Nature & Wildlife

ಆ ಭಯಾನಕ ಕಾಡಲ್ಲಿ ಅವು ಉಳಿದಿದ್ದು ಹೇಗೆ: Project Gorilla Explained.!

ಆ ಭಯಾನಕ ಕಾಡಲ್ಲಿ ಅವು ಉಳಿದಿದ್ದು ಹೇಗೆ: Project Gorilla Explained.!
ಅದು 1973ರ ಸಮಯ ಭಾರತದಲ್ಲಿ ಒಂದು ಅದ್ಭುತ ಯೋಜನೆಯನ್ನ ಕೇಂದ್ರ ಸರ್ಕಾರ ಕೈಗೆತ್ತುಕೊಂಡಿತ್ತು. ಅವತ್ತು ಜಗತ್ತಿನಾದ್ಯಂತ ನಶಿಸಿ ಹೋಗ್ತಾ ಇದ್ದ ಹುಲಿಗಳನ್ನ ಉಳಿಸಿಕೊಳ್ಳುವ ನಿಟ್ಟಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಪ್ರಾಜೆಕ್ಟ್ ಟೈಗರ್ ಅನ್ನ ಶುರು ಮಾಡಿದರು. 19ನೇ ಶತಮಾನದಲ್ಲಿ 40 ಸಾವಿರದಷ್ಟಿದ್ದ ಹುಲಿಗಳ ಸಂಖ್ಯೆ, 1970ರ ಹೊತ್ತಿಗೆ ಕೇವಲ 1800ರ ಹತ್ತಿರಕ್ಕೆ ಬಂದು ನಿಂತಿತ್ತು. ಅವ್ಯಾಹತವಾದ ಬೇಟೆ ಹುಲಿಗಳ ಚರ್ಮ, ಮೂಳೆ, ಉಗುರುಗಳಿಗಿದ್ದ ಕಳ್ಳ ಮಾರುಕಟ್ಟೆಗಳು, ಹಣಕ್ಕಾಗಿ ಹುಲಿಯನ್ನ ಕೊಲ್ತಾ ಇದ್ದ ಗ್ಯಾಂಗುಗಳು, ಇದೆಲ್ಲದರ ಕಾರಣ ಹುಲಿಗಳ ಸಂಖ್ಯೆ ಕ್ಷೀಣಿಸಿತ್ತು. ಇನ್ನು ಹುಲಿಗಳ ರಕ್ಷಣೆಗೆ ಕ್ರಮ ಕೈಗೊಳ್ಳದೆ ಇದ್ದರೆ ಮಿಕ್ಕ ಹುಲಿಗಳು ಕೂಡ ನಾಶ ಆಗುವ ಭೀತಿ ಎದುರಾಗ್ತಾ ಇತ್ತು. ಹೀಗಾಗಿ, ಮೊದಲಿಗೆ ಪ್ರಾಜೆಕ್ಟ್ ಟೈಗರ್ ಅಡಿಯಲ್ಲಿ 9 ಟೈಗರ್ ರಿಸರ್ವ್ಗಳನ್ನ ಶುರು ಮಾಡಲಾಯಿತು. ಜಿಮ್ ಕಾರ್ಬೆಟ್ ಉದ್ಯಾನವನದಲ್ಲಿ ಈ ಯೋಜನೆಗೆ ಚಾಲನೆ ಸಿಕ್ತು. ಅವತ್ತು ಕೇಂದ್ರ ಸರ್ಕಾರ ಘೋಷಿಸಿದ್ದ ಆ 9 ಟೈಗರ್ ರಿಸರ್ವ್ಗಳಲ್ಲಿ ಕರ್ನಾಟಕದ ಬಂಡಿಪುರ ಕೂಡ ಒಂದು. ಹೀಗೆ 1973 ರಲ್ಲಿ ಒಂಬತ್ತು ಟೈಗರ್ ರಿಸರ್ವ್ಗಳಿಂದ ಶುರುವಾದ ಹುಲಿ ಸಂರಕ್ಷಣಾ ಕಾರ್ಯ, ಈಗ 58 ಹುಲಿ ಅಭಯಾರಣ್ಯಗಳಿಗೆ ಬಂದು ನಿಂತಿದೆ. ಇನ್ನಷ್ಟು ಕಾಡುಗಳು ಹುಲಿಕಾಡು ಅನ್ನಿಸಿಕೊಳ್ಳುದಕ್ಕೆ ಕಾಯ್ತಾ ಇವೆ. ಸದ್ಯಕ್ಕೆ ದೇಶದಲ್ಲಿ ಹುಲಿಗಳ ಸಂಖ್ಯೆ 3600ನ್ನ ದಾಟಿದೆ ಅಂತ ಹೇಳಲಾಗ್ತಾ ಇದೆ. ಇದು ಜಗತ್ತಲ್ಲಿನ ಒಟ್ಟು ಹುಲಿಗಳ ಸಂಖ್ಯೆಯಲ್ಲಿ ಭಾರತಕ್ಕೆ ಶೇಕಡ 70 ರಷ್ಟು ಪಾಲು ಸಿಗುವ ಹಾಗೆ ಮಾಡ್ತಾ ಇದೆ. ಅರೆ ಇಲ್ಲಿ ಯಾಕೆ ಹುಲಿಗಳ ಬಗ್ಗೆ ಇವಾಗ ಹೇಳ್ತಾ ಇದ್ದೀವಿ ಅಂತ ನೀವು ಅಂದುಕೊತಾ ಇದ್ದೀರನೋ. ಹೇಗೆ ನಮ್ಮಲ್ಲಿ 1970ರ ದಶಕದಲ್ಲಿ ಹುಲಿ ಸಂರಕ್ಷಣಾ ಕಾರ್ಯ ಶುರುವಾಯಿತೋ ಅದೇ ತರ 1980ರ ದಶಕದಲ್ಲಿ ಭಾರತದಿಂದ ಸಹಸ್ರಾರು ಕಿಲೋಮೀಟರ್ ದೂರದಲ್ಲಿರುವ ಆಫ್ರಿಕಾದಲ್ಲಿ ಕೂಡ ಇಂಥದ್ದೇ ಒಂದು ಪ್ರಾಜೆಕ್ಟ್ ಶುರುವಾಗಿತ್ತು. ಅಲ್ಲವತ್ತು ನಾಲ್ಕು ದೇಶಗಳು ಸೇರಿ ಇಂತ ಪ್ರಾಜೆಕ್ಟ್ಗೆ ಚಾಲನೆಯನ್ನು ಕೊಟ್ಟವು ಅವತ್ತವರು ಕಾಪಾಡುವುದಕ್ಕೆ ಮುಂದಾಗಿದ್ದು ಮೌಂಟೈನ್ ಗೊರಿಲ್ಲಾಗಳನ್ನ. ಹಾಗಾದ್ರೆ ಏನಿದು ಪ್ರಾಜೆಕ್ಟ್ ಗೊರಿಲ್ಲ.? ಆಫ್ರಿಕಾದ ದೇಶಗಳು ಯಾಕೆ ಈ ಪ್ರಾಜೆಕ್ಟ್ನ್ ಕೈಗೆತ್ತುಕೊಂಡ್ವು.? ಅದಾದ ನಾಲ್ಕುವರೆ ದಶಕಗಳ ನಂತರ ಈ ಪ್ರಾಜೆಕ್ಟ್ನ ಪರಿಸ್ಥಿತಿ ಏನು ಅನ್ನೋದರ ಬಗ್ಗೆ ಒಂದಷ್ಟು ಮಾಹಿತಿನಾ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Raghavendra N
Written By

Raghavendra N

Content Writer

17 years of experience in Media and Digital Media.Expertise in Scripting, Video Production,Documentary Making and ad Films

Comments

No comments yet.