Bharata

ಭಾರತದಲ್ಲಿ ಮತ್ತೆ ಹೊಸ ನೋಟು? polymer currency ಬಗ್ಗೆ RBI ಸಿದ್ಧತೆ.!

ಭಾರತದಲ್ಲಿ ಮತ್ತೆ ಹೊಸ ನೋಟು? polymer currency ಬಗ್ಗೆ RBI ಸಿದ್ಧತೆ.!
ಭಾರತದಲ್ಲಿ ಮತ್ತೊಮ್ಮೆ ನೋಟು ಬದಲಾವಣೆಯಾಗುತ್ತದೆಯೇ ಎಂಬ ಚರ್ಚೆ ಸಂಸತ್ತಿನಲ್ಲಿ ಆರಂಭವಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಈಗಿರುವ ಕಾಟನ್ ಫೈಬರ್ ನೋಟುಗಳ ಬದಲು ಪಾಲಿಮರ್ ನೋಟುಗಳನ್ನು (Polymer Notes) ಮುದ್ರಿಸುವ ಪ್ರಸ್ತಾಪ ಮುಂದಿಟ್ಟ ನಂತರ ಈ ಅನುಮಾನಗಳು ಬಲವಾಗಿವೆ. ಪ್ಲಾಸ್ಟಿಕ್ ನೋಟುಗಳ ಇತಿಹಾಸ, ಭಾರತ ಈ ಹೆಜ್ಜೆ ಇಡಲು ಕಾರಣ ಮತ್ತು ಹಳೆಯ ನೋಟುಗಳ ಭವಿಷ್ಯದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
2016ರ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ₹500 ಮತ್ತು ₹1,000 ನೋಟುಗಳನ್ನು ಅಮಾನ್ಯಗೊಳಿಸಿ, ನೋಟು ಅಮಾನ್ಯೀಕರಣ (Demonetization) ಘೋಷಿಸಿದ್ದರು. ಕಪ್ಪುಹಣ ನಿಯಂತ್ರಣದ ಉದ್ದೇಶದಿಂದ ಜಾರಿಗೆ ತಂದ ಈ ಕ್ರಮ ನಿರೀಕ್ಷಿತ ಫಲಿತಾಂಶ ನೀಡಲಿಲ್ಲ ಎಂಬ ಅಭಿಪ್ರಾಯವಿದೆ.
ಪುರಾತನ ಭಾರತದಲ್ಲಿ ವಸ್ತು ವಿನಿಮಯ (Barter System) ಪದ್ಧತಿ ಇತ್ತು. ನಂತರ ಬೆಳ್ಳಿ-ತಾಮ್ರದ ನಾಣ್ಯಗಳು ಚಲಾವಣೆಗೆ ಬಂದವು. 16ನೇ ಶತಮಾನದಲ್ಲಿ ಶೇರ್ ಷಾ ಸೂರಿಯ ಬೆಳ್ಳಿ ರೂಪಿಯಾ (ಇಂದಿನ ರೂಪಾಯಿಯ ಮೂಲ) ಜಾರಿಗೆ ಬಂತು. 1770ರಲ್ಲಿ ಬ್ಯಾಂಕ್ ಆಫ್ ಹಿಂದೂಸ್ತಾನ್ ಪೇಪರ್ ಕರೆನ್ಸಿ ಪರಿಚಯಿಸಿತು ಮತ್ತು 1861ರ ಪೇಪರ್ ಕರೆನ್ಸಿ ಕಾಯ್ದೆಯ ಮೂಲಕ ನೋಟು ಮುದ್ರಣ ಸರ್ಕಾರದ ಜವಾಬ್ದಾರಿಯಾಯಿತು. 1935ರಲ್ಲಿ ಆರ್‌ಬಿಐ ಸ್ಥಾಪನೆಯಾದ ನಂತರ ನೋಟು ಮುದ್ರಣದ ಹೊಣೆ ಅದರದ್ದೇ ಆಗಿದೆ. ಇಂದು ಡಿಜಿಟಲ್ ಪೇಮೆಂಟ್ (Digital Payments) ಯುಗದಲ್ಲಿದ್ದರೂ ಕಪ್ಪುಹಣದ ಸಮಸ್ಯೆ ಮಾತ್ರ ಇನ್ನೂ ಬಗೆಹರಿದಿಲ್ಲ.
Also Read: ಸಂಸತ್ತಿನಲ್ಲಿ ಗದ್ದಲ, ಪರೀಕ್ಷಾ ಅಕ್ರಮ ಕಾಯ್ದೆಗೆ ಅಂಗೀಕಾರ: Monsoon Session 2026
ಸಂಸತ್ತಿನಲ್ಲಿ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು, ಆರ್‌ಬಿಐ ಈ ಬಾರಿ ಒಂದು ಬಿಲಿಯನ್ ₹10 ಮತ್ತು ಒಂದು ಬಿಲಿಯನ್ ₹20 ನೋಟುಗಳನ್ನು ಮುದ್ರಿಸಲಿದೆ ಎಂದು ತಿಳಿಸಿದ್ದಾರೆ. ಇವು ಎಂದಿನ ಕಾಟನ್ ಫೈಬರ್ ಬದಲು ಪಾಲಿಮರ್ ಶೀಟ್ಗಳ ಮೇಲೆ ಮುದ್ರಣಗೊಳ್ಳಲಿವೆ. ಆದರೆ ಉಳಿದೆಲ್ಲಾ ಮುಖಬೆಲೆಯ ನೋಟುಗಳು ಎಂದಿನಂತೆಯೇ ಚಲಾವಣೆಯಲ್ಲಿ ಮುಂದುವರಿಯಲಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪಾಲಿಮರ್ ನೋಟುಗಳು ಸಾಮಾನ್ಯ ನೋಟುಗಳಿಗಿಂತ ಸುಮಾರು ಆರು ಪಟ್ಟು ಹೆಚ್ಚು ಬಾಳಿಕೆ ಬರುತ್ತವೆ ಮತ್ತು ಸುಲಭವಾಗಿ ಹರಿಯುವುದಿಲ್ಲ. ಇದರಿಂದ ಪದೇ ಪದೇ ಮುದ್ರಣ ಮಾಡಬೇಕಾದ ಅಗತ್ಯ ಕಡಿಮೆಯಾಗಿ ಆರ್‌ಬಿಐಗೆ ಮುದ್ರಣ ವೆಚ್ಚ (Printing Cost) ಉಳಿತಾಯವಾಗುತ್ತದೆ.
ಪಾಲಿಮರ್ ನೋಟುಗಳ ಬಗ್ಗೆ ಪರಿಸರ ಸಂಬಂಧಿತ ಕಳವಳಗಳೂ ಇವೆ. ಸರ್ಕಾರವೇ ಪ್ಲಾಸ್ಟಿಕ್ ಬಳಕೆ ನಿಷೇಧದ ಬಗ್ಗೆ ಮಾತನಾಡುತ್ತಿರುವಾಗ ಪ್ಲಾಸ್ಟಿಕ್ ನೋಟು ಮುದ್ರಣ ವಿರೋಧಾಭಾಸ ಎಂಬ ವಾದವಿದೆ. ಜೊತೆಗೆ, ಬಾಳಿಕೆ ಹೆಚ್ಚಿರುವ ಕಾರಣ ಇವುಗಳನ್ನು ಸುರಕ್ಷಿತವಾಗಿ ದೀರ್ಘಕಾಲ ಸಂಗ್ರಹಿಸಿಡುವುದು ಸುಲಭವಾಗಬಹುದು ಎಂಬ ಆತಂಕವೂ ವ್ಯಕ್ತವಾಗಿದೆ. ಸದ್ಯಕ್ಕೆ ಇದೊಂದು ಪ್ರಾಯೋಗಿಕ ಹಂತ (Trial Phase) ಮಾತ್ರ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಮುಂದಿನ ದಿನಗಳಲ್ಲಿ ಇದು ಯಾವ ದಿಕ್ಕಿನೆಡೆಗೆ ಸಾಗಲಿದೆ ಎಂಬುದನ್ನು ನೋಡಬೇಕಿದೆ.
Raghavendra N
Written By

Raghavendra N

Content Writer

17 years of experience in Media and Digital Media.Expertise in Scripting, Video Production,Documentary Making and ad Films

Comments

No comments yet.