ಬ್ರಿಕ್ಸ್ ಸಮಾವೇಶಕ್ಕೆ ಕ್ಸಿಜಿನ್ ಪಿಂಗ್ ಆಗಮನ ಆಗಿದೆ. ಏಳು ವರ್ಷಗಳ ನಂತರ ಚೈನಾ ಆಧ್ಯಕ್ಷರು ಭಾರತಕ್ಕೆ ಬಂದಿದ್ದಾರೆ. 2019ರಲ್ಲಿ ಪ್ರಧಾನಿ ಮೋದಿ ಹಾಗೂ ಕ್ಸಿ ಜಿನ್ ಪಿಂಗ್ ತಮಿಳುನಾಡಿನ ಮಾಮಲ್ಲಪುರಂನಲ್ಲಿ ಭೇಟಿಯಾಗಿದ್ರು. ಆ ಬಳಿಕ ಕ್ಸಿ ಮತ್ತೆ ಭಾರತಕ್ಕೆ ಬಂದಿರಲಿಲ್ಲ. ಚೈನಾ ವೈರಾಣು ಕಾಟ, ಗಲ್ವಾನ್ ಸಂಘರ್ಷಗಳು ನಡೆದ ನಂತ್ರ, ಇದೇ ಮೊದಲ ಬಾರಿಗೆ ಕ್ಸಿ ಭಾರತಕ್ಕೆ ಆಗಮಿಸಿದ್ದಾರೆ. ಈಗಾಗಲೇ ಪುತಿನ್ ಕುಡಾ ಭಾರತಕ್ಕೆ ಬಂದಿದ್ದು ಈ ಬಾರಿ ಜಾಗತಿಕವಾಗಿ ಬಲಿಷ್ಟ ದೇಶಗಳ ನಾಯಕರ ಸಮಾಗಮ ದೆಹಲಿಯಲ್ಲಿ ಆಗ್ತಾ ಇದೆ. ಇದನ್ನ ಪಶ್ಚಿಮ ಬೆರಗುಗಣ್ಣಿನಿಂದ ನೋಡ್ತಾ ಇದೆ. ಇದೇ ವೇಳೆ ಕ್ಸಿ ಮತ್ತು ಪುತಿನ್ ಆಗಮನದ ಜೊತೆಗೆ ಅವ್ರ ಅಧಿಕೃತ ವಾಹನಗಳು ಕೂಡ ಭಾರತಕ್ಕೆ ಬಂದಿರೋದು ಅವುಗಳ ಬಗ್ಗೆ ಹೆಚ್ಚು ಕುತೂಹಲ ಉಂಟಾಗ್ತಾ ಇದೆ. ಈ ಹಿಂದೆ ಅಮೆರಿಕಾದ ಅಧ್ಯಕ್ಷ 2020ರಲ್ಲಿ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಭಾಗಿಯಾಗೋದಕ್ಕೆ ಬಂದಿದ್ದಾಗ ಅವ್ರ ಅಧಿಕೃತ ವಾಹನ ದಿ ಬೀಸ್ಟ್ ಭಾರತಕ್ಕೆ ಬಂದಿತ್ತು. ಈಗ ಭಾರತಕ್ಕೆ ಕ್ಸಿ ಅವ್ರ ರೆಡ್ ಪ್ಲಾಗ್ ನ ಆಗಮನ ಆಗಿದ್ದು ಆ ಕಾರ್ ಹೆಚ್ಚು ಗಮನವನ್ನ ಸೆಳೀತಿದೆ. ಹಾಗಾದ್ರೆ ಆ ಕಾರ್ನಲ್ಲಿ ಏನೆಲ್ಲಾ ಇದೆ.? ಚೈನಾ ಅಧ್ಯಕ್ಷರಿಗೆ ಭಾರತ ಕೊಡೊ ಕಾರ್ ಮೇಲೆ ನಂಬಿಕೆ ಇರೋದಿಲ್ಲವಾ, ಈ ಕಾರ್ ಕೇವಲ ಭಾರತಕ್ಕೆ ಮಾತ್ರ ಬಂದಿದ್ಯಾ ಅಥವಾ ಈ ಹಿಂದೆ ಬೇರೆ ಬೇರೆ ರಾಷ್ಟ್ರಗಳಿಗೂ ಇದನ್ನ
ಕೊಂಡೊಯ್ಯಲಾಗಿದ್ಯಾ ಅನ್ನೋದ್ರ ಬಗ್ಗೆ ಒಂದಷ್ಟು ಮಾಹಿತಿಯನ್ನ ತಿಳಿದುಕೊಳ್ಳೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Also Read: ಇದೇನಾಗ್ತಿದೆ ಕಾಶ್ಮೀರದಲ್ಲಿ..? What's Happening in Kashmir..?
ಕ್ಸಿ-ಪುತಿನ್ ಕಾರ್ ರಹಸ್ಯ: BRICS 2026
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.