ಭಾರತ ತನ್ನ ಸುತ್ತ ಮುತ್ತಲಿನ ದೇಶಗಳ ಜೊತೆಗಿನ ಗಡಿಗಳನ್ನ ಭದ್ರ ಪಡಿಸಿಕೊಳ್ಳೋ ನಿಟ್ಟಲ್ಲಿ ದೊಡ್ಡ ಹೆಜ್ಜೆಗಳನ್ನ ಇಡ್ತಾ ಇದೆ. ಗಡಿಗಳನ್ನ ಭದ್ರ ಪಡಿಸಬೇಕು
ಅಂದ್ರೆ ಫೆನ್ಸಿಂಗ್ ಆಗಬೇಕು. ಬಾಂಗ್ಲಾ ಗಡಿಯಲ್ಲಿ ಈಗಾಗಲೇ ಬೇಲಿ ನಿರ್ಮಾಣದ ಕಾರ್ಯ ನಡೀತಾ ಇದೆ. ಹಾಗೇ ಮ್ಯಾನ್ಮಾರ್ ಗಡಿಯನ್ನ ಕೂಡಾ ಫೆನ್ಸ್ ಮಾಡೋ ಯೋಚನೆಯಲ್ಲಿರೋ ಭಾರತ ಅದಕ್ಕಾಗಿ ಅಲ್ಲಿ ಗಡಿ ರೇಖೆಯನ್ನ ನಿಖರವಾಗಿ ಗುರುತಿಸೋ ಕೆಲಸ ಶುರು ಮಾಡ್ತಾ ಇದೆ. ಇದರ ಭಾಗವಾಗಿ ಈಗ ಭಾರತ ಮ್ಯಾನ್ಮಾರ್ ಜೊತೆ ಗಡಿ ಭೂಮಿಯ ಬದಲಾವಣೆಯ ಬಗ್ಗೆ ಮಾತುಕತೆಗಳನ್ನ ನಡೆಸ್ತಾ ಇದೆ ಅನ್ನೋ ಮಾಹಿತಿಗಳು ಹೊರ ಬೀಳ್ತಾ ಇದ್ದು, ಸ್ವಲ್ಪ ಭಾರತದ ನೆಲವನ್ನ ಮ್ಯಾನ್ಮಾರ್ ಗೆ ಬಿಟ್ಟು ಕೊಡೋದು ಅದರ ಬದಲಿಗೆ ಮ್ಯಾನ್ಮಾರ್ ನೆಲವನ್ನ ಭಾರತ ತಗೊಳೋದು ಅನ್ನೋ ಮಾತುಕತೆಗಳು ಅಧಿಕೃತವಾಗಿ ಶುರುವಾಗ್ತಾ ಇವೆ ಅನ್ನೋ ಸುದ್ದಿಗಳು ಬರ್ತಾ ಇವೆ. ಹಾಗೇ ಇದು ಪ್ರತಿ ಪಕ್ಷ ಹಾಗೂ ಆಡಳಿತ ಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಗಳಿಗೆ ಕಾರಣವಾಗೋ ಲಕ್ಷಣಗಳೂ ಕಾಣ್ತಾ ಇವೆ. ಹಾಗಾದ್ರೆ ಏನಿದು ಗಡಿ ಸ್ವಾಪಿಂಗ್..? ಮ್ಯಾನ್ಮಾರ್ ಜೊತೆ ಭಾರತದ ಗಡಿ ಒಪ್ಪಂದ ಏನು ವಿವಾದ ಏನು ಅಲ್ಲಿರೋ ಸಮಸ್ಯೆ ಏನು.. ಮತ್ತು ಬ್ರಿಟಿಷರು ಆ ಗಡಿಯಲ್ಲಿ ಕೂಡಾ ತಂದಿಟ್ಟು ಹೋದ ತಲೆ ನೋವುಗಳ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.
ಭಾರತ ಮ್ಯಾನ್ಮಾರ್ ಭೂ ವಿನಿಮಯ: India - Myanmar Land Swap.!
Written By
M S Raghavendra
Cheif EditorOver 30 Years of Experience in Media. Expertise in Youtube Content Creation, Choosing niche ,Digital Marketing.
Comments
No comments yet.