Global Affairs

ಇಸ್ಲಾಮಿಕ್ ನ್ಯಾಟೋಗೆ ಸೌದಿ - ಪಾಕ್- ಟರ್ಕಿ: Modi - Netanyahu Secret Plan.!

ಇಸ್ಲಾಮಿಕ್ ನ್ಯಾಟೋಗೆ ಸೌದಿ - ಪಾಕ್- ಟರ್ಕಿ: Modi - Netanyahu Secret Plan.!
ಮಧ್ಯಪ್ರಾಚ್ಯ ಹಾಗೂ ಏಷ್ಯಾದ ಪರಿಸ್ಥಿತಿಯನ್ನ ಮತ್ತಷ್ಟು ಹದಗೆಡಿಸಬಹುದಾದ, ಅಲ್ಲಿ ಮತ್ತೊಂದು ಸುತ್ತಿನ ಆತಂಕಕ್ಕೆ ಕಾರಣ ಆಗಬಹುದಾದ ನಾಲ್ಕು ಪ್ರತ್ಯೇಕ ಘಟನೆಗಳು ನಡಿತಾ ಇವೆ ಆದರೆ ಆ ನಾಲ್ಕು ಕೂಡ ಒಂದಕ್ಕೊಂದು ಸಂಬಂಧವನ್ನ ಹೊಂದಿದಂತೆ ಕಾಣ್ತಾ ಇದೆ ಅದರಲ್ಲಿ ಮೊದಲನೆಯದು ಸೌದಿ ಪಾಕಿಸ್ತಾನಗಳ ಜೊತೆ ಟರ್ಕಿ ಸೇರಿಕೊಳ್ಳುತ್ತಿದೆ ಅಲ್ಲಿ ಇಸ್ಲಾಮಿಕ್ ನ್ಯಾಟೋ ತರದ ಸಂಘಟನೆ ಉದಯ ಆಗುವ ಲಕ್ಷಣಗಳು ಕಾಣ್ತಾ ಇವೆ. ಅದಕ್ಕಾಗಿ ಟರ್ಕಿಯ ಅಧ್ಯಕ್ಷ ಮತ್ತು ಪಾಕಿಸ್ತಾನದ ಪ್ರಧಾನಿ ಹಾಗೂ ಸೇನಾ ಮುಖ್ಯಸ್ಥ ಜದ್ದ ತಲುಪಿರುವಾಗಲೇ ಇಸ್ರೇಲಿನ ಪ್ರಧಾನಿ ನೇತನ್ಯಾಹು ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ನಡುವೆ ದೂರವಾಣಿಯಲ್ಲಿ ಒಂದಷ್ಟು ಚರ್ಚೆಗಳಾಗಿವೆ. ಎರಡು ದೇಶಗಳ ನಡುವಿನ ರಕ್ಷಣಾ ಸಂಬಂಧಗಳು ಸ್ಟ್ರಾಟಜಿಕ್ ಪಾರ್ಟ್ನರ್ಶಿಪ್ ಮತ್ತು ಪಶ್ಚಿಮ ಏಷ್ಯಾದ ಪರಿಸ್ಥಿತಿ ಬಗ್ಗೆ ಚರ್ಚೆಗಳು ಮಾಹಿತಿ ವಿನಿಮಯ ಆಗಿದೆ ಅಂತ ಹೇಳ್ತಾ ಇದ್ದಾರೆ. ಇನ್ನು ಇರಾನ್ನಲ್ಲಿ ಅಮೆರಿಕಾದ ವಿರುದ್ಧ ಆಕ್ರೋಶ ಮುಗಿಲು ಮುಟ್ಟುತಾ ಇದೆ. ಅಲ್ಲಿ ಅಮೆರಿಕಾನ ನಾವು ಗೆದ್ದುಬಿಟ್ವಿ ಅನ್ನೋ ತರದ ಪೋಸ್ಟರ್ಗಳು ಬ್ಯಾನರ್ಗಳು ವಾಲ್ ರೈಟಿಂಗ್ಸ್ ಡಿಜಿಟಲ್ ಬೋರ್ಡ್ಗಳ ಮೂಲಕ ಒಂದು ಅಭಿಪ್ರಾಯ ಸೃಷ್ಟಿಸುವ ಕೆಲಸ ನಡೀತಾ ಇದೆ. ಅದರ ಜೊತೆಗೆ ಮತ್ತೊಂದು ಯುದ್ಧ ಇಷ್ಟರಲ್ಲೇ ಶುರುವಾಗುತ್ತೆ ಅನ್ನೋ ತರದ ಗಲಿಬಾಫ್ ಹೇಳಿಕೆ ಅಲ್ಲಿ ಹೊರಬಿದ್ದಿದೆ. ಅದಕ್ಕೆ ಸರಿಯಾಗಿ ಹಾರ್ಮುಜ್ ಹಾಗೂ ಕೆಂಪು ಸಮುದ್ರದಲ್ಲಿ ಹಡಗುಗಳ ಸಂಚಾರ ಕಡಿಮೆ ಆಗ್ತಾ ಹೋಗ್ತಾ ಇದೆ ಇದೆಲ್ಲದರ ನಡುವೆ ಯುಎಈ ಸೇರಿದಂತೆ ಒಂದಷ್ಟು ಇಸ್ಲಾಮಿಕ್ ದೇಶಗಳು ಗಾಜಾ ಶಾಂತಿ ಒಪ್ಪಂದ ಆಗದ ಹಾಗೆ ಇಸ್ರೇಲ್ ಮತ್ತು ನೇತನ್ಯಾಹು ತಡಿತಿದ್ದಾರೆ ಅನ್ನೋ ಆರೋಪಗಳನ್ನ ಮಾಡಿವೆ. ಇವೆಲ್ಲಾ ಪ್ರತ್ಯೇಕ ಘಟನೆಗಳೇ ಆದರೂ ಕೂಡ ನಾವು ಇಲ್ಲಿನ ಬಹುರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇದನ್ನ ಗಮನಿಸಿದಾಗ ಇವು ಒಂದಕ್ಕೊಂದು ಬೆಸೆದುಕೊಂಡ ಹಾಗೆ ಕಾಣುತ್ತದೆ. ಹಾಗಾದರೆ ಈ ಬೆಳವಣಿಗೆಗಳು ಪಶ್ಚಿಮ ಏಷ್ಯಾನ ಎಲ್ಲಿಗೆ ತಗೊಂಡು ಹೋಗುತ್ತವೆ ಮತ್ತು ಇದರಿಂದ ವಿಶೇಷವಾಗಿ ಭಾರತದ ಮೇಲಾಗುವ ಪರಿಣಾಮಗಳೇನು ಅನ್ನೋ ಬಗ್ಗೆ ಒಂದಷ್ಟು ಮಾಹಿತಿ ನೋಡಲು ಈ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.

Also Read: Kim Jong Un : ಕಿಮ್ ಮತ್ತು ನಾಯಿ ಮಾಂಸ,ಇದು ಹುಚ್ಚು ದೊರೆಯ ಆದೇಶ..!
M S Raghavendra
Written By

M S Raghavendra

Cheif Editor

Over 30 Years of Experience in Media. Expertise in Youtube Content Creation, Choosing niche ,Digital Marketing.

Comments

No comments yet.