1962ರ ಇಂಡೋ-ಚೀನಾ ಯುದ್ಧಕ್ಕೂ ಮುನ್ನ "ಹಿಂದಿ ಚೀನಿ ಭಾಯಿ ಭಾಯಿ" ಎಂಬ ಘೋಷಣೆ ಮೊಳಗುತ್ತಿತ್ತು. ಆದರೆ ಟಿಬೆಟ್ ಆಕ್ರಮಣ, ದಲೈ ಲಾಮಾ (Dalai Lama) ಅವರಿಗೆ ಭಾರತ ನೀಡಿದ ಆಶ್ರಯ ಹಾಗೂ ಮಾವೋ ಝೆಡಾಂಗ್ ಅವರ ಸಿಟ್ಟು ಕೊನೆಗೆ 1962ರ ಯುದ್ಧದಲ್ಲಿ ಸ್ಫೋಟಗೊಂಡಿತ್ತು. ಇಂದು ಅದೇ ಇತಿಹಾಸ ಮರುಕಳಿಸುತ್ತಿದೆಯೇ ಎಂಬ ಪ್ರಶ್ನೆ ಮತ್ತೆ ಎದ್ದಿದೆ.
ಒಂದೆಡೆ India-China relations ಸುಧಾರಣೆಯ ಸೂಚನೆಗಳು ಕಾಣಿಸುತ್ತಿವೆ. ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಚೀನಾ ಪ್ರವಾಸದಲ್ಲಿದ್ದು, ಕಮ್ಯುನಿಸ್ಟ್ ಪಾರ್ಟಿಯ ಹಿರಿಯ ಅಧಿಕಾರಿಯನ್ನು ಭೇಟಿಯಾಗಿದ್ದಾರೆ. Kailash Mansarovar Yatra ಪುನರಾರಂಭ, ವೀಸಾ ನೀತಿ ಸಡಿಲಿಕೆ ಹಾಗೂ ವಿಮಾನ ಸಂಚಾರ ಪುನಃಸ್ಥಾಪನೆ ಕುರಿತು ಮಾತುಕತೆ ನಡೆಯುತ್ತಿದೆ. ಇದೇ ಆಗಸ್ಟ್ 1ರಿಂದ ಸಿಕ್ಕಿಂನ ಐತಿಹಾಸಿಕ ನಥುಲಾ ಪಾಸ್ (Nathu La Pass) ಮೂಲಕ ಆರು ವರ್ಷಗಳ ಬಳಿಕ ಗಡಿ ವ್ಯಾಪಾರ ಮತ್ತೆ ಆರಂಭವಾಗಲಿದೆ. ಪುರಾತನ ಸಿಲ್ಕ್ ರೂಟ್‌ನ ಭಾಗವಾಗಿದ್ದ ಈ ಮಾರ್ಗ 1962ರ ಬಳಿಕ ಸ್ಥಗಿತಗೊಂಡಿತ್ತು, 2006ರಲ್ಲಿ ಒಮ್ಮೆ ಪುನರಾರಂಭವಾಗಿ, ಸಂಬಂಧ ಹದಗೆಟ್ಟ ನಂತರ ಮತ್ತೆ ಮುಚ್ಚಲ್ಪಟ್ಟಿತ್ತು.
ಇದೇ ಹೊತ್ತಿಗೆ ಮತ್ತೊಂದೆಡೆ, satellite images ಪ್ರಕಾರ ಚೀನಾ Line of Actual Control (LAC) ಉದ್ದಕ್ಕೂ ಸೇನಾ ಜಮಾವಣೆ ಹೆಚ್ಚಿಸಿದೆ ಎಂಬ ವರದಿಗಳಿವೆ. ಹೋಟಾನ್ ಹಾಗೂ ಲಾಸಾ ಬಳಿಯ ಡಮ್‌ಕ್ಸಂಗ್ ವಾಯುನೆಲೆಗಳಲ್ಲಿ ಚೀನಾದ ಐದನೇ ತಲೆಮಾರಿನ ಸ್ಟೆಲ್ತ್ ಯುದ್ಧ ವಿಮಾನ J-20 (ಚೀನಿ ಭಾಷೆಯಲ್ಲಿ "Mighty Dragon" ಅಥವಾ ವಿಲಾಂಗ್) ನಿಲುಗಡೆಯಾಗಿರುವುದು ಕಂಡುಬಂದಿದೆ. ಹೋಟಾನ್ ವಾಯುನೆಲೆ ಭಾರತದ ದೌಲತ್ ಬೇಗ್ ಓಲ್ಡಿಗೆ ಹತ್ತಿರವಿದ್ದರೆ, ಡಮ್‌ಕ್ಸಂಗ್ ಅರುಣಾಚಲ ಪ್ರದೇಶದ ತವಾಂಗ್‌ನಿಂದ ಕೇವಲ 344 ಕಿ.ಮೀ. ದೂರದಲ್ಲಿದೆ.
2011ರಲ್ಲಿ ಮೊದಲ ಹಾರಾಟ ನಡೆಸಿದ J-20, 2017ರಲ್ಲಿ ಚೀನಾ ವಾಯುಪಡೆಗೆ ಸೇರ್ಪಡೆಯಾಯಿತು. ಗರಿಷ್ಠ ವೇಗ ಮ್ಯಾಕ್ 1.7, ಕಾರ್ಯಾಚರಣಾ ವ್ಯಾಪ್ತಿ ಸುಮಾರು 5,500 ಕಿ.ಮೀ. ಇದ್ದು, 11 ಟನ್‌ವರೆಗೆ ಶಸ್ತ್ರಾಸ್ತ್ರ ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಅಮೆರಿಕದ F-22ರ ಬಳಿಕ ಜಗತ್ತಿನ stealth fighter jet ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಈ ವಿಮಾನವನ್ನು ಚೀನಾ 300ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಸಿದ್ಧಪಡಿಸಿಟ್ಟುಕೊಂಡಿದೆ ಎನ್ನಲಾಗಿದೆ.
Also Read: ಭಾರತ-ಬ್ರಿಟನ್ ಫ್ರೀ ಟ್ರೇಡ್ ಅಗ್ರಿಮೆಂಟ್: ಏನಿದು ವಿವಾದ? TATA Steel UK.!
ವಿಶ್ಲೇಷಕರ ಪ್ರಕಾರ, ಚೀನಾದ ಮೊದಲ ಆದ್ಯತೆ ಸದ್ಯಕ್ಕೆ Taiwan ಹಾಗೂ South China Sea ಆಗಿದ್ದು, ಭಾರತದ ಜೊತೆ ನೇರ ಯುದ್ಧಕ್ಕೆ ಇಳಿಯುವ ಸಾಧ್ಯತೆ ಕಡಿಮೆ. ಏಕೆಂದರೆ ಅಂತಹ ಯುದ್ಧ ಎರಡೂ ದೇಶಗಳ ಆರ್ಥಿಕತೆಗೆ ಭಾರೀ ಹಿನ್ನಡೆ ತರಬಹುದು. ಬದಲಿಗೆ, 2020ರ Galwan clash ಸೋಲಿನ ಮುಜುಗರ ಮರೆಮಾಚಲು ಹಾಗೂ ಭಾರತವನ್ನು ಒತ್ತಡದಲ್ಲಿಡಲು ಇದೊಂದು psychological pressure tactic ಎಂದು ಹೇಳಲಾಗುತ್ತಿದೆ. ಭಾರತ ತನ್ನ defense budget ಹೆಚ್ಚಿಸುತ್ತಾ, ಆರ್ಥಿಕ ಬೆಳವಣಿಗೆ ಹಾಗೂ Belt and Road Initiativeಗೆ ಪ್ರತಿರೋಧ ಒಡ್ಡುವುದನ್ನು ದುರ್ಬಲಗೊಳಿಸುವ ಉದ್ದೇಶವೂ ಇದರ ಹಿಂದಿರಬಹುದು ಎಂಬ ವಾದವಿದೆ.
ಭಾರತ ಆತಂಕಪಡುವ ಬದಲು, ದೇಶೀಯ ಶಸ್ತ್ರಾಸ್ತ್ರ ಉತ್ಪಾದನೆಗೆ (Atmanirbhar Bharat defense manufacturing) ಒತ್ತು ನೀಡಿ, ಚೀನಾ ಮೇಲಿನ ಆರ್ಥಿಕ ಅವಲಂಬನೆ ತಗ್ಗಿಸುವತ್ತ ಗಮನ ಹರಿಸಬೇಕು ಎಂಬುದು ತಜ್ಞರ ಸಲಹೆ.
China–India Border Tension: ಗಡಿಯಲ್ಲಿ ಆತಂಕ, ರಾಜತಾಂತ್ರಿಕತೆಯಲ್ಲಿ ಸ್ನೇಹ.?
Written By
M S Raghavendra
Cheif EditorOver 30 Years of Experience in Media. Expertise in Youtube Content Creation, Choosing niche ,Digital Marketing.
Comments
No comments yet.