ಸ್ಪೇನ್ ಇತ್ತೀಚೆಗೆ FIFA World Cup ಫುಟ್‌ಬಾಲ್ ಕಪ್ ಗೆದ್ದು ಸುದ್ದಿಯಾಗಿತ್ತು. ಜಾತ್ಯತೀತತೆಯನ್ನು (secularism) ತನ್ನ ಮೂಲಮಂತ್ರವಾಗಿಸಿಕೊಂಡಿರುವ ಈ ದೇಶ, ಇಸ್ರೇಲ್ ಜೊತೆಗಿನ ಸಂಬಂಧದಲ್ಲಿ ಸೌಹಾರ್ದಯುತವಾಗಿಲ್ಲ ಎಂಬ ಅಭಿಪ್ರಾಯಗಳಿವೆ. ಮೊದಲ ಮತ್ತು ಎರಡನೇ ಮಹಾಯುದ್ಧಗಳ ಸಂದರ್ಭದಲ್ಲಿ ಸ್ಪೇನ್ ತಟಸ್ಥ ರಾಷ್ಟ್ರವಾಗಿ (neutral state) ಉಳಿದಿತ್ತು, ಆದರೂ ಜರ್ಮನಿಯ ಬಗ್ಗೆ ಸ್ವಲ್ಪಮಟ್ಟಿಗೆ ಒಲವು ಹೊಂದಿತ್ತು ಎನ್ನಲಾಗುತ್ತದೆ. ಹೀಗೆ ಸ್ಪೇನ್‌ನ ನಿಲುವುಗಳು ಆಗಾಗ್ಗೆ ಜಗತ್ತಿಗೆ ವಿಚಿತ್ರವಾಗಿ ಕಾಣುತ್ತವೆ, ಮತ್ತು ಈಗ ಅಂತಹುದೇ ಒಂದು ಬೆಳವಣಿಗೆ ಸುದ್ದಿಯಾಗಿದೆ.
ಇತ್ತೀಚೆಗೆ ಕೇವಲ ಒಂದು ಗಂಟೆಯ ಅವಧಿಯಲ್ಲಿ ಸುಮಾರು 3,000 ಮಂದಿ ಅಕ್ರಮ ವಲಸಿಗರು ಮೊರಾಕ್ಕೊದಿಂದ ಸಮುದ್ರ ಮಾರ್ಗವಾಗಿ ಸ್ಪೇನ್‌ಗೆ ಪ್ರವೇಶಿಸಿದ್ದಾರೆ. ಆಫ್ರಿಕಾ ಮತ್ತು ಯುರೋಪ್ ಖಂಡಗಳ ನಡುವೆ ಕೇವಲ 14.2 ಕಿ.ಮೀ. ಅಂತರವಿರುವ ಜಿಬ್ರಾಲ್ಟರ್ ಜಲಸಂಧಿ (Gibraltar Strait) ಮೆಡಿಟರೇನಿಯನ್ ಸಮುದ್ರ ಮತ್ತು ಅಟ್ಲಾಂಟಿಕ್ ಸಾಗರವನ್ನು ಬೆಸೆಯುತ್ತದೆ. ಮೊರಾಕ್ಕೊ, ಸ್ಪೇನ್ ಮತ್ತು ಬ್ರಿಟಿಷ್ ಓವರ್‌ಸೀಸ್ ಟೆರಿಟರಿಯ ನಡುವೆ ಹರಡಿಕೊಂಡಿರುವ ಈ ಜಲಸಂಧಿಯ ಮೂಲಕ ಪ್ರತಿ ವರ್ಷ ನೂರಾರು ಆಫ್ರಿಕನ್ ವಲಸಿಗರು ಅಕ್ರಮವಾಗಿ ಸ್ಪೇನ್ ತಲುಪುತ್ತಿದ್ದಾರೆ.
ಕೈಗಾರಿಕೆ ಮತ್ತು ಕೃಷಿ ಕ್ಷೇತ್ರಗಳಲ್ಲಿ ಕಾರ್ಮಿಕರ ಕೊರತೆ ಎದುರಿಸುತ್ತಿರುವ ಸ್ಪೇನ್‌ಗೆ ಆಫ್ರಿಕಾ ಮೂಲದ ವಲಸೆ ಕಾರ್ಮಿಕರ ಅಗತ್ಯವಿದೆ. ಹೀಗಾಗಿ ಇಲ್ಲಿಯವರೆಗೆ ಸ್ಪೇನ್ ಅಕ್ರಮ ವಲಸೆಯ ಬಗ್ಗೆ ಹೆಚ್ಚು ಕಠಿಣ ನಿಲುವು ತಳೆದಿರಲಿಲ್ಲ. ಆದರೆ ಒಮ್ಮೆಲೇ ಸಾವಿರಾರು ಮಂದಿ ನುಗ್ಗಿ ಬಂದಾಗ ಪರಿಸ್ಥಿತಿ ಬಿಗಡಾಯಿಸುತ್ತದೆ. ಹೀಗಾಗಿ ಅಕ್ರಮ ವಲಸೆ ಹೆಚ್ಚಾಗಿ ನಡೆಯುವ ಗಡಿ ಪ್ರದೇಶಗಳಲ್ಲಿ ಸ್ಪೇನ್ ಈಗ ಭದ್ರತಾ ಸಿಬ್ಬಂದಿ ಜೊತೆಗೆ ಸೇನೆಯನ್ನೂ ನಿಯೋಜಿಸಿದೆ.
ಜುಲೈ 30ರಂದು ನಡೆದ ಸಾಮೂಹಿಕ ವಲಸೆಯಲ್ಲಿ ಸಾವಿರಾರು ಮಂದಿ ಈಜಿಕೊಂಡು ಹಾಗೂ ರಬ್ಬರ್ ಬೋಟುಗಳ ಮೂಲಕ ತಲುಪಿದ್ದು ಜಿಬ್ರಾಲ್ಟರ್ ಜಲಸಂಧಿಯಲ್ಲ, ಬದಲಿಗೆ ಆಫ್ರಿಕಾ ಖಂಡದಲ್ಲೇ ಇರುವ ಸ್ಪೇನ್‌ನ ಸ್ವಾಯತ್ತ ನಗರ ಸೆವುಟಾ (Ceuta)ಗೆ ಎಂಬುದು ಗಮನಾರ್ಹ. ಮೊರಾಕ್ಕೊ, ಮೆಡಿಟರೇನಿಯನ್ ಸಮುದ್ರ ಮತ್ತು ಅಟ್ಲಾಂಟಿಕ್ ಸಾಗರವನ್ನು ಗಡಿಯಾಗಿ ಹೊಂದಿರುವ ಸೆವುಟಾ, ಯುರೋಪಿಯನ್ ಎಕನಾಮಿಕ್ ಏರಿಯಾದ ವಿಶೇಷ ಪ್ರಾದೇಶಿಕ ಸದಸ್ಯ ನಗರವಾಗಿದೆ.
Also Read:ಬಾಂಗ್ಲಾದೇಶ-ರಷ್ಯಾ ವ್ಯಾಪಾರಕ್ಕೆ ಭಾರತದ ರೂಪಾಯಿ.? Putin's Rupee Push.!
ಒಟ್ಟಿನಲ್ಲಿ, ಅಕ್ರಮ ವಲಸೆಯ ವಿಷಯದಲ್ಲಿ Spain ಇಂದು ಎರಡು ದೋಣಿಯ ಮೇಲೆ ಕಾಲಿಟ್ಟ ಸ್ಥಿತಿಯಲ್ಲಿದೆ. ಮಾನವೀಯತೆ ಮತ್ತು ಕಾನೂನಿನ ನಡುವೆ ಸಮತೋಲನ ಸಾಧಿಸುವ ಸವಾಲು ಸ್ಪೇನ್ ಮುಂದಿದೆ.
ಸ್ಪೇನ್‌ನಲ್ಲಿ ಅಕ್ರಮ ವಲಸಿಗರ ಸಮಸ್ಯೆ: Illegal Immigration in Spain.!
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.