Itihasa

ಇಡೀ ಭಾರತವನ್ನೇ ಗೆದ್ದಿದ್ದ ಕರುನಾಡಿನ ಆ ಸಾರ್ವಭೌಮ: A Kannada emperor who conquered the entire India.!

ಇಡೀ ಭಾರತವನ್ನೇ ಗೆದ್ದಿದ್ದ ಕರುನಾಡಿನ ಆ ಸಾರ್ವಭೌಮ: A Kannada emperor who conquered the entire India.!
ಇಡೀ ಕನ್ನಡ ನಾಡಿನ ಹೆಮ್ಮೆಯ ಸಾಮ್ರಾಟ. ಅವನು ಯುದ್ಧಕ್ಕೆ ಹೊರಟು ನಿಂತ್ರೆ ವೀರಾಧಿ ವೀರರೆಲ್ಲಾ ಅವನ ಮುಂದೆ ಮಂಡಿ ಊರ್ತಿದ್ರು. ಅವನ ಪಟ್ಟದ ಕುದುರೆ ಹಿಮಾಲಯದ ತಪ್ಪಲಲ್ಲಿ ಗಂಗಾ ನದಿಯ ನೀರನ್ನು ಕುಡಿದಿತ್ತಂತೆ. ಅವನ ಯುದ್ಧ ಆನೆಗಳು ತಮ್ಮ ಮೈಗಂಟಿಕೊಂಡಿದ್ದ ಶತ್ರುಗಳ ನೆತ್ತರನ್ನು ಗಂಗೆಯ ಶುದ್ಧಾಧಿಶುದ್ಧ ನೀರಲ್ಲಿ ತೊಳೆದುಕೊಂಡಿದ್ವಂತೆ. ಕಾವೇರಿಯಿಂದ ಹಿಮಾಲಯದವರೆಗಿನ ಭೂಪ್ರದೇಶವನ್ನು ತನ್ನ ಅಂಕೆಯಲ್ಲಿಟ್ಟುಕೊಂಡಿದ್ದ ಆ ಸಾಮ್ರಾಟ ತನ್ನ ಸಾಮ್ರಾಜ್ಯದ ಗಡಿಯನ್ನ ನೇಪಾಳದವರೆಗೂ ವಿಸ್ತರಿಸಿಬಿಟ್ಟಿದ್ದ. ಅಂತಹ ಕನ್ನಡದ ಕಟ್ಟಾಳು ಯಾರು? ಅವನ ಆಡಳಿತ ಯಾವಾಗ ನಡೆದಿತ್ತು? ನಿಜಕ್ಕೂ ಅವನು ತನ್ನ ಹಿಮಾಲಯದವರೆಗಿನ ದಿಗ್ವಿಜಯವನ್ನ ಯಶಸ್ವಿಯಾಗಿ ಮುಗಿಸಿದ್ದು ಹೇಗೆ ಅನ್ನೋ ಕುತೂಹಲಕರ ವಿಷಯಗಳನ್ನು ತಿಳ್ಕೊಳ್ಳೋಣ. ಅವನು ಯುದ್ಧಕ್ಕೆ ಹೊರಟ್ರೆ ಅರಿಕೇಸರಿಗಳೆಲ್ಲಾ ತಲೆಬಗ್ಗಿಸುತ್ತಿದ್ದವಂತೆ. ತನ್ನ ಅಣ್ಣನನ್ನ ಬದಿಗೆ ಸರಿಸಿ ಸಿಂಹಾಸನವನ್ನೇರಿದ್ದ ಆ ಮಹಾವೀರ ಹೋರಾಟದ ಮೂಲಕವೇ ಸಾಮ್ರಾಟನಾಗಿ ಗುರುತಿಸಿಕೊಂಡಿದ್ದ. ಇಪ್ಪತ್ತೊಂದು ವರ್ಷಗಳ ಕಾಲ ಆಡಳಿತ ನಡೆಸಿದ ಆ ಸಾಮ್ರಾಟ ಕನ್ನಡ ನಾಡಿನ ಕೀರ್ತಿಯನ್ನ ಹಿಮಾಲಯದವರೆಗೂ ಪಸರಿಸಿ ಬಂದಿದ್ದ. ಕನ್ಯಾಕುಮಾರಿಯಿಂದ ಕನೌಜಿನವರೆಗೆ, ಬನಾರಸ್‌ನಿಂದ ಭರೋಚ್‌ವರೆಗಿನ ಭೂಮಿಯ ಮೇಲೆ ಆಧಿಪತ್ಯವನ್ನು ಸ್ಥಾಪಿಸಿದ್ದ ಅವನು ಜಗತ್ತುಂಗ, ತ್ರಿಭುವನ ಧವಳ, ಕೀರ್ತಿನಾರಾಯಣ ಅನ್ನೋ ಬಿರುದುಗಳನ್ನು ಪಡ್ಕೊಂಡಿದ್ದ. ಅವನು ಬೇರಾರೂ ಅಲ್ಲ, ರಾಷ್ಟ್ರಕೂಟ ಸಾಮ್ರಾಟ ಅಮೋಘವರ್ಷ ನೃಪತುಂಗನ ತಂದೆ. ಅವನ ಹೆಸರು ಸಾಮ್ರಾಟ ಮೂರನೇ ಗೋವಿಂದ. ಅವನ ಸಾಧನೆಯನ್ನ ಸಂಪೂರ್ಣವಾಗಿ ತಿಳಿಯಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.
Also Read: ಪುಲಕೇಶಿ ಎಂಬ ಕನ್ನಡ ವಿಕ್ರಮನ ಕತೆ: Pulakeshi - The pride of Karnataka..!
Raghavendra N
Written By

Raghavendra N

Content Writer

17 years of experience in Media and Digital Media.Expertise in Scripting, Video Production,Documentary Making and ad Films

Comments

No comments yet.