Global Affairs

ಹೌತಿ ಹೊಡೆತಕ್ಕೆ ಸೌದಿ ಶೇಕ್.. ಶೇಕ್: Saudi Arabia vs Houthis.!

ಹೌತಿ ಹೊಡೆತಕ್ಕೆ ಸೌದಿ ಶೇಕ್.. ಶೇಕ್: Saudi Arabia vs Houthis.!
ಮಂಗಳವಾರ ಸೌದಿ ಅರೇಬಿಯಾದ ನಸೀಬು ಕೆಟ್ಟಿತ್ತು.. ಅಲ್ಲಿನ ಆಯಿಲ್ ದೈತ್ಯ ಅರಾಮ್ಕೋ ನೆಲೆಗಳ ಮೇಲೆ ಯೆಮನ್​ನ ಹೌತಿಗಳೂ ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ 73ರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಅನ್ನೋ ಮಾಹಿತಿ ಸಿಕ್ತಾ ಇದ್ದು, ಅಲ್ಲಿ ಸಾಕಷ್ಟು ಮಂದಿ ಸಾವನ್ನಪ್ಪಿರಬಹುದು ಅನ್ನೋ ಲೆಕ್ಕಚಾರಗಳು ಕೂಡಾ ಇವೆ. ಆದ್ರೆ ಆಧಿಕೃತವಾಗಿ ಈ ಬಗ್ಗೆ ಮಾಹಿತಿ ಹೊರ ಬೀಳದೇ ಇರೋದ್ರಿಂದ ಸದ್ಯಕ್ಕೆ ಅಲ್ಲಿ 73 ಮಂದಿ ಗಾಯಗೊಂಡಿದ್ದಾರಂತೆ. ಇಲ್ಲಿ ಅರಾಮ್ಕೋ ನಿರ್ವಹಿಸ್ತಾ ಇರುವ ಸಾಕಷ್ಟು ತೈಲ ರೀಫೈನರಿಗಳ ಮೇಲೆ ದಾಳಿಗಳು ನಡೆದಿದ್ದು, ಇದು ಸೌದಿಯ ಸಾರ್ವಭೌಮತ್ವದ ಮೇಲಾದ ಬಹುದೊಡ್ಡ ಹಲ್ಲೆ ಅಂತ ಅಲ್ಲಿನ ಮಾಧ್ಯಮಗಳು ಭಾವಿಸ್ತಾ ಇವೆ. ಆದ್ರೆ ಹೌತಿಗಳು ಮಾತ್ರ ಇದು ಕಳೆದ ಸೋಮವಾರ ಸೌದಿ ಅರೇಬಿಯಾ, ಯೆಮನ್​ನ ಮೇಲೆ ನಡೆಸಿದ ವಾಯು ದಾಳಿಗೆ ಪ್ರತೀಕಾರ ಅಂತ ಹೇಳ್ತಾ ಇದ್ದು, ಒಂದು ವೇಳೆ ಸೌದಿ ಅರೇಬಿಯಾ ಏನಾದ್ರು ಈ ದಾಳಿಗಳನ್ನ ಹೀಗೆ ಮುಂದುವರೆಸಿದ್ದೇ ಆದಲ್ಲಿ, ನಾವು ಇನ್ನಷ್ಟು ಭೀಕರ ದಾಳಿಗಳನ್ನ ನಡೆಸ ಬೇಕಾಗುತ್ತೆ ಅನ್ನೋ ಎಚ್ಚರಿಕೆಯನ್ನ ಕೊಡ್ತಾ ಇದ್ದಾರೆ. ಅಷ್ಟೆ ಅಲ್ಲದೇ ಈಗಾಗಲೇ ಯೆಮನ್​ ಸೌದಿ ಅರೇಬಿಯಾದ ಮೇಲೆ ಭಾರೀ ಪ್ರಮಾಣದ ದಾಳಿಯನ್ನ ನಡೆಸೋದಕ್ಕೆ ಬ್ಲೂ ಪ್ರಿಂಟ್ ಸಿದ್ದ ಮಾಡಿಟ್ಟುಕೊಂಡಿದ್ದು, ಅರಾಮ್ಕೋಗೆ ಸಂಬಂಧಿಸಿದ ಸ್ಥಳಗಳೇ ಪ್ರಮುಖ ದಾಳಿ ಕೇಂದ್ರಗಳಾಗಿ ಗುರ್ತಿಸಿಕೊಳ್ತಾ ಇವೆ. ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
Also Read: ಅಲ್ಲಿ ಸುಟ್ಟು ಕರಕಲಾಗಿದ್ದು ಅದೆಷ್ಟು ಕಾಡು?: Indonesia Wild Fire.!
Raghavendra N
Written By

Raghavendra N

Content Writer

17 years of experience in Media and Digital Media.Expertise in Scripting, Video Production,Documentary Making and ad Films

Comments

No comments yet.