ಮಳೆಗಾಲ ಬಂತು, ಎಲ್ಲಿ ನೋಡಿದರೂ ಮಳೆಯ ಅನುಭವ. ಈ ಮಳೆ ಇಳೆಯನ್ನು ಅಪ್ಪುತ್ತಿದ್ದಂತೆ ಕೋಗಿಲೆ ಹಾಡುವುದನ್ನು ನಿಲ್ಲಿಸುತ್ತದೆ. ಕಪ್ಪೆಗಳು ವಟಗುಟ್ಟುವುದಕ್ಕೆ ಶುರುವಾಗುತ್ತವೆ. ಎಲ್ಲಿ ಕೇಳಿದರೂ ಕಪ್ಪೆಗಳು ಕಿರುಚುವ ಸದ್ದೇ. ಅದು ಅಲ್ಲಿಗೆ ನಿಲ್ಲುತ್ತದೆಯೇ? ಇಲ್ಲ. ಆ ಕಪ್ಪೆಗಳು ಮನೆ ಅಂಗಳಕ್ಕೆ ಬರುತ್ತವೆ. ಅವುಗಳನ್ನು ಹುಡುಕಿಕೊಂಡು ನಾಗರಾಜನ ಆಗಮನವೂ ಆಗುತ್ತದೆ. ಸೋ, ಮಳೆಗಾಲ ಎಂದರೆ ಕಪ್ಪೆಗಳ ವಟವಟ, ಹಾವಿನ ಕಾಟ, ಜನರ ಪ್ರಾಣಕ್ಕೆ ಸಂಕಟ. ಹಾಗೆ ನೋಡಿದರೆ ನಾವು ಅತ್ಯಂತ ತುಚ್ಛವಾಗಿ ನೋಡುವ ಈ ಕಪ್ಪೆಗಳಲ್ಲಿ ಕೆಲವು ಜಗತ್ತಿನಲ್ಲೇ ಅತ್ಯಂತ ವಿಷಕಾರಿ ಪ್ರಾಣಿಗಳು (most poisonous animals in the world) ಎಂದೇ ವಿಷಕಾರಿ ಎನಿಸಿಕೊಳ್ಳುತ್ತವೆ. ಕೆಲ ಪ್ರಭೇದಗಳು ನಮ್ಮ ಚರ್ಮಕ್ಕೆ ತಾಕಿದರೂ ಕೂಡ ಮನುಷ್ಯ ಸಾವನ್ನಪ್ಪುತ್ತಾನೆ. ಅದರಲ್ಲೂ ಕೆಲ ವಿಷಕಾರಿ ಕಪ್ಪೆಗಳ (poisonous frogs) ವಿಷ ಜಗತ್ತಿನ ಅತ್ಯಂತ ವಿಷಕಾರಿ ಹಾವು ಎನಿಸಿಕೊಳ್ಳುವ ಇನ್‌ಲ್ಯಾಂಡ್ ತೈಪಾನ್ (Inland Taipan)ಗಿಂತಲೂ ಭಯಾನಕ ಎಂದು ಹೇಳಲಾಗುತ್ತದೆ. ಹಾಗಾದರೆ ಏನಿದು ವಿಷಕಾರಿ ಕಪ್ಪೆಗಳ ಕಥೆ (deadliest frog species story)? ಅದರಲ್ಲಿ ಪ್ರಮುಖ ವಿಧಗಳು ಯಾವುವು? ಅವು ಎಲ್ಲಿವೆ ಎನ್ನುವುದರ ಬಗ್ಗೆ ಒಂದಷ್ಟು ಮಾಹಿತಿ.
ಪ್ರಾಣಿ ಪ್ರಪಂಚದ ಅಚ್ಚರಿ: ವಿಷಕಾರಿ ಕಪ್ಪೆಗಳ ಪರಿಚಯ
ಈ ಜಗತ್ತೇ ಹಾಗೇ. ಮನುಷ್ಯನಿಗೆ ಅದನ್ನು ಅರಿಯುವುದಕ್ಕೆ ಸಾಧ್ಯವೇ ಇಲ್ಲ. ಅದರಲ್ಲೂ ಪ್ರಾಣಿ ಪ್ರಪಂಚ (wildlife animal kingdom) ಇದೆಯಲ್ಲ, ಅದಂತೂ ಊಹೆಗೆ ನಿಲುಕದ ವಿಷಯ. ಅಂತಹ ಪ್ರಪಂಚದಲ್ಲಿನ ಸಣ್ಣ ಜೀವಿ ಕಪ್ಪೆ. ಕಪ್ಪೆ ಎಂದಾಕ್ಷಣ ನಾವು ನಮ್ಮ ಭಾಗಗಳಲ್ಲಿ ನೋಡುವ ಕಪ್ಪೆಗಳು ನೆನಪಾಗುತ್ತವೆ. ಕೆಲ ಕಪ್ಪೆಗಳು ಚಿಕ್ಕದಾಗಿದ್ದರೆ, ಇನ್ನು ಕೆಲ ಕಪ್ಪೆಗಳ ಗಾತ್ರ ಭಯ ಹುಟ್ಟಿಸುತ್ತದೆ. ಇನ್ನು ಅವುಗಳನ್ನು ತಿನ್ನುವುದಕ್ಕೆ ಬರುವ ಹಾವು, ಕಪ್ಪೆಗಳನ್ನು ನುಂಗಿ ಸುತ್ತಾಡಿಕೊಂಡು ಮಲಗಿರುವ ಸಾಕಷ್ಟು ದೃಶ್ಯಗಳನ್ನು ನಾವು ಕಂಡಿದ್ದೇವೆ. ಕೆಲವೊಮ್ಮೆ ಮನೆ ಬಾಗಿಲಿಗೂ, ಮನೆಯ ಒಳಕ್ಕೂ ಬಂದಂತಹ ಕಪ್ಪೆಗಳನ್ನು ಬರಿಗೈಯಲ್ಲೇ ಹಿಡಿದು ಹೊರಗೆ ಎಸೆದಿರುವ ಅನುಭವ ಕೂಡ ಸಾಕಷ್ಟು ಜನರಿಗೆ ಆಗಿರುತ್ತದೆ. ಅಂದಹಾಗೆ, ಜಗತ್ತಿನಲ್ಲಿರುವ ಅತ್ಯಂತ ವಿಷಕಾರಿ ಕಪ್ಪೆಗಳ ಪೈಕಿ ಅಗ್ರಸ್ಥಾನದಲ್ಲಿ ನಿಲ್ಲುವುದು ಗೋಲ್ಡನ್ ಪಾಯಿಸನ್ ಆ್ಯರೋ ಫ್ರಾಗ್ (Golden Poison Arrow Frog) — ಇದನ್ನೇ ಜಗತ್ತಿನ ಅತ್ಯಂತ ವಿಷಕಾರಿ ಕಪ್ಪೆ (world's most poisonous frog) ಎಂದೂ ಕರೆಯಲಾಗುತ್ತದೆ.
ಮನುಷ್ಯನೇ ಅತ್ಯಂತ ವಿಷಕಾರಿ ಜೀವಿ?
ಈ ಜಗತ್ತಿನಲ್ಲಿ ಮನುಷ್ಯನಿಗೂ ಮಿಗಿಲಾದ ಯಾವುದಾದರೂ ವಿಷಜಂತು ಇದೆಯಾ? ನಿಜ, ಜಗತ್ತಿನಲ್ಲಿ ಮನುಷ್ಯನಷ್ಟು ವಿಷಕಾರಿ ಪ್ರಾಣಿ ಮತ್ತೊಂದಿಲ್ಲ. ತಾನು ಬದುಕುವುದಕ್ಕಾಗಿ ಜಗತ್ತನ್ನೇ ನಾಶ ಮಾಡುವುದಕ್ಕೂ ಹಿಂಜರಿಯದ ಮನುಷ್ಯನ ಕಣಕಣದಲ್ಲೂ ವಿಷ ಇದೆ. ತಿನ್ನುವ ಅಕ್ಕಿಯಲ್ಲಿ ಕಲಬೆರಕೆ ಮಾಡುತ್ತಾ, ಕುಡಿಯುವ ನೀರಿಗೂ ವಿಷ ಸೇರಿಸುತ್ತಾ, ಜೀವ ಕೊಡುವ ಮರಗಳನ್ನು ಕಡಿಯುತ್ತಾ, ಹಣಕ್ಕಾಗಿ ತನ್ನವರ ಬೆನ್ನಿಗೆ ಇರಿಯುತ್ತಿರುವ ಮನುಷ್ಯನನ್ನು ಕಂಡವರಿಗೆ ಈ ಪ್ರಾಣಿ-ಪಕ್ಷಿಗಳಲ್ಲಿನ ವಿಷ ಏನೂ ಅಲ್ಲ ಎಂದು ಅನಿಸಿಬಿಡುತ್ತದೆ. ಮನುಷ್ಯ ವಿನಾಕಾರಣ ವಿಷಜಂತುವಾಗಿ ಬದಲಾಗಿದ್ದಾನೆ. ಆದರೆ ಪ್ರಾಣಿಗಳಲ್ಲಿ ಅವುಗಳನ್ನು ಅವು ಕಾಪಾಡಿಕೊಳ್ಳಲಿ ಎನ್ನುವ ಕಾರಣಕ್ಕೆ ಪ್ರಕೃತಿ ಸ್ವಲ್ಪ ವಿಷವನ್ನು ತುಂಬಿದೆ. ಅವುಗಳಲ್ಲಿ ಈ ವಿಷಕಾರಿ ಉಭಯಚರಗಳು (venomous amphibians) ಕೂಡ ಒಂದು.
Golden Poison Arrow Frog ಎಲ್ಲಿ ಕಂಡುಬರುತ್ತದೆ?
ಈ ಗೋಲ್ಡನ್ ಪಾಯಿಸನ್ ಆ್ಯರೋ ಫ್ರಾಗ್‌ಗಳು ನಮ್ಮಲ್ಲಿ ಕಂಡುಬರುವುದಿಲ್ಲ. ಇವು ಮಧ್ಯ ಹಾಗೂ ದಕ್ಷಿಣ ಅಮೆರಿಕಾದ ಮಳೆಕಾಡುಗಳಲ್ಲಿ (Central and South American rainforests) ಕಂಡುಬರುತ್ತವೆ. ಅದರಲ್ಲೂ ಮಧ್ಯ ಅಮೆರಿಕಾದ ಕಾಡುಗಳಲ್ಲಿ ಈ ಕಪ್ಪೆಗಳು ಹೆಚ್ಚು ಕಾಣಸಿಗುತ್ತವೆ. **ಅಮೇಜಾನ್ ಮಳೆಕಾಡು (Amazon rainforest)**ನಲ್ಲಿ ಕೂಡ ವಿಷಕಾರಿ ಕಪ್ಪೆಗಳಿದ್ದರೂ ಕೂಡ ಅವು ಬೇರೆ, ಇವು ಬೇರೆ. ಈ ಗೋಲ್ಡನ್ ಪಾಯಿಸನ್ ಆ್ಯರೋ ಫ್ರಾಗ್ ಅಥವಾ ಗೋಲ್ಡನ್ ಡಾರ್ಟ್ ಫ್ರಾಗ್ (Golden Dart Frog)ಗಳು ಜಗತ್ತಿನ ಅತ್ಯಂತ ವಿಷಕಾರಿ ಪ್ರಾಣಿಗಳಲ್ಲಿ ಒಂದು ಎಂದು ಗುರುತಿಸಿಕೊಳ್ಳುತ್ತವೆ. ಇವುಗಳನ್ನು ವೈಜ್ಞಾನಿಕ ಜಗತ್ತು ವೈಜ್ಞಾನಿಕ ಹೆಸರು (scientific name) ಫಿಲೋಬೇಟ್ಸ್ ಟೆರಿಬಿಲಿಸ್ (Phyllobates terribilis) ಎಂದು ಗುರುತಿಸುತ್ತದೆ. ಇವು ಗಾತ್ರದಲ್ಲಿ ತುಂಬಾನೇ ಚಿಕ್ಕವು ಎನಿಸಿಕೊಳ್ಳುತ್ತವೆ. ಆದರೆ ಇದರಲ್ಲಿರುವ ವಿಷವಿದೆಯಲ್ಲ, ಅದು ಅತ್ಯಂತ ಭಯಾನಕ. ಹೀಗಾಗಿಯೇ ಇವುಗಳನ್ನು ಜಗತ್ತಿನ ಅತ್ಯಂತ ವಿಷಕಾರಿ ಕಶೇರುಕ ಪ್ರಾಣಿ (most toxic vertebrate animal) ಎಂದು ಗುರುತಿಸಲಾಗುತ್ತದೆ.
ಈ ಕಪ್ಪೆಯ ವಿಷ ಎಷ್ಟು ಅಪಾಯಕಾರಿ?
ಈ ಗೋಲ್ಡನ್ ಪಾಯಿಸನ್ ಕಪ್ಪೆಗಳು 4 ರಿಂದ 6 ಸೆಂಟಿಮೀಟರ್‌ನಷ್ಟು ಉದ್ದ ಇರುತ್ತವೆ. ಹಾಗೆಯೇ ಇವುಗಳ ಚರ್ಮ ಹೊಳೆಯುತ್ತಾ ಇರುತ್ತದೆ. ಹಳದಿ, ಕಿತ್ತಳೆ ಅಥವಾ ಹಸಿರು ಬಣ್ಣದಲ್ಲಿ ಕಂಡುಬರುವ ಈ ಕಪ್ಪೆಗಳು ಚರ್ಮದ ಮೇಲೆ ವಿಷವನ್ನು ಉತ್ಪತ್ತಿ ಮಾಡಿದಾಗ ತುಂಬಾನೇ ಪ್ರಕಾಶಮಾನವಾಗಿ ಕಾಣುತ್ತವೆ. ಹೀಗಾಗಿಯೇ ಇವುಗಳನ್ನು ಬೇಟೆಯಾಡುವುದಕ್ಕೆ ಇನ್ನಿತರ ಜೀವಿಗಳು ಹೆದರುತ್ತವೆ. ಒಂದು ವೇಳೆ ಯಾವುದಾದರೂ ಪ್ರಾಣಿ ಇವುಗಳನ್ನು ತಿಂದಿದ್ದೇ ಆದರೆ ಅದರ ಬಲಿ ಖಂಡಿತ ಎಂದು ಹೇಳಲಾಗುತ್ತದೆ. ಈ ಕಪ್ಪೆಯ ಚರ್ಮದಲ್ಲಿ ಬ್ಯಾಟ್ರಾಕೋಟಾಕ್ಸಿನ್ (Batrachotoxin) ಎಂಬ ಜಗತ್ತಿನ ಅತ್ಯಂತ ಶಕ್ತಿಶಾಲಿ ವಿಷ (world's most powerful toxin) ಇರುತ್ತದೆ. ಈ ವಿಷ ನರಮಂಡಲದ ಕಾರ್ಯವನ್ನು ಸ್ಥಗಿತಗೊಳಿಸಿ ಸ್ನಾಯುಗಳು ಸೆಳೆಯುವಂತೆ ಮಾಡುತ್ತದೆ. ಕೆಲವೊಮ್ಮೆ ಪಾರ್ಶ್ವವಾಯು, ಹೃದಯ ವೈಫಲ್ಯಗಳು ಉಂಟಾಗಿ ಅದರಿಂದ ಮನುಷ್ಯ ಸಾಯಲೂಬಹುದು ಎಂದು ಹೇಳಲಾಗುತ್ತದೆ. ಈ ವಿಷ ಎಷ್ಟು ಸ್ಟ್ರಾಂಗ್ ಆಗಿರುತ್ತದೆ ಎಂದರೆ, ಸಣ್ಣ ಪ್ರಮಾಣದ ವಿಷ ಕೂಡ ಮನುಷ್ಯನನ್ನು ಕೊಲ್ಲುವಷ್ಟು ಶಕ್ತಿಶಾಲಿಯಾಗಿದೆ. ಒಂದು ಲೆಕ್ಕಾಚಾರದ ಪ್ರಕಾರ, ಒಂದು ಕಪ್ಪೆಯ ಮೈಮೇಲಿನ ವಿಷ ಹತ್ತು ಮಂದಿ ಮನುಷ್ಯರನ್ನು ಕೊಲ್ಲಬಹುದು ಎಂದು ಹೇಳಲಾಗುತ್ತದೆ. ಹಾಗೆಯೇ ಅಷ್ಟೇ ಪ್ರಮಾಣದ ವಿಷದಿಂದ ಎರಡು ಆಫ್ರಿಕಾದ ದೈತ್ಯ ಆನೆಗಳನ್ನೇ ಕೊಲ್ಲಬಹುದು ಎಂದು ಹೇಳಲಾಗುತ್ತದೆ. ಇಲ್ಲಿ ಕೆಲವೇ ಕೆಲವು ಮಿಲಿಗ್ರಾಂನಷ್ಟು ವಿಷ ಇಷ್ಟೊಂದು ಜನರನ್ನು ಕೊಲ್ಲುವುದಕ್ಕೆ ಸಾಧ್ಯವೆಂದರೆ, ಆ ಕಪ್ಪೆ ಅದೆಷ್ಟು ವಿಷಕಾರಿ ಅಲ್ಲವಾ? ಇನ್ನು ಈ ವಿಷಕ್ಕೆ ಇವತ್ತಿಗೂ ಕೂಡ ಆಂಟಿಡೋಟ್ (Antidote) ಇಲ್ಲವಂತೆ — ಅಂದರೆ ಈ **ಮಾರಣಾಂತಿಕ ವಿಷ (deadly poison)**ಗೆ ಇನ್ನೂ ಪ್ರತಿ ಔಷಧಿ ಕಂಡುಹಿಡಿದಿಲ್ಲ. ಕೆಲವೊಮ್ಮೆ ಈ ವಿಷ ಸಣ್ಣ ಪ್ರಮಾಣದಲ್ಲಿ ಮನುಷ್ಯನ ದೇಹ ಸೇರಿದರೂ ಆ ಮನುಷ್ಯನಿಗೆ ಪಿಡಿಸುವುದು, ಬಾಯಲ್ಲಿ ಹೆಚ್ಚಿನ ಪ್ರಮಾಣದ ಲಾಲಾರಸ ಕಂಡುಬರುವುದು, ಸ್ನಾಯು ಸೆಳೆತ ಆಗುವುದು ಈ ರೀತಿಯ ಲಕ್ಷಣಗಳು ಕಂಡುಬರುತ್ತವೆ.
ವಿಷ ಎಲ್ಲಿಂದ ಬರುತ್ತದೆ? ಆಹಾರ ಕ್ರಮದ ರಹಸ್ಯ
ಇನ್ನು ಇದರ ಜೊತೆ ಇಲ್ಲೊಂದು ವಿಶೇಷ ಇದೆ. ಅದೇನೆಂದರೆ, ಈ ಕಪ್ಪೆಗಳಲ್ಲಿ ಕಂಡುಬರುವ ವಿಷ ಈ ಕಪ್ಪೆಗಳ ಒಳಗೆ ಉತ್ಪತ್ತಿಯಾಗುವುದಲ್ಲ. ಬದಲಾಗಿ, ಮಳೆಕಾಡುಗಳಲ್ಲಿ ವಾಸ ಮಾಡುವ ಈ ಕಪ್ಪೆಗಳು ವಿವಿಧ ರೀತಿಯ ಕೀಟಗಳನ್ನು ಭಕ್ಷಿಸುತ್ತವೆ. ಅದರಲ್ಲೂ ಜೇಡ, ಜಿರಳೆ, ಇರುವೆಗಳು, ಗೆದ್ದಲು ಹಾಗೂ ಇನ್ನಿತರ ಕೀಟಗಳನ್ನು ಭಕ್ಷಿಸುವುದರಿಂದ ಆ ಕೀಟಗಳಲ್ಲಿ ಇರುವಂತಹ ವಿಷಕಾರಿ ಅಂಶ ಈ ಕಪ್ಪೆಯಲ್ಲಿ ಶೇಖರಣೆಯಾಗುತ್ತದೆ. ಸೋ, ಆ ಪರಿಸರದಲ್ಲಿ ಆ ಕೀಟಗಳನ್ನು ತಿಂದು ಬದುಕುವ ಈ ಕಪ್ಪೆಗಳು ಆಹಾರ ಸರಪಳಿಯ ಮೂಲಕ ವಿಷ ಶೇಖರಣೆ (toxin accumulation through food chain) ಆಗುತ್ತಾ ವಿಷಕಾರಿಯಾಗಿ ಬದಲಾಗುತ್ತಿವೆ. ಇಂತಹ ಕಪ್ಪೆಗಳು ಆರರಿಂದ ಹತ್ತು ವರ್ಷಗಳ ವರೆಗೂ ಬದುಕಬಲ್ಲವು ಎಂದು ಹೇಳಲಾಗುತ್ತಿದೆ. ಇದು ಕಾಡಿನಲ್ಲಿ ಬಿದ್ದ ಎಲೆಗಳ ಕೆಳಗೆ ಮೊಟ್ಟೆ ಇಟ್ಟು, ಆ ಬಳಿಕ ಆ ಮೊಟ್ಟೆಯಿಂದ ಹೊರಬರುವ ಮರಿಗಳನ್ನು ಎಲೆಗಳ ಒಳಗೆ ಶೇಖರಣೆಯಾಗಿರುವ ನೀರಿನಲ್ಲಿ ಇಟ್ಟು ಉಳಿಸಿಕೊಳ್ಳುತ್ತವೆ. ಇಲ್ಲಿ ಕೆಲವೊಮ್ಮೆ ಹೆಣ್ಣು ಕಪ್ಪೆಗಳು ತಮ್ಮೊಡಲಲ್ಲಿನ ಮೊಟ್ಟೆಗಳನ್ನು ಈ ಮರಿಗಳಿಗೆ ಆಹಾರವಾಗಿ ಕೊಟ್ಟು ಉಳಿಸಿಕೊಳ್ಳುವುದನ್ನು ಗಮನಿಸಿದರೆ ಪ್ರಕೃತಿಯ ವೈಚಿತ್ರ್ಯ ಅರ್ಥವಾಗುತ್ತದೆ.
ಬುಡಕಟ್ಟು ಜನಾಂಗದವರ ಬೇಟೆ ಆಯುಧ: Poison Arrow Frog ಎಂಬ ಹೆಸರು ಹೇಗೆ ಬಂತು?
ಇನ್ನು ಈ ಕಪ್ಪೆಗಳ ಸಹವಾಸಕ್ಕೆ ಮನುಷ್ಯ ಹೋಗುವುದು ತುಂಬಾನೇ ಕಡಿಮೆ. ಯಾಕೆಂದರೆ ಇವು ಮಳೆಕಾಡುಗಳ ಒಳಗೆ ಇರುತ್ತವೆ. ಆ ದಟ್ಟ ಕಾಡಿನಲ್ಲಿ ಮನುಷ್ಯರು ಕೇವಲ ಅಧ್ಯಯನಕ್ಕಷ್ಟೇ ಹೋಗುತ್ತಾರೆ. ಸೋ, ಇದರಿಂದ ನೇರವಾಗಿ ಮನುಷ್ಯನಿಗೆ ಹಾನಿ ಇಲ್ಲ. ಆದರೆ ಈ ಹಿಂದೆ ಆದಿವಾಸಿ ಬುಡಕಟ್ಟು ಜನರು ಈ ಕಪ್ಪೆಗಳನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದರು. ಅವತ್ತಿಗೇ ಅವರಿಗೆ ಈ ಕಪ್ಪೆಗಳ ಮೇಲಿನ ವಿಷದ ಬಗ್ಗೆ ಅರಿವಿತ್ತು. ಅವರು ಈ ಕಪ್ಪೆಗಳ ದೇಹದ ವಿಷವನ್ನು ಮೊನಚಾದ ಮುಳ್ಳುಗಳಿಗೆ ತಗುಲಿಸಿ, ಆ ಮುಳ್ಳುಗಳನ್ನು ಹಕ್ಕಿಗಳ ಮೇಲೆ ಹೊಡೆದು ಆ ಹಕ್ಕಿಗಳನ್ನು ಬೇಟೆಯಾಡುವುದಕ್ಕೆ ಬಳಸಿಕೊಳ್ಳುತ್ತಿದ್ದರು. ಇನ್ನು ಎಂಬೆರಾ (Emberá tribe) ಎಂಬ ಜನಾಂಗದವರು ಈ ಕಪ್ಪೆಯ ವಿಷವನ್ನು ಬೇಟೆ ಬಾಣಗಳ (hunting arrows) ತುದಿಗಳಿಗೆ ಹಚ್ಚುತ್ತಿದ್ದರು. ಹೀಗಾಗಿಯೇ ಈ ಕಪ್ಪೆಗಳಿಗೆ Poison Arrow Frog ಎಂಬ ಹೆಸರು ಬಂತು. ಒಮ್ಮೆ ಆ ವಿಷಲೇಪಿತ ಬಾಣಗಳು ಪ್ರಾಣಿಗಳಿಗೆ ತಗುಲಿದರೆ, ಅವು ಮಸಲ್‌ನಲ್ಲಿ ಸಮಸ್ಯೆ ಉಂಟಾಗಿ ಕ್ಷಣಮಾತ್ರದಲ್ಲಿ ಸಾವನ್ನಪ್ಪುತ್ತಿದ್ದವು. ಹೀಗಾಗಿಯೇ ಈ ಕಪ್ಪೆಗಳ ವಿಷಯವನ್ನು ಅನಾದಿ ಕಾಲದಿಂದಲೂ ಮನುಷ್ಯ ಬಳಸುತ್ತಿದ್ದಾನೆ ಎನ್ನುವುದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಇನ್ನು ಈ ಗೋಲ್ಡನ್ ಪಾಯಿಸನ್ ಆ್ಯರೋ ಫ್ರಾಗ್‌ನಲ್ಲಿ ಮೂರ್ನಾಲ್ಕು ವಿಧಗಳನ್ನು ನಾವು ಗಮನಿಸಬಹುದು. ಅದರಲ್ಲೂ ಪ್ರಮುಖವಾಗಿ ಹಳದಿ, ತಿಳಿ ಹಸಿರು, ಕಿತ್ತಳೆ ಬಣ್ಣ ಹಾಗೂ ಕಿತ್ತಳೆ ಬಣ್ಣದ ಮೈಕಟ್ಟು ಮತ್ತು ಕಪ್ಪು ಕಾಲುಗಳ ಕಪ್ಪೆಗಳು ಕಂಡುಬರುತ್ತವೆ.
Poison Dart Frog: ಗೋಲ್ಡನ್ ಫ್ರಾಗ್‌ನ ಸೋದರ ಪ್ರಭೇದ
ಈ ಗೋಲ್ಡನ್ ಫ್ರಾಗ್‌ನ ಜೊತೆಗೆ ಇದೇ ಮಧ್ಯ ಅಮೆರಿಕಾ ಹಾಗೂ ದಕ್ಷಿಣ ಅಮೆರಿಕಾದ ಕಾಡುಗಳಲ್ಲಿ ಕಂಡುಬರುವ ಪಾಯಿಸನ್ ಡಾರ್ಟ್ ಫ್ರಾಗ್ (Poison Dart Frog species) ಪ್ರಭೇದ ಕೂಡ ಕಂಡುಬರುತ್ತದೆ. ಈ ಪಾಯಿಸನ್ ಡಾರ್ಟ್ ಫ್ರಾಗ್‌ಗಳು ನೋಡುವುದಕ್ಕೆ ತುಂಬಾ ಕಲರ್‌ಫುಲ್ ಆಗಿರುತ್ತವೆ. ಆದರೆ ಇದು ಕೂಡ ವಿಷಕಾರಿ ಕಪ್ಪೆಗಳ ಜಾತಿಗೆ ಸೇರಿದೆ. ಆದರೆ ಗೋಲ್ಡನ್ ಫ್ರಾಗ್‌ಗಳಿಗೆ ಹೋಲಿಸಿಕೊಂಡರೆ ಈ ಡಾರ್ಟ್ ಫ್ರಾಗ್ ಪ್ರಭೇದದಲ್ಲಿನ ವಿಷಕಾರಿ ಅಂಶ ಕೊಂಚ ಕಡಿಮೆ ಎಂದು ಅನಿಸುತ್ತದೆ. ಇವು ಬ್ರೆಜಿಲ್, ಕೊಲಂಬಿಯಾ, ಪೆರು, ಈಕ್ವೆಡಾರ್, ಕೋಸ್ಟರಿಕಾ ಹಾಗೂ ಪನಾಮಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಈ ಕಪ್ಪೆಗಳು ಒಟ್ಟು ಆರು ಬಣ್ಣಗಳಲ್ಲಿ ಕಂಡುಬರುತ್ತವೆ. ನೀಲಿ, ಹಸಿರು, ಕೆಂಪು, ಕಿತ್ತಳೆ, ಹಳದಿ ಹಾಗೂ ಕಪ್ಪು ಬಣ್ಣದ ಕಲರ್‌ಫುಲ್ ವಿಷಕಾರಿ ಕಪ್ಪೆಗಳನ್ನು (colourful poisonous frogs) ನಾವು ಗಮನಿಸಬಹುದು. ಇನ್ನು ಈ ಕಪ್ಪೆಗಳು ಗೋಲ್ಡ್ ಫ್ರಾಗ್‌ನಷ್ಟು ವಿಷಕಾರಿ ಆಗಿರುವುದಿಲ್ಲ. ಆದರೂ ತಮ್ಮನ್ನು ತಿನ್ನುವುದಕ್ಕೆ ಬರುವ ಪ್ರಾಣಿಗಳನ್ನು ಹೆದರಿಸುವುದಕ್ಕೆ ಹಾಗೂ ಅವುಗಳಿಂದ ರಕ್ಷಣೆ ಪಡೆಯುವ ನಿಟ್ಟಿನಲ್ಲಿ ಈ ಕಪ್ಪೆಗಳು ವಿಷವನ್ನು ಉತ್ಪಾದಿಸುತ್ತವೆ. ಇನ್ನು ಈ ಕಪ್ಪೆಗಳ ವಿಶೇಷತೆ ಎಂದರೆ ಇವು ಹಗಲಿನಲ್ಲಿ ಹೆಚ್ಚು ಸಕ್ರಿಯವಾಗಿರುತ್ತವೆ. ಈ ಕಪ್ಪೆಗಳ ವಿಷದ ಮೇಲೆ ವೈದ್ಯಕೀಯ ಸಂಶೋಧನೆ (medical research on frog venom) ನಡೆಯುತ್ತಿರುವುದರಿಂದ, ಏನಾದರೂ ಔಷಧ ಸಿದ್ಧವಾದರೆ ಮುಂದಿನ ದಿನಗಳಲ್ಲಿ ಕಪ್ಪೆಗಳು ಮನುಷ್ಯನ ದುರಾಸೆಗೆ ಬಲಿಯಾದರೂ ಅಚ್ಚರಿ ಇಲ್ಲ.
ಈ ಅಪರೂಪದ ಜೀವಿಗಳ ತವರು: ಸೆಂಟ್ರಲ್ ಅಮೆರಿಕನ್ ಅಟ್ಲಾಂಟಿಕ್ ಮಳೆಕಾಡು
ಇನ್ನು ಈ ಕಪ್ಪೆಗಳು ಕಾಣಸಿಗುವ ಈ ಕಾಡಿದೆಯಲ್ಲ, ಇದು ಜಗತ್ತಿನಲ್ಲೇ ಅತ್ಯಂತ ಮಹತ್ವದ ಕಾಡು ಎಂದು ಅನಿಸಿಕೊಳ್ಳುತ್ತದೆ. ಇವು ಅಮೇಜಾನ್ ಮಳೆಕಾಡುಗಳಿಗಿಂತಲೂ ವಿಭಿನ್ನವಾಗಿ ಕಾಣುತ್ತವೆ. ಇವುಗಳನ್ನು ಸೆಂಟ್ರಲ್ ಅಮೆರಿಕನ್ ಅಟ್ಲಾಂಟಿಕ್ ಮೋಯಿಸ್ಟ್ ಫಾರೆಸ್ಟ್ (Central American Atlantic Moist Forest) ಎಂದು ಗುರುತಿಸಲಾಗುತ್ತದೆ. ಈ ಕಾಡುಗಳು Guatemala, Belize, Honduras, Nicaragua, Costa Rica, Panama ದೇಶಗಳಲ್ಲಿ ಒಟ್ಟು 89,979 ಚದರ ಕಿಲೋಮೀಟರ್‌ನಷ್ಟು ವಿಸ್ತಾರವಾಗಿದೆ. ಈ ಕಾಡುಗಳಲ್ಲಿ ವರ್ಷ ಪೂರ್ತಿ ಮಳೆ ಆಗುತ್ತಲೇ ಇರುತ್ತದೆ. ಇಲ್ಲಿ ವಿಶ್ವದ ಅನೇಕ ಅಪರೂಪದ ಪ್ರಾಣಿ ಸಂಕುಲಗಳಿವೆ (rare wildlife species). ಜಾಗ್ವಾರ್, ಪಾಯಿಸನ್ ಡಾರ್ಟ್ ಫ್ರಾಗ್, ಹೌಲರ್ ಮಂಕಿ, ಸ್ಲಾತ್, ಟೌಕಾನ್ ಸೇರಿದಂತೆ ಅತ್ಯಪರೂಪದ ಜೀವಿಗಳಿವೆ. ಇನ್ನು ಈ ಕಾಡುಗಳಿಗೂ ಕೂಡ ಕಂಟಕ ಎದುರಾಗಿದೆ. ಅರಣ್ಯನಾಶ, ಕೃಷಿ ಭೂಮಿಯ ವಿಸ್ತರಣೆ, ಹವಾಮಾನ ಬದಲಾವಣೆ ಹಾಗೂ ಮರ ಕಡಿತದ ಕಾರಣದಿಂದ ಈ ಮಳೆಕಾಡುಗಳ ನಾಶ (rainforest deforestation) ಎದುರಾಗುತ್ತಿದೆ. ನಿಮಗೆ ಗೊತ್ತಿರುವ ಹಾಗೆ ಜಗತ್ತಿನಲ್ಲಿ ಅತ್ಯಂತ ಕಠಿಣ ಕಾಡಿನ ದಾರಿ ಎನಿಸಿಕೊಂಡಿರುವ ಡಾರಿಯನ್ ಗ್ಯಾಪ್ (Darién Gap) ಇರುವುದು ಕೂಡ ಇದೇ ಕಾಡುಗಳ ನಡುವೆಯೇ. ಈ ಕಾಡುಗಳ ಕಾರಣದಿಂದಲೇ ದಕ್ಷಿಣ ಅಮೆರಿಕಾ ಮತ್ತು ಉತ್ತರ ಅಮೆರಿಕಾ ಖಂಡಗಳ ನಡುವೆ ನೇರ ರಸ್ತೆ ಸಂಪರ್ಕ ಇಲ್ಲದಂತಾಗಿದೆ. ಅಷ್ಟೊಂದು ದಟ್ಟ ಕಾಡು ಇಲ್ಲಿದ್ದು, ಆ ಕಾಡುಗಳಲ್ಲೇ ಈ ಜಗತ್ತಿನ ಅಪಾಯಕಾರಿ ವಿಷಕಾರಿ ಕಪ್ಪೆಗಳು (world's most dangerous poisonous frogs) ಕೂಡ ಕಾಣಸಿಗುತ್ತವೆ.
ಜಗತ್ತಿನ ಅತ್ಯಂತ ವಿಷಕಾರಿ ಕಪ್ಪೆ: Golden Poison Arrow Frog
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.