Global Affairs

ಭಾರತ-ಬಾಂಗ್ಲಾ ಗಡಿಯಲ್ಲಿ 40 ಹೊಸ Intelligence Bureau (IB) ಕಚೇರಿಗಳು.!

ಭಾರತ-ಬಾಂಗ್ಲಾ ಗಡಿಯಲ್ಲಿ 40 ಹೊಸ Intelligence Bureau (IB) ಕಚೇರಿಗಳು.!
ಭಾರತ ತನ್ನ ಬಾಂಗ್ಲಾ ಹಾಗೂ ಈಶಾನ್ಯ ಗಡಿ ಭದ್ರತಾ ಕಾರ್ಯತಂತ್ರವನ್ನು ಬದಲಿಸುತ್ತಿದೆ. ಇತ್ತೀಚೆಗೆ ಗೃಹ ಸಚಿವ ಅಮಿತ್ ಶಾ ಅವರು Smart Fencing ವ್ಯವಸ್ಥೆಯ ಬಗ್ಗೆ ಪ್ರಸ್ತಾಪಿಸಿದ್ದು, ಸಿಲಿಗುರಿ ಕಾರಿಡಾರ್ ಬಳಿ ಭದ್ರತೆ ಬಲಪಡಿಸಲು BSF ಹೊಸ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಬರೀ ಬೇಲಿಯಿಂದ ಸಾಕಾಗದು ಎಂದು ಅರಿತ ಕೇಂದ್ರ ಗೃಹ ಇಲಾಖೆ, ಈ ಹಿಂದೆ ಪಾಕಿಸ್ತಾನ ಗಡಿಯಲ್ಲಿ ವಿಸ್ತರಿಸಿದಂತೆಯೇ ಬಾಂಗ್ಲಾ ಗಡಿಗೂ Intelligence Bureau (IB) ಜಾಲವನ್ನು ವಿಸ್ತರಿಸಲು ಮುಂದಾಗಿದೆ.
ಗಡಿ ಬೇಹುಗಾರಿಕೆ ಬಲಪಡಿಸುವ ನಿಟ್ಟಿನಲ್ಲಿ ಸುಮಾರು 40 ಹೊಸ ಗುಪ್ತಚರ ಕಚೇರಿಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ ಸುಮಾರು 50 ಎಕರೆ ಭೂಮಿ ಒದಗಿಸುವಂತೆ ಪಶ್ಚಿಮ ಬಂಗಾಳ ಸರ್ಕಾರದ ಮುಂದೆ ಬೇಡಿಕೆ ಸಲ್ಲಿಸಲಾಗಿದೆ.
Also Read:ಸ್ಪೇನ್‌ನಲ್ಲಿ ಅಕ್ರಮ ವಲಸಿಗರ ಸಮಸ್ಯೆ: Illegal Immigration in Spain.!
ವರದಿಗಳ ಪ್ರಕಾರ, ಭಾರತ-ಬಾಂಗ್ಲಾ ಗಡಿ ಈಗ ಕೇವಲ ಅಕ್ರಮ ವಲಸೆಯ ಸಮಸ್ಯೆಯಷ್ಟೇ ಅಲ್ಲ; ಮೂರು ದೇಶಗಳ ಗುಪ್ತಚರ ಚಟುವಟಿಕೆ ಹಾಗೂ ಉಗ್ರ ಸಂಘಟನೆಗಳ ಜಾಲಕ್ಕೆ ವೇದಿಕೆಯಾಗುತ್ತಿದೆ ಎನ್ನಲಾಗುತ್ತಿದೆ. ಶೇಖ್ ಹಸೀನಾ ಪದಚ್ಯುತಿಯ ಬಳಿಕ ಮುಹಮ್ಮದ್ ಯೂನಸ್ ಆಡಳಿತದ ಅವಧಿಯಲ್ಲಿ ಬಾಂಗ್ಲಾದೇಶದ ಮೇಲೆ ಪಾಕಿಸ್ತಾನದ ಪ್ರಭಾವ ಹೆಚ್ಚಾಯಿತು ಎಂದು ಹೇಳಲಾಗುತ್ತಿದ್ದು, ಢಾಕಾದಲ್ಲಿನ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ISI (Inter-Services Intelligence) ಅಧಿಕಾರಿಗಳ ನೇಮಕಕ್ಕೆ ಅಧಿಕೃತ ಅನುಮತಿ ನೀಡಲಾಗಿದೆ ಎಂದು ವರದಿಯಾಗಿದೆ.
ಒಟ್ಟಾರೆ, ಚೀನಾ, ಅಮೆರಿಕಾ ಹಾಗೂ ಪಾಕಿಸ್ತಾನಗಳ ನಡುವೆ ಬಾಂಗ್ಲಾದೇಶ ಸಮತೋಲನದ ರಾಜತಾಂತ್ರಿಕ ಆಟವಾಡುತ್ತಿರುವ ಈ ಸಂದರ್ಭದಲ್ಲಿ, ಭಾರತ ತನ್ನ Eastern Border Security ಬಲಪಡಿಸಲು ಮುಂದಾಗಿದೆ. ಪಶ್ಚಿಮ ಬಂಗಾಳ, ಅಸ್ಸಾಂ, ಮೇಘಾಲಯ, ತ್ರಿಪುರಾ ಹಾಗೂ ಮಿಜೋರಾಂ ರಾಜ್ಯಗಳಲ್ಲಿ ಹೊಸ IB ಕಚೇರಿಗಳ ಸ್ಥಾಪನೆ, ಅಗತ್ಯ ಬಿದ್ದರೆ ಬಾಂಗ್ಲಾದೇಶದೊಳಗೆ Counter-Operations ಆಯೋಜಿಸುವ ಸಾಮರ್ಥ್ಯ ವೃದ್ಧಿಗೂ ನೆರವಾಗಲಿದೆ.
M S Raghavendra
Written By

M S Raghavendra

Cheif Editor

Over 30 Years of Experience in Media. Expertise in Youtube Content Creation, Choosing niche ,Digital Marketing.

Comments

No comments yet.