್ಟಿ ಮಾಡಿದಳು. ಕೂ ಅಂದ್ರೆ ಸ್ವಲ್ಪ ಅಂತಲೂ ಉಷ್ಮ ಅಂದ್ರೆ ಶಕ್ತಿ ಅಥವಾ ಬಿಸಿ ಶಾಖ ಅಂತಲೂ ಇನ್ನು ಅಂಡ ಅಂದ್ರೆ ಮೊಟ್ಟೆ ಅಂತಲೂ ಅರ್ಥ. ಈ ಶಕ್ತಿಯ ಮೊಟ್ಟೆಯ ಮೂಲಕ ಇಡೀ ಜಗತ್ತನ್ನ ತಾಯಿ ಸೃಷ್ಟಿ ಮಾಡಿದ್ಲು ಅಂತ ಇದರ ಅರ್ಥ. ಹಾಗೆ ಭೂಮಿ ಮತ್ತು ಬ್ರಹ್ಮಾಂಡ ಸೃಷ್ಟಿ ಆಯಿತು. ನೋಡಿ ಆಗ ಇಡೀ ಭೂಮಂಡಲವನ್ನ ಹಿಮ ಆವರಿಸಿಕೊಂ ಅಲ್ಲಿ ನೀರು ಹಾಗೂ ಜೀವರಾಶಿಯ ಉಗಮಕ್ಕೆ ಆ ಹಿಮ ಅನ್ನೋದು ಕರಗಬೇಕಿತ್ತು. ಆಗ ತಾಯಿ ತನ್ನ ನಗುವಿನ ಬೆಳಕಿನಿಂದ ಶಾಖವನ್ನ ಉಂಟುಮಾಡಿ ಆ ಹಿಮ ಕರಗು ಹಾಗೆ ಮಾಡಿದ್ಳು. ಕುಂದರೆ ಭೂಮಿ ಅನ್ನು ಅರ್ಥ ಕೂಡ ಇದೆ ಉಷ್ಮ ಅಂದ್ರೆ ಶಾಖ ಹಿಮಾಚಾದಿತವಾಗಿ ಮೊಟ್ಟೆಯಂತಿದ್ದ ಭೂಮಿಗೆ. ತನ್ನ ನಗುವಿನ ಮೂಲಕ ಶಾಖ ಕೊಟ್ಟು, ಅಲ್ಲಿ ಹಿಮ ಕರಗಿ ಜೀವರಾಶಿಗಳ ಉಗಮಕ್ಕೆ ಈ ತಾಯಿ ಕಾರಣ ಆದಳು. ಹೀಗಾಗಿ ಈಕೆಗೆ ಕೂಷ್ಮಾಂಡ ಅನ್ನೋ ಹೆಸರು. ಈ ತಾಯಿ ಸೌರಮಂಡಲದ ಒಳಗೆ ನೆಲೆಸಿ ಸೂರ್ಯನಿಗೆ ಶಕ್ತಿ ತುಂಬುತ್ತಾಳೆ ಅನ್ನೋದು ನಂಬಿಕೆ. ಎಂಟು ಕೈಗಳು ಕಮಂಡಲ ಬಿಲ್ಲು, ಬಾಣ ಕಮಲ, ಅಮೃತ ಕಲಶ, ಚಕ್ರ ಗಧೆ ಮತ್ತು ಜಪಮಾಲೆ. ಸಿಂಹ ವಾಹನ, ಪ್ರಸನ್ನಮುಖ ಇದು ಈಕೆಯ ಸ್ವರೂಪ. ಕೂಷ್ಮಾಂಡಾ ಸ್ಕಂದಮಾತಾ ಮತ್ತು ಕಾತ್ಯಾಯಿನಿ ಬಗ್ಗೆ ತಿಳಿದುಕೊಳ್ಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
M S Raghavendra
Written By

M S Raghavendra

Cheif Editor

Over 30 Years of Experience in Media. Expertise in Youtube Content Creation, Choosing niche ,Digital Marketing.

Comments

No comments yet.